ದೆಹಲಿ ವಿವಿ ಚುನಾವಣೆಯಲ್ಲಿ ಎನ್‌ಎಸ್‌ಯುಐ ಜಯಭೇರಿ, ಮುಗ್ಗರಿಸಿದ ಎಬಿವಿಪಿ
ನವದೆಹಲಿ, ಸೆಪ್ಟೆಂಬರ್ 13: ಪ್ರತಿಷ್ಠಿತ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆ ಎನ್‌ಎಸ್‌ಯುಐ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳನ್ನು ಗೆದ್ದು ಎನ್‌ಎಸ್‌ಯುಐ ಬಿಜೆಪಿ ಪಕ್ಷದ ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಭಾರೀ ಹೊಡೆತ ನೀಡಿದೆ. ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದಿದ್ದ ಎನ್‌ಎಸ್‌ಯುಐನ ರಾಕಿ ತುಶೀದ್ ಭರ್ಜರಿ ಜಯ ಸಾಧಿಸಿದ್ದಾರೆ.

2016ರಲ್ಲಿ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸಹ ಕಾರ್ಯದರ್ಶಿ ಹುದ್ದೆಯನ್ನು ಮಾತ್ರ ಎನ್‌ಎಸ್‌ಯುಐ ಗೆದ್ದಿತ್ತು. ಮೊದಲ ಮೂರು ಸ್ಥಾನಗಳನ್ನು ಎಬಿವಿಪಿ ಗೆದ್ದಿತ್ತು.
ಆದರೆ ಈ ಬಾರಿ ಎನ್‌ಎಸ್‌ಯುಐ ಮೊದಲೆರೆಡು ಸ್ಥಾನಗಳನ್ನು ಗೆದ್ದಿದ್ದರೆ, ಎಬಿವಿಪಿ ಕಾರ್ಯದರ್ಶಿ ಮತ್ತು ಸಹ ಕಾರ್ಯದರ್ಶಿ ಹುದ್ದೆಯನ್ನು ಮಾತ್ರ ಗೆಲ್ಲುವಲ್ಲಿ ಸಫಲವಾಗಿದೆ. ಈ ಮೂಲಕ ಎಬಿವಿಪಿ ಭಾರೀ ಮುಖಭಂಗಕ್ಕೊಳಗಾಗಿದೆ.

ಇನ್ನು ಪಡೆದ ಮತಗಳು ಈ ಕೆಳಗಿನಂತಿವೆ,
ಅಧ್ಯಕ್ಷ: ಎನ್‌ಎಸ್‌ಯುಐ - 16,299 | ಎಬಿವಿಪಿ 14,709
ಉಪಾಧ್ಯಕ್ಷ: ಎನ್‌ಎಸ್‌ಯುಐ - 16,431 | ಎಬಿವಿಪಿ 16,256
ಕಾರ್ಯದರ್ಶಿ: ಎಬಿವಿಪಿ - 17,156 | ಎನ್‌ಎಸ್‌ಯುಐ - 14,532
ಸಹ ಕಾರ್ಯದರ್ಶಿ : ಎಬಿವಿಪಿ ಈ ಸ್ಥಾನವನ್ನು ಗೆದ್ದಿತ್ತು, ಆದರೆ ಮರು ಮತೆಣಿಕೆಗೆ ಆಗ್ರಹಿಸಿರುವುದರಿಂದ ಮರು ಮತ ಎಣಿಕೆ ನಡೆಯುತ್ತಿದೆ.












Click it and Unblock the Notifications