Prachi Nigam: ಮೀಸೆ ಕಾರಣಕ್ಕೆ ಟ್ರೋಲ್ ಆಗಿದ್ದ ಪ್ರಾಚಿ ನಿಗಮ್ ಹುಡುಗಿ 12ನೇ ತರಗತಿಯಲ್ಲಿ ಭರ್ಜರಿ ಸಾಧನೆ
Prachi Nigam: ಮುಖದ ಮೇಲಿನ ಕೂದಲಿನ ಕಾರಣಕ್ಕೆ (ಮೀಸೆ ರೂಪದಲ್ಲಿ ಕೂದಲು ಬೆಳೆದಿದೆ) ಎನ್ನುವ ಕಾರಣಕ್ಕೆ ಟ್ರೋಲ್‌ಗೆ ಗುರಿಯಾಗಿದ್ದ ಪ್ರಾಚಿ ನಿಗಮ್ ಇದೀಗ ಮತ್ತೊಂದು ಮಹತ್ವದ ಸಾಧನೆ ಮಾಡಿದ್ದಾಳೆ. ಟ್ರೋಲ್ ಮಾಡಿದವರಿಗೆ ಈ ಹುಡುಗಿ ಎರಡು ವರ್ಷಗಳ ನಂತರ ದಿಟ್ಟವಾದ ಉತ್ತರವನ್ನೇ ನೀಡಿದ್ದಾಳೆ. ಪ್ರಾಚಿ ನಿಗಮ್ 10ನೇ ತರಗತಿಯ ಯುಪಿ ಬೋರ್ಡ್ ಟಾಪರ್ ಆಗಿದ್ದಾಗ ಸುದ್ದಿಯಾಗಿದ್ದರು. ಆಗ ಇವರನ್ನು ಮೀಸೆಯ ಕಾರಣಕ್ಕೆ ಕೆಲವರು ಟ್ರೋಲ್ ಮಾಡಿದ್ದರು.
ಇದೀಗ 12ನೇ ತರಗತಿಯಲ್ಲಿಯೂ ಅತ್ಯುತ್ತಮ ಅಂಕ ಗಳಿಸುವಲ್ಲಿ ಪ್ರಾಚಿ ನಿಗಮ್ ಯಶಸ್ವಿಯಾಗಿದ್ದಾರೆ. ಈ ಮೂಲಕ ಟ್ರೋಲ್ ಮಾಡಿದವರಿಗೆ ಸರಿಯಾದ ತಿರುಗೇಟು ನೀಡಿದ್ದಾರೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ವಿದ್ಯಾರ್ಥಿನಿ ಪ್ರಾಚಿ ನಿಗಮ್ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ 91.20% ಅಂಕಗಳನ್ನು ಗಳಿಸಿದ್ದಾರೆ.

ಪ್ರಾಚಿ ನಿಗಮ್ ಅವರು ಪಿಯುಸಿ ಹಂತದಲ್ಲಿ ಗಣಿತದಲ್ಲಿ 99, ಹಿಂದಿಯಲ್ಲಿ 96, ರಸಾಯನಶಾಸ್ತ್ರದಲ್ಲಿ 95 ಮತ್ತು ಭೌತಶಾಸ್ತ್ರದಲ್ಲಿ 93 ಅಂಕಗಳನ್ನು ಗಳಿಸಿದ್ದಾಳೆ. ಪ್ರಾಚಿ 90-ಪ್ಲಸ್ ಪಡೆಯದ ಏಕೈಕ ವಿಷಯವೆಂದರೆ ಇಂಗ್ಲಿಷ್. ಇಂಗ್ಲಿಷ್‌ನಲ್ಲಿ ಆಕೆಗೆ 73 ಅಂಕಗಳು ಬಂದಿವೆ. ಯುಪಿ ಬೋರ್ಡ್ ವಿದ್ಯಾರ್ಥಿನಿ ಜೆಇಇ ತಯಾರಿಯ ಮೇಲೆ ನನ್ನ ಗಮನವಿತ್ತು. ಇದೇ ಕಾರನಕ್ಕೆ ಆಕೆಗೆ ಇಂಗ್ಲಿಷ್ ವಿಷಯದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
Prachi Nigam: 10 ನೇ ತರಗತಿಯಲ್ಲಿ ಟಾಪರ್ - ಟ್ರೋಲಿಂಗ್
ಪ್ರಾಚಿ ನಿಗಮ್ ಅವರು 2024ರಲ್ಲಿ 10 ನೇ ತರಗತಿಯಲ್ಲಿ ಟಾಪರ್ ಆಗಿದ್ದರು. ಪ್ರಾಚಿ ನಿಗಮ್ ಎಂಜಿನಿಯರ್ ಆಗಲು ಮತ್ತು ಐಐಟಿಯಲ್ಲಿ ಅಧ್ಯಯನ ಮಾಡಲು ಬಯಸುತ್ತೇನೆ ಎಂದು ಹೇಳಿದ್ದರು. 10 ನೇ ತರಗತಿಯಲ್ಲಿ ಅವರು 591/600 ಅಂಕಗಳನ್ನು ಗಳಿಸಿದ್ದರು. ಆ ಸಮಯದಲ್ಲಿ ಪ್ರಾಚಿ ಅವರ ಫೋಟೋ ವೈರಲ್ ಆಗಿತ್ತು. ಅಲ್ಲದೆ ಅವಳ ಮುಖದ ಕೂದಲಿನಿಂದ ಟ್ರೋಲ್‌ಗೆ ಗುರಿಯಾಗಿದ್ದರು. ಆ ಸಮಯದಲ್ಲಿ ನಿಗಮ್ ಅವರನ್ನು ಇಂಟರ್ನೆಟ್‌ನಲ್ಲಿ ಕೆಲವರು ಟ್ರೋಲ್ ಸಹ ಮಾಡಿದ್ದರು. ಇದೀಗ ಪ್ರಾಚಿ ನಿಗಮ್ ಅವರು ಆ ಟ್ರೋಲ್‌ಗಳು ಹಾಗೂ ಕೆಲವರ ದ್ವೇಷಗಳಿಗೆ ಸಾಧನೆಯ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಾರೆ.
