ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ, ಸಾಮಾಜಿಕ ನ್ಯಾಯಕ್ಕೆ ಜಯ: ಮೋದಿ
Recommended Video

ನವದೆಹಲಿ, ಜನವರಿ 10: ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ಸಮುದಾಯಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ 10% ಮೀಸಲಾತಿ ಒದಗಿಸುವ ಮಸೂದೆ ಲೋಕಸಭೆಯ ಎರಡೂ ಮನೆಗಳಲ್ಲಿ ಅಂಗೀಕಾರಗೊಂಡಿದ್ದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಮೋದಿ, ಸಂವಿಧಾನದ 124ನೇ ತಿದ್ದುಪಡಿಗೆ ರಾಜ್ಯಸಭೆಯು ಒಪ್ಪಿಗೆ ಸೂಚಿಸಿರುವುದು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ವಿಜಯ ಎಂದು ಅವರು ಹೇಳಿದ್ದಾರೆ.
Delighted the Rajya Sabha has passed The Constitution (One Hundred And Twenty-Fourth Amendment) Bill, 2019.
— Narendra Modi (@narendramodi) January 9, 2019
Glad to see such widespread support for the Bill.
The House also witnessed a vibrant debate, where several members expressed their insightful opinions.
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ಮೀಸಲಾತಿ ನೀಡುವ ಮಸೂದೆಯು ನಿನ್ನೆ ರಾಜ್ಯಸಭೆಯಲ್ಲಿ ಮಂಡನೆ ಆಗಿ, ಅಂಗೀಕಾರವನ್ನು ಪಡೆಯಿತು. ಲೋಕಸಭೆಯಲ್ಲಿ ಜನವರಿ 08ರಂದು ಮಸೂದೆ ಅಂಗೀಕಾರಗೊಂಡಿತ್ತು.

ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿರುವುದು ಸಂತಸ ತಂದಿದೆ ಎಂದಿರುವ ಮೋದಿ, ಮಸೂದೆಗೆ ಉತ್ತಮ ಪ್ರಮಾಣದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಕೆಲವು ಸಂಸದರು ಮಹತ್ವಪೂರ್ಣ ಸಲಹೆಗಳನ್ನು ಸಹ ಚರ್ಚೆ ವೇಳೆ ನೀಡಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಅಂಗೀಕಾರಗೊಂಡಿರುವ 124ನೇ ತಿದ್ದುಪಡಿ ಅನ್ವಯ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದ ಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 10% ಮೀಸಲಾತಿ ದೊರಕಲಿದೆ.












Click it and Unblock the Notifications