ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking:46 ಜನರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯದ ಇಬ್ಬರು ಆಯ್ಕೆ

|
Google Oneindia Kannada News

ನವದೆಹಲಿ, ಆಗಸ್ಟ್ 25: ದೇಶದ 46 ಶಿಕ್ಷಕರು ಈ ಬಾರಿಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಿಕ್ಷಕರಿಗೆ 2022 ರ ರಾಷ್ಟ್ರೀಯ ಪ್ರಶಸ್ತಿಗಳನ್ನು ಸೆಪ್ಟೆಂಬರ್ 5 ರಂದು ಪ್ರದಾನ ಮಾಡಲಿದ್ದಾರೆ.

46 ಶಿಕ್ಷಕರಿಗೆ ಸೆಪ್ಟೆಂಬರ್ 5 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಶಿಕ್ಷಕರಿಗೆ 2022 ರ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. 46 ಶಿಕ್ಷಕರಲ್ಲಿ, ಇಬ್ಬರು ಶಿಕ್ಷಕರಿಗೆ ವಿಕಲಚೇತನ ಶಿಕ್ಷಕರಿಗೆ ವಿಶೇಷ ವರ್ಗದ ಅಡಿಯಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಅದರಲ್ಲಿ ಒಬ್ಬರು ಉತ್ತರಾಖಂಡ್ ಮತ್ತು ಇನ್ನೊಬ್ಬರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ ಆಯ್ಕೆಯಾಗಿದ್ದಾರೆ.

ಬಿಬಿಎಂಪಿಯಿಂದ ಬಡ ಮಕ್ಕಳಿಗಾಗಿ ಟ್ಯೂಷನ್‌ ಸೆಂಟರ್; ಯಾವಾಗ, ಎಲ್ಲೆಲ್ಲಿ ತಿಳಿಯಿರಿಬಿಬಿಎಂಪಿಯಿಂದ ಬಡ ಮಕ್ಕಳಿಗಾಗಿ ಟ್ಯೂಷನ್‌ ಸೆಂಟರ್; ಯಾವಾಗ, ಎಲ್ಲೆಲ್ಲಿ ತಿಳಿಯಿರಿ

ರಾಷ್ಟ್ರೀಯ ಪ್ರಶಸ್ತಿ ಪ್ರದಾನ 2022ರ ಕಾರ್ಯಕ್ರಮ ಶಿಕ್ಷಣ ಸಚಿವಾಲಯದ ದೂರದರ್ಶನ ಮತ್ತು ಸ್ವಯಂ ಪ್ರಭಾ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗುತ್ತದೆ ಮತ್ತು webcast.gov.in/moe ನಲ್ಲಿ ನೇರ ಪ್ರಸಾರವಾಗುತ್ತದೆ.

Droupadi Murmu will confer the National Awards to 46 Teachers

"ದೇಶದಲ್ಲಿ ಶಿಕ್ಷಕರ ಅನನ್ಯ ಕೊಡುಗೆಯನ್ನು ಸ್ಮರಿಸಲು ಮತ್ತು ತಮ್ಮ ಬದ್ಧತೆ ಮತ್ತು ಕೆಲಸದ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮಾತ್ರವಲ್ಲದೆ, ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿದ ಶಿಕ್ಷಕರನ್ನು ಗೌರವಿಸಲು ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ" ಎಂದು ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿದೆ.

ರಾಹುಲ್ ಗಾಂಧಿಯೇ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಎಂದ ಅಶೋಕ್ ಗೆಹ್ಲೋಟ್! ರಾಹುಲ್ ಗಾಂಧಿಯೇ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಎಂದ ಅಶೋಕ್ ಗೆಹ್ಲೋಟ್!

