ದೆಹಲಿಯಲ್ಲಿ 5 ಲಕ್ಷಕ್ಕೇರಿದ ಕೊರೊನಾ ಸೋಂಕಿತರು: ಒಂದೇ ದಿನ ಅತಿಹೆಚ್ಚು ಮಂದಿ ಸಾವು
ನವದೆಹಲಿ, ನವೆಂಬರ್ 19: ದೆಹಲಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು 5 ಲಕ್ಷಕ್ಕೇರಿದೆ. ಬುಧವಾರ 7486 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಒಂದೇ ದಿನ 131 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 7943 ಮಂದಿ ಮೃತಪಟ್ಟಿದ್ದಾರೆ.ಬುಧವಾರ 62,000 ಪರೀಕ್ಷೆಗಳನ್ನು ನಡೆಸಲಾಗಿದೆ. ಪಾಸಿಟಿವ್ ಪ್ರಕರಣ ಶೇ.12.03ರಷ್ಟು ಏರಿಕೆಯಾಗಿದೆ. ಹಬ್ಬವಿದ್ದ ಕಾರಣ ನಗರದಲ್ಲಿ ವಾಯು ಮಾಲಿನ್ಯ ಕೂಡ ಹೆಚ್ಚಾಗಿದೆ.
ನವೆಂಬರ್ 11 ರಂದು ಅತಿ ಹೆಚ್ಚು ಅಂದರೆ 8593 ಪ್ರಕರಣಗಳು ದಾಖಲಾಗಿದ್ದವು. 42,004 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಸಂಖ್ಯೆ