ಆನ್‌ಲೈನ್ ಟ್ರೋಲಿಂಗ್‌ಗೆ ಅವರು ಗುರಿಯಾದ ಮೇಲೆ - ಯುಪಿ ಫಲಿತಾಂಶಗಳು ಪ್ರಕಟವಾದಾಗ, ನನ್ನ ಫೋಟೋ ವೈರಲ್ ಆಯಿತು; ಅನೇಕ ಜನರು ನನ್ನನ್ನು ಟ್ರೋಲ್ ಮಾಡಿದರು. ಅದೇ ಸಮಯದಲ್ಲಿ, ನನ್ನನ್ನು ಬೆಂಬಲಿಸಿದವರು ಇದ್ದರು. ನಾನು ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ. ಆದಾಗ್ಯೂ, ದೇವರು ನನ್ನನ್ನು ಈ ರೀತಿ ಸೃಷ್ಟಿಸಿದ್ದಾನೆ, ನಾನು ನನ್ನ ದೇಹದ ಸ್ವರೂಪವನ್ನು ಒಪ್ಪುತ್ತೇನೆ. ವ್ಯತ್ಯಾಸವಿದೆ ಎಂದು ಭಾವಿಸುವವರಿಗೆ, ಅದು ಅಪ್ರಸ್ತುತವಾಗುತ್ತದೆ. ಚಾಣಕ್ಯನನ್ನು ಸಹ ಟ್ರೋಲ್ ಮಾಡಲಾಯಿತು ಅವರು ಅದಕ್ಕೆಲ್ಲವೂ ಕಿವಿಗೊಟ್ಟಿರಲಿಲ್ಲ ಎಂದು ಪ್ರಾಚಿ ನಿಗಮ್ ಅಭಿಪ್ರಾಯಪಟ್ಟಿದ್ದಾರೆ.
ನನಗೆ ಕೆಲವು ವಿಷಯಗಳಲ್ಲಿ ಕಡಿಮೆ ಅಂಕ ಗಳಿಸಿದ್ದರೆ ಅಥವಾ ಟಾಪ್ ಬರದೆ ಇದ್ದರೆ, ನಾನು ಪ್ರಸಿದ್ಧಿಯಾಗುತ್ತಿರಲಿಲ್ಲ. ಬಹುಶಃ ಅದು ಉತ್ತಮವಾಗಿರುತ್ತಿತ್ತು. ನಾನು ಬಹಳ ಸಮಯದಿಂದ ಈ ಟ್ರೋಲ್‌ಗಳನ್ನು ಎದುರಿಸುತ್ತಿದ್ದೇನೆ. ಪರಿಸ್ಥಿತಿಯ ಬಗ್ಗೆ ನಾನು ತುಂಬಾ ತಲೆಕೆಡಿಸಿಕೊಂಡಿಲ್ಲ. ಜನರು ಕೂದಲಿನ ಹುಡುಗಿಯರನ್ನು ನೋಡಿದರೆ ವಿಚಿತ್ರವಾಗಿ ಭಾವಿಸುತ್ತಾರೆ ಏಕೆಂದರೆ ಅವರು ಇದನ್ನು ಎಲ್ಲಿಯೂ ಮೊದಲು ನೋಡಿರುವುದಿಲ್ಲ ಎಂದು ಬಿಬಿಸಿ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.













Click it and Unblock the Notifications