ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀಪಾವಳಿ 2021: ಈ ರಾಜ್ಯಗಳಲ್ಲಿ ಪಟಾಕಿ ನಿಷೇಧ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಕೋವಿಡ್ ಸಾಂಕ್ರಾಮಿಕ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು, ದೇಶಾದ್ಯಂತ ಹಲವಾರು ರಾಜ್ಯಗಳು ವಿವಿಧ ನಿರ್ಬಂಧಗಳನ್ನು ವಿಧಿಸಿವೆ. ಕೆಲವು ರಾಜ್ಯಗಳು ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದ್ದರೆ, ಕೆಲವು ರಾಜ್ಯಗಳು ಈ ವರ್ಷ ದೀಪಾವಳಿಯಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಲು ಅನುಮತಿಸಿವೆ. ಆದರೆ ಶುಕ್ರವಾರ ಪಟಾಕಿ ಸಿಡಿಸುವ ಸಂಬಂಧ ತನ್ನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಹಸಿರು ಪಟಾಕಿ ಹೊರತುಪಡಿಸಿ ಇತರ ಪಟಾಕಿಗಳ ಮೇಲೆ ನಿಷೇಧವಿದೆ ಎಂದು ಸ್ಪಷ್ಟಪಡಿಸಿದೆ. ಇತ್ತೀಚೆಗೆ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯು ಜನವರಿ 1, 2022 ರವರೆಗೆ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಆದೇಶಿಸಿದೆ. ಮತ್ತೊಂದೆಡೆ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೆಪ್ಟೆಂಬರ್ 15 ರಂದು ಪಟಾಕಿಯನ್ನು ನಿಷೇಧಿಸಿ, ಇದು 'ಜೀವ ಉಳಿಸಲು ಅಗತ್ಯ' ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರ ವಾಯು ಮಾಲಿನ್ಯ ಮತ್ತು ಕೋವಿಡ್ -19 ಅನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶನಗಳನ್ನು ಹೊರಡಿಸಿದೆ. ದೀಪವನ್ನು ಬೆಳಗಿಸುವ ಮೂಲಕ ಮತ್ತು ಪಟಾಕಿಗಳನ್ನು ತಪ್ಪಿಸುವ ಮೂಲಕ ದೀಪಾವಳಿಯನ್ನು ಆಚರಿಸಲು ಜನರನ್ನು ಒತ್ತಾಯಿಸಿದೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ದೀಪಾವಳಿ ಶಾಪಿಂಗ್‌ಗಾಗಿ ಮಾರುಕಟ್ಟೆಯಲ್ಲಿ ಕಿಕ್ಕಿರಿದು ತುಂಬಬೇಡಿ ಮತ್ತು ಕೊರೋನಾ ನಿಯಮಗಳನ್ನು ಅನುಸರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಇನ್ನೂ ಪಂಜಾಬ್ ರಾಜ್ಯಾದ್ಯಂತ ದೀಪಾವಳಿಗೆ ಹಸಿರು ಪಟಾಕಿ ಸಿಡಿಸಲು ಪಂಜಾಬ್ ಸರ್ಕಾರ ಕೇವಲ ಎರಡು ಗಂಟೆಗಳ ಕಾಲಾವಕಾಶ ನೀಡಿದೆ. ಆದಾಗ್ಯೂ, ಕಳಪೆ ವಾಯು ಗುಣಮಟ್ಟ ಸೂಚ್ಯಂಕ (AQI) ಕಾರಣದಿಂದ ರಾಜ್ಯ ಸರ್ಕಾರವು ಬುಧವಾರ ಮಧ್ಯರಾತ್ರಿಯಿಂದ ಜಲಂಧರ್ ಮತ್ತು ಮಂಡಿ ಗೋಬಿಂದಗಢದಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.

