ಡಿ.ಕೆ.ಶಿವಕುಮಾರ್ ಪ್ರಕರಣ: ಜಾಮೀನು ವಿಚಾರಣೆ ಆರಂಭ

ನವದೆಹಲಿ, ಸೆಪ್ಟೆಂಬರ್ 18: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ಇಂದು ವಿಚಾರಣೆ ನಡೆಯಲಿದೆ.

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಸೆಪ್ಟೆಂಬರ್ 03 ರಂದು ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು, ಅಂದಿನಿಂದ ಸತತ 14 ದಿನ ಡಿ.ಕೆ.ಶಿವಕುಮಾರ್ ಅವರು ಇಡಿ ವಶದಲ್ಲಿದ್ದರು. ನಿನ್ನೆ ವಿಚಾರಣೆ ನಡೆಸಿದ ನ್ಯಾಯಾಲಯ ಅವರಿಗೆ ನ್ಯಾಯಾಂಗ ಭಂಧನಕ್ಕೆ ವಿಧಿಸಿದ್ದರು.

ಆದರೆ ಡಿ.ಕೆ.ಶಿವಕುಮಾರ್ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಆಸ್ಪತ್ರೆಯಲ್ಲಿಯೇ ಇರಿಸಲಾಗಿತ್ತು. ಇಂದು ಜಾಮೀನು ಅರ್ಜಿ ವಿಚಾರಣೆ ಇದ್ದು, ಜಾಮೀನು ಸಿಗುತ್ತದೆಯೋ ಇಲ್ಲವೊ, ಇಂದು ತಿಹಾರ್ ಜೈಲಿಗೆ ಹೋಗಬೇಕಾಗುತ್ತದೆಯೋ ನಿರ್ಣಯವಾಗಲಿದೆ.

DK Shivakumar Bail Application Inquiry Started In Delhi

ಕೆಲವೇ ಕ್ಷಣಗಳಲ್ಲಿ ನವದೆಹಲಿಯ ರೋಸ್ ಅವೆನ್ಯೂ ನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಡಿ.ಕೆ.ಶಿವಕುಮಾರ್ ಪರ ಅಭಿಷೇಕ್ ಮನು ಸಿಂಘ್ವಿ ವಾದಿಸುತ್ತಿದ್ದಾರೆ. ಇಡಿ ಪರ ನಟರಾಜ್ ವಾದ ಮಂಡಿಸಲಿದ್ದಾರೆ. ಆದೇಶವನ್ನು ನ್ಯಾಯಾಧೀಶ ಕುಹುರ್ ಅವರು ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+