ಕಠಿಣ ಪಾರದರ್ಶಕ ಮತ್ತು ಆನ್‌ಲೈನ್‌ನ ಮೂರು ಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ ಉತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ. ದೇಶದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯವು ಪ್ರತಿ ವರ್ಷ ಶಿಕ್ಷಕರ ದಿನದಂದು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಶಿಕ್ಷಣ ಸಚಿವಾಲಯ ಹೊರಡಿಸಿರುವ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ರಾಜ್ಯದ ಇಬ್ಬರು ಶಿಕ್ಷಕರು ಆಯ್ಕೆಯಾಗಿದ್ದಾರೆ. ತುಮಕೂರು ಜಿಲ್ಲೆಯ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ಜಿ ಪೊನ್‌ಶಂಕರಿ ಮತ್ತು ಚಿತ್ರದುರ್ಗ ಜಿಲ್ಲೆಯ ಅಮೃತಾಪುರದ ಜಿಎಲ್‌ಪಿಎಸ್ ಶಾಲೆಯ ಶಿಕ್ಷಕ ಉಮೇಶ್ ಟಿ ಪಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹರ್ಯಾಣದ ಸೋನಿಪತ್ ಜಿಲ್ಲೆಯ ಎಸ್ ಸೆಕ್ ಸ್ಕೂಲ್ ಬರ್ವಾಸ್ನಿಯ ಶಿಕ್ಷಕರಾದ ಅಂಜು ದಹಿಯಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆ ಮತ್ತು ಶಿಮ್ಲಾ ಜಿಲ್ಲೆಯ ಜಿಪಿಎಸ್ ಶಾಲೆಯ ಜೆಬಿಟಿ ಪ್ರಭಾರಿ ಯುಧವೀರ್ ಮತ್ತು ಜಿಎಸ್ಎಸ್ಎಸ್ ಧರೋಗ್ರಾ ಶಾಲೆಯ ಶಿಕ್ಷಕ ವೀರೇಂದ್ರ ಕುಮಾರ್ ಇಬ್ಬರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪಂಜಾಬ್‌ನ ಬರ್ನಾಲಾ ಮತ್ತು ಮಾನ್ಸಾ ಜಿಲ್ಲೆಯ ಇಬ್ಬರು ಶಿಕ್ಷಕರಾದ ಹರಪ್ರೀತ್ ಸಿಂಗ್ ಮತ್ತು ಅರುಣ್ ಕುಮಾರ್ ಗಾರ್ಗ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ವಾಯುವ್ಯ ದೆಹಲಿಯ ನಿಗಮ್ ಪ್ರತಿಭಾ ವಿದ್ಯಾಲಯದ ಶಿಕ್ಷಕಿ ರಜನಿ ಶರ್ಮಾ, ಉತ್ತರಾಖಂಡದ ಪ್ರತಾಪುರ್-ಚಾಕಲುವಾ ಜಿಲ್ಲೆಯ SDS GIC ಶಾಲೆಯ ಪ್ರಾಂಶುಪಾಲರಾದ ಕೌಸ್ತುಭ್ ಚಂದ್ರ ಜೋಶಿ, ಚಂಡೀಗಢದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾದ ಸೀಮಾ ರಾಣಿ, ದಕ್ಷಿಣ ಗೋವಾದ ಮೊರ್ಪಿರ್ಲಾ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲರಾದ ಮರಿಯಾ ಮುರೇನಾ ಮಿರಾಂಡಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಇವರ ಜೊತೆಗೆ ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ಜಿಎಸ್ಎಸ್ಎಸ್ ಶಾಲೆಯ ಶಿಕ್ಷಕಿ ಸುನೀತಾ, ಛತ್ತೀಸ್‌ಗಢದ ರಾಯಪುರ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ ಪಿ ಸಖಾರಾಮ್ ದುಬೆಯ ಸಹಾಯಕ ಶಿಕ್ಷಕಿ ಮಮತಾ ಅಹರ್ ಸೇರಿದಂತೆ ಒಟ್ಟು 46 ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಿಗೆ ಸೆಪ್ಟೆಂಬರ್ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ನೀಡಲಿದ್ದಾರೆ.

English summary
President Droupadi Murmu will confer the National Awards to 46 Teachers On September 5. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X