ಪತಿ ಮನೆಯಲ್ಲಿರುವಾಗಲೇ ಅತ್ತೆ, ಮಾವನನ್ನು ಚಾಕುವಿನಿಂದ ಇರಿದು ಕೊಂದ ಮಹಿಳೆ

ನವದೆಹಲಿ, ಏಪ್ರಿಲ್ 24: ಕೊರೊನಾ ವೈರಸ್ ವಿರುದ್ಧ ಹೋರಾಡಲು ಇಡೀ ದೇಶವೇ ಒಗ್ಗಟ್ಟಾಗಿ ನಿಂತಿರುವ ಸಂದರ್ಭದಲ್ಲಿ ಮಹಿಳೆಯೊಬ್ಬಳು ತನ್ನ ಅತ್ತೆ, ಮಾವನನ್ನು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಎಲ್ಲೆಲ್ಲೂ ಕೊರೊನಾ ಲಾಕ್‌ಡೌನ್ ಇದೆ, ಮನೆಯಿಂದ ಯಾರೂ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.ಕವಿತಾ ರಾಜ್ ಸಿಂಗ್(61), ಓಮ್ವತಿ(58) ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ.

ಪತಿ ಹಾಗೂ ಆರು ಮತ್ತು ಎಂಟು ವರ್ಷದ ಮಕ್ಕಳಿಬ್ಬರು ಮನೆಯಲ್ಲಿರುವಾಗಲೇ ಈ ಕೃತ್ಯ ನಡೆದಿದ್ದು, ಆಕೆಯ ಪತಿಯ ಮೇಲೂ ಸಂದೇಹ ವ್ಯಕ್ತವಾಗಿದೆ.

Delhi Woman Allegedly Kills In Laws At Home

ಎರಡು ಕೊಲೆಯಾಗಿರುವ ಬಗ್ಗೆ ಬೆಳಗ್ಗೆ 11 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇಬ್ಬರ ಮೃತದೇಹ ರೂಮಿನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿತ್ತು. ದುರ್ಗಾ ವಿಹಾರದ ಫೇಸ್‌ 2ರಲ್ಲಿ ಘಟನೆ ನಡೆದಿದೆ.

ಆಸ್ತಿ ವಿಚಾರವಾಗಿ ದಿನವೂ ಗಲಾಟೆ ನಡೆಯುತ್ತಿತ್ತು, ಈ ಕೊಲೆಗೆ ಅದೇ ಕಾರಣವಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ಕೊಲೆ ವಿಚಾರವಾಗಿ ಕವಿತಾ ಪತಿಯ ವಿಚಾರಣೆ ನಡೆಸಲಾಗುತ್ತಿದ್ದು, ಯಾರನ್ನೂ ಬಂಧಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಾರ್ಚ್ 25ರಿಂದ ಕೊರೊನಾ ಲಾಕ್‌ಡೌನ್ ಮಾಡಲಾಗಿದ್ದು, ಭಾರತದಲ್ಲಿ ಇದುವರೆಗೆ 700 ಮಂದಿ ಮೃತಪಟ್ಟಿದ್ದಾರೆ.23 ಸಾವಿರ ಕೊರೊನಾ ಸೋಂಕಿತರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+