 ಕರ್ನಾಟಕದಲ್ಲಿ ದೀಪಾವಳಿಯ ಹೊಸ ಮಾರ್ಗಸೂಚಿ

ಕರ್ನಾಟಕದಲ್ಲಿ ದೀಪಾವಳಿಯ ಹೊಸ ಮಾರ್ಗಸೂಚಿ

ಕರ್ನಾಟಕದಲ್ಲಿ ದೀಪಾವಳಿಯ ಹೊಸ ಮಾರ್ಗಸೂಚಿಗಳಲ್ಲಿ, ಅನುಮತಿ ಹೊಂದಿರುವ ಮಾರಾಟಗಾರರು ಮಾತ್ರ ನವೆಂಬರ್ 1 ಮತ್ತು 10 ರ ನಡುವೆ ವಸತಿ ಪ್ರದೇಶಗಳ ಹೊರಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಹಸಿರು ಪಟಾಕಿಗಳನ್ನು ಮಾರಾಟ ಮಾಡಬಹುದು ಎಂದು ಕರ್ನಾಟಕ ಸರ್ಕಾರ ಶನಿವಾರ ಹೇಳಿದೆ. ರಾಜ್ಯ ಸರ್ಕಾರ ಅಂಗಡಿಗಳ ನಡುವೆ 6 ಮೀಟರ್ ಅಂತರವನ್ನು ಕಡ್ಡಾಯವಾಗಿ ಮಾಡಬೇಕು ಎಂದು ಹೇಳಿದೆ. ಜೊತೆಗೆ ಉತ್ತರ ಪ್ರದೇಶ ಸರ್ಕಾರ ಎನ್‌ಸಿಆರ್‌ನಲ್ಲಿ ಪಟಾಕಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಗಾಳಿಯ ಗುಣಮಟ್ಟ ಕಳಪೆಯಾಗಿರುವ ಎಲ್ಲಾ ನಗರಗಳಲ್ಲಿ ಎಲ್ಲಾ ರೀತಿಯ ಪಟಾಕಿಗಳ ಮಾರಾಟ ಮತ್ತು ಬಳಕೆಯ ಮೇಲೆ ಸಂಪೂರ್ಣ ನಿಷೇಧವಿದೆ ಎಂದು ಹೇಳಿದೆ.

ಅಸ್ಸಾಂ

ಅಸ್ಸಾಂ

ಅಸ್ಸಾಂನ ಇತರ ರಾಜ್ಯಗಳನ್ನು ಸೇರಿಸಿ ಅಸ್ಸಾಂ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ರಾಜ್ಯದಲ್ಲಿ ಪಟಾಕಿ ಸಿಡಿಸುವುದು ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಿದೆ. ಆದಾಗ್ಯೂ, ಮಂಡಳಿಯು ದೀಪಾವಳಿ ಸಮಯದಲ್ಲಿ ರಾತ್ರಿ 8 ರಿಂದ 10 ರವರೆಗೆ, ಛತ್ ಪೂಜೆಯ ಸಮಯದಲ್ಲಿ ಬೆಳಿಗ್ಗೆ 6 ರಿಂದ 8 ರವರೆಗೆ ಮತ್ತು ಕ್ರಿಸ್ಮಸ್ ಮತ್ತು ಹೊಸ ವರ್ಷದ ಮುನ್ನಾದಿನದಂದು ರಾತ್ರಿ 11:55 ರಿಂದ 12 ರವರೆಗೆ ಎರಡು ಗಂಟೆಗಳ ಕಾಲ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಮತ್ತು ಸಿಡಿಸಲು ಅವಕಾಶ ನೀಡಿದೆ.

ಘಾಜಿಯಾಬಾದ್‌ನಲ್ಲಿ ಭಾರಿ ವಾಹನಗಳಿಗೆ ಅವಕಾಶವಿಲ್ಲ

ಘಾಜಿಯಾಬಾದ್‌ನಲ್ಲಿ ಭಾರಿ ವಾಹನಗಳಿಗೆ ಅವಕಾಶವಿಲ್ಲ

ಇತ್ತೀಚೆಗೆ, ಗಾಜಿಯಾಬಾದ್ ಸಂಚಾರ ಪೊಲೀಸರು ಡೈವರ್ಷನ್ ಯೋಜನೆ ಜಾರಿಗೊಳಿಸಿ ನಗರಕ್ಕೆ ಭಾರೀ ವಾಹನಗಳ ಪ್ರವೇಶವನ್ನು ನಿಲ್ಲಿಸಿದ್ದಾರೆ. ಈ ಕುರಿತು ಆದೇಶ ಹೊರಡಿಸಿರುವ ಸ್ಥಳೀಯ ಆಡಳಿತ ಅಕ್ಟೋಬರ್ 29 ರಿಂದ ನವೆಂಬರ್ 7 ರವರೆಗೆ ಯೋಜನೆ ಜಾರಿಯಲ್ಲಿರುತ್ತದೆ ಎಂದಿದೆ.

ದೀಪಾವಳಿ ನಂತರ ಸೂರತ್‌ನಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ

ದೀಪಾವಳಿ ನಂತರ ಸೂರತ್‌ನಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ

ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಇತ್ತೀಚೆಗೆ ಆದೇಶವನ್ನು ಹೊರಡಿಸಿದ್ದು ನಗರಕ್ಕೆ ಹಿಂದಿರುಗುವ ವಲಸೆ ಕಾರ್ಮಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಿದೆ. ಆದೇಶದ ಪ್ರಕಾರ, COVID ಪರೀಕ್ಷೆಯು 72 ಗಂಟೆಗಳಿಗಿಂತ ಹಳೆಯದಾಗಿರಬಾರದು. ಈ ನಿಯಮವು ವಿಶೇಷವಾಗಿ ರಾಜ್ಯದ ಒಳಗೆ ಬರುವವರಿಗೆ ಅನ್ವಯಿಸುತ್ತದೆ ಮತ್ತು ಗುಜರಾತ್‌ನೊಳಗಿನ ಪ್ರಯಾಣಿಕರಿಗೆ ಅಲ್ಲ ಎಂದು ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಸ್ಪಷ್ಟಪಡಿಸಿದೆ.

English summary
Keeping in mind the ongoing COVID pandemic and the increasing level of air pollution, a number of states across the country have imposes various restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X