ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸಿಂಗ್ ಅವರು ಭಾರತದ ಆರ್ಥಿಕತೆ ಮೇಲಿನ ವಿಶ್ವಾಸಾರ್ಹತೆ ಹೋಲಿಸಲಿ'

|
Google Oneindia Kannada News

ನವದೆಹಲಿ, ನವೆಂಬರ್ 7: ಅಪನಗದೀಕರಣ ಘೋಷಣೆಯು ಭಾರತದ ಅರ್ಥ ವ್ಯವಸ್ಥೆಯಲ್ಲೇ ಮಹತ್ವದ ಕ್ಷಣ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಅಪನಗದೀಕರಣದಿಂದ ಚೀನಾ ವಸ್ತುಗಳ ಆಮದು ಹೆಚ್ಚಳ: ಮನಮೋಹನ್ ಸಿಂಗ್ಅಪನಗದೀಕರಣದಿಂದ ಚೀನಾ ವಸ್ತುಗಳ ಆಮದು ಹೆಚ್ಚಳ: ಮನಮೋಹನ್ ಸಿಂಗ್

ದೆಹಲಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪನಗದೀಕರಣ ಅನ್ನೋದು ಒಂದು ಪರಿಹಾರ ಅಷ್ಟೇ. ಇದರಿಂದಲೇ ಎಲ್ಲ ಸಮಸ್ಯೆ ಪರಿಹಾರ ಆಗಿಬಿಡುತ್ತದೆ ಅಂತಲ್ಲ. ಆದರೆ ಇದರಿಂದಾಗಿ ಉದ್ದೇಶ ಬದಲಾಗಬೇಕು ಎಂದರು.

Dr Singh has to do is to compare global credibility of Indian economy pre 2014 and post 2014

ಅಪನಗದೀಕರಣದಿಂದಾಗಿ ಭಯೋತ್ಪಾದನೆ ಕೃತ್ಯಗಳಿಗೆ ಹಣ ಸಿಗದಂತಾಗಿದೆ. ಶೆಲ್ ಕಂಪನಿಗಳನ್ನು ಸುಲಭವಾಗಿ ಗುರುತಿಸಲಾಗಿದೆ. ಕಪ್ಪುಹಣ ವಿರೋಧಿ ನಿರ್ಧಾರ ನೈತಿಕವಾದ ನಡೆ. 2ಜಿ, ಕಾಮನ್ ವೆಲ್ತ್ ಗೇಮ್, ಕಲ್ಲಿದಲು ಹಗರಣ.. ಹೀಗೆ ಲೂಟಿ ಆಗ್ತಾ ಇರುತ್ತದೆ ಎಂದು ಅವರು ಕಾಂಗ್ರೆಸ್ ಗೆ ತಿವಿದಿದ್ದಾರೆ.

ಜಾಗತಿಕ ಮಟ್ಟದಲ್ಲಿ 2014ಕ್ಕೂ ಮುನ್ನ ಹಾಗೂ ಆ ನಂತರ ಭಾರತದ ಆರ್ಥಿಕತೆ ಬಗ್ಗೆ ವಿಶ್ವಾಸಾರ್ಹತೆ ಹೇಗೆ ಬದಲಾಗಿದೆ ಎಂಬ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹೋಲಿಕೆ ಮಾಡಲಿ ಎಂದು ಹೇಳಿದ್ದಾರೆ.

ಅಪನಗದೀಕರಣದ ಸಕಾರಾತ್ಮಕ ಸಂಗತಿಗಳುಅಪನಗದೀಕರಣದ ಸಕಾರಾತ್ಮಕ ಸಂಗತಿಗಳು

ಕಾಂಗ್ರೆಸ್ ನ ಮುಖ್ಯ ಧ್ಯೇಯ ಒಂದು ಕುಟುಂಬಕ್ಕೆ ಸೇವೆ ಒದಗಿಸುವುದು. ಆದರೆ ಬಿಜೆಪಿಯ ಗುರಿ ದೇಶದ ಜನರಿಗೆ ಸೇವೆ ಮಾಡುವುದು ಎಂದು ಜೇಟ್ಲಿ ಹೇಳಿದ್ದಾರೆ.

ಪನಾಮಾ ಪೇಪರ್ಸ್ ಬಗ್ಗೆ ತನಿಖೆ ನಡೆಯುತ್ತಿದೆ. ಇನ್ನು ಪ್ಯಾರಡೈಸ್ ಪೇಪರ್ಸ್ ಬಗ್ಗೆ ಕೂಡ ತನಿಖೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.

English summary
Dr Manmohan Singh has to do is to compare global credibility of Indian economy pre 2014 and post 2014, said by central finance minister Arun Jaitley in a press meet at Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X