ಉಪರಾಷ್ಟ್ರಪತಿ ಚುನಾವಣೆ: ನಾಮಪತ್ರ ಸಲ್ಲಿಕೆಗೆ ಇಂದು ಅಧಿಸೂಚನೆ
ನವದೆಹಲಿ ಜು.5: ಆಗಸ್ಟ್ 6ರಂದು ನಿಗದಿ ಆಗಿರುವ ಉಪ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕುರಿತು ಮಂಗಳವಾರ ಕೇಂದ್ರ ಚುನಾವಣೆ ಆಯೋಗ ಅಧಿಸೂಚನೆ ಹೊರಡಿಸಿದೆ. ಜು.19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಎಂದು ಅಧಿಸೂಚನೆ ತಿಳಿಸಿದೆ.
ಪ್ರಸ್ತುತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ರಂದು ಕೊನೆಗೊಳ್ಳಲಿದೆ. ಈ ಸಂಬಂಧ ಆಗಸ್ಟ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಅಂದೆ ಮತ ಎಣಿಕೆ ಪ್ರಕ್ರಿಯೆ ಸಹ ಜರುಗಲಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿಪಡಿಸಿ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ಜು.19 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಜು.20ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ಜು.22ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಬಿಜೆಪಿಗೆ ಸ್ಪಷ್ಟ ಬಹುಮತ ಸಾಧ್ಯತೆ
ಈ ಉಪ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸ್ಪಷ್ಟ ಬಹುಮತ ದೊರೆಯುವ ಸಾಧ್ಯತೆ ಇದೆ. ನಾಮ ನಿರ್ದೇಶಿತ ಸದಸ್ಯರು, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಆದರೆ ಈವರೆಗೂ ಕಾಂಗ್ರೆಸ್, ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು ಮುಂಬರಲಿರುವ ಉಪ ಚುನಾವಣೆಯ ಅಭ್ಯರ್ಥಿಗಳನ್ನು ಹೆಸರನ್ನು ಬಹಿರಂಗಪಡಿಸಿಲ್ಲ. ಈವಾರದಲ್ಲಿ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರು ಬಹಿರಂಗ ಪಡಿಸಬಹುದು ಎನ್ನಲಾಗಿದೆ.
ಉಪಾಧ್ಯಕ್ಷರ ಚುನಾವಣೆಯಲ್ಲಿ ಉಭಯ ಸದನಗಳ ಒಟ್ಟು 788 ಸದಸ್ಯರು ಒಳಗೊಂಡಿದೆ. ಎಲ್ಲಾ ಮತದಾರರು ಸಂಸತ್ತಿನ ಸದಸ್ಯರು ಆಗಿರುವುದರಿಂದ, ಪ್ರತಿ ಸಂಸದರ ಮತದ ಮೌಲ್ಯವು ಒಂದೇ ಆಗಿರುತ್ತದೆ ಎಂದು ಈ ಹಿಂದೆಯೇ ಚುನಾವಣೆ ಆಯೋಗ ಸ್ಪಷ್ಟಪಡಿಸಿದೆ. ಒಂದೇ ವರ್ಗಾವಣೆ ಮತದ ಮೂಲಕವೇ ಪ್ರಾತಿನಿಧ್ಯತಾ ವ್ಯವಸ್ಥೆಗನುಗುಣವಾಗಿ ಚುನಾವಣೆ ನಡೆಸಲಾಗುವುದು. ಮತದಾನವು ಕೂಡ ರಹಸ್ಯ ಮತದಾನದ ಮೂಲಕ ನಡೆಸಲಾಗುವುದು ಎಂದು ಆಯೋಗ ತಿಳಿಸಿದೆ.

ಆಯೋಗದ ಎಚ್ಚರಿಕೆ
ಪ್ರಸ್ತುತ ಚುನಾವಣೆಯಲ್ಲಿ ಮುಕ್ತ ಮತದಾನದ ಪರಿಕಲ್ಪನೆಗೆ ಅವಕಾಶ ನೀಡಿಲ್ಲ. ಅಧ್ಯಕ್ಷೀಯ ಹಾಗೂ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಇತರರಿಗೆ ಮತಪತ್ರ ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೇ ಮುಖ್ಯವಾಗಿ ರಾಜಕೀಯ ಪಕ್ಷಗಳು ಈ ವೇಳೆ ತಮ್ಮ ಸಂಸದರಿಗೆ ವಿಪ್ ಜಾರಿ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಉಪ ರಾಷ್ಟ್ರಪತಿ ಚುನಾವಣಾ ಒಬ್ಬ ಅಭ್ಯರ್ಥಿಯು ಗರಿಷ್ಠ ನಾಮಪತ್ರಗಳನ್ನು ಸಲ್ಲಿಕೆ ಮಾಡಬಹುದು. 15,000ರೂ. ಹಣವನ್ನು ಚುನಾವಣೆಯ ಭದ್ರತಾ ಠೇವಣಿ ರೂಪದಲ್ಲಿ ಇಡಬೇಕು ಎನ್ನಲಾಗಿದೆ.












Click it and Unblock the Notifications