24X7 ವಿದ್ಯುತ್ ಪೂರೈಕೆಗೆ ಹೇಗೆ ಅನುದಾನ ಸಿಗುತ್ತದೆ?

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ನವದೆಹಲಿ, ಏಪ್ರಿಲ್ 20: ಇಪ್ಪತ್ತೈದು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶವು ಉಜ್ವಲ್ ಡಿಸ್ಕಾಂ ಅಶ್ಯೂರೆನ್ಸ್ ಯೋಜನಾ (ಉದಯ್)ದಲ್ಲಿ ಪಾಲ್ಗೊಳ್ಳಲು ಕೇಂದ್ರ ಸರಕಾರದ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತದ ಎಲ್ಲ ವಿದ್ಯುತ್ ವಿತರಣೆ ಕಂಪೆನಿಗಳು 'ಉದಯ್' ಅಡಿಯಲ್ಲೇ ಬರುತ್ತವೆ.

2.09 ಲಕ್ಷ ಕೋಟಿಯ ರಾಜ್ಯ ಬಾಂಡ್, ಡಿಸ್ಕಾಂನ 0.24 ಲಕ್ಷ ಕೋಟಿ ರುಪಾಯಿ ಡಿಸ್ಕಾಂ ಬಾಂಡ್ ವಿತರಿಸಲಾಗುತ್ತಿದೆ. ವಿದ್ಯುತ್ ವಿತರಣೆಯಲ್ಲಿ ಇರುವ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ಸರಕಾರವೇ ಕೈಗೊಂಡಿರುವ ಯೋಜನೆ 'ಉದಯ್'. ವಿದ್ಯುತ್ ಸಚಿವಾಲಯದ ಐಎಫ್ ಎಸ್ ಜಂಟಿ ನಿರ್ದೇಶಕ ಡಾ.ಎ.ಕೆ.ವರ್ಮಾ ಪ್ರಕಾರ, 2030ರ ವೇಳೆಗೆ ವಿದ್ಯುತ್ ವಲಯಕ್ಕೆ ಒಂದು ಟ್ರಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಹರಿದುಬರಲಿದೆ.[ಬರಗಾಲದಲ್ಲಿ ವಿದ್ಯುತ್ ದರ ಏರಿಕೆ ಎಷ್ಟು ಸರಿ?: ಶೆಟ್ಟರ್]

Do you know how the power ministry got funds for 24x7 power supply?

ಐಇಎ ಅಂದಾಜಿನ ಪ್ರಕಾರ 2015ರಿಂದ 2040ರ ಮಧ್ಯೆ 845 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಮೊತ್ತವನ್ನು ವಿದ್ಯುತ್ ಪ್ರಸರಣ ಮತ್ತು ವಿತರಣೆಯ ಜಾಲಕ್ಕಾಗಿ ಹೂಡಲಾಗುವುದು.

ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು
* ಸ್ಮಾರ್ಟ್ ಮಾರ್ಕೆಟಿಂಗ್, ವಿತರಣೆ ಆಟೋಮೇಷನ್, ಬ್ಯಾಟರಿ ಸ್ಟೋರೇಜ್ ಮತ್ತು ಇತರೆ ಗ್ರಿಡ್ ಮಾರುಕಟ್ಟೆ ವಿಭಾಗಗಳಲ್ಲಿ ಮುಂದಿನ ದಶಕದಲ್ಲಿ 2.9 ಲಕ್ಷ ಕೋಟಿ ಹೂಡಿಕೆ ಅವಕಾಶ
* ಸೌರಶಕ್ತಿ ಬಳಕೆ ಸಾಮರ್ಥ್ಯವನ್ನು 1 ಲಕ್ಷ ಮೆಗಾವಾಟ್ ಗೆ ವೃದ್ಧಿಸಲು ಮೆಗಾ ವಾಟ್ ಗೆ ತಲಾ 5.5 ಕೋಟಿಯಂತೆ 5.5 ಲಕ್ಷ ಕೋಟಿ ಬಂಡವಾಳ ಹೂಡಿಕೆ
* ಉಷ್ಣ ವಿದ್ಯುತ್ ವಲಯದ 45 ಸಾವಿರ ಮೆಗಾವಾಟ್ ಸಾಮರ್ಥ್ಯಕ್ಕಾಗಿ 4.4 ಲಕ್ಷ ಕೋಟಿ ರುಪಾಯಿ[ದೆಹಲಿ ವಿದ್ಯುತ್ ಸಬ್ಸಿಡಿಯಿಂದ ಆಮ್ ಆದ್ಮಿಗಿಂತ ಅಮಿರ್ ಗೆ ಲಾಭ!]

ಹೊಸದಾಗಿ ಹರಿದು ಬರುವ ಬಂಡವಾಳವನ್ನು ವಿತರಣೆಗಾಗಿ ಹೂಡಿಕೆ ಮಾಡಲಾಗುತ್ತದೆ. ಉದಾಹರಣೆಗೆ ಸೋಲಾರ್ ರೂಫ್ ಟಾಪ್, ಫ್ರಾಂಚೈಸಿ, ಡಿಎಸ್ ಎಂ, ಸ್ಮಾರ್ಟ್ ಮೀಟರ್ ಇತ್ಯಾದಿಗಾಗಿ. ಉದಯ್ ಮೂಲಕ ಡಿಸ್ಕಾಂಗಳಲ್ಲಿ ಬದಲಾವಣೆ ಆಗಲಿದ್ದು, ಇದರಿಂದ ವಿದ್ಯುತ್ ವಲಯದ ಒಟ್ಟಾರೆ ವಿಶ್ವಾಸಾರ್ಹತೆ ಹೆಚ್ಚಿಸಿ, ಆ ಮೂಲಕ ಬಂಡವಾಳಸ್ನೇಹಿಯನ್ನಾಗಿ ಮಾಡುವ ಉದ್ದೇಶವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Twenty-five states and one Union Territory have signed MoUs with the Central government to participate in the Ujwal Discom Assurance Yojana. All electricity distribution companies of India are covered under the UDAY's fold. State bonds worth Rs. 2.09 lakh crore; and DISCOM Bonds worth Rs 0.24 lakh crore have been issued.
Please Wait while comments are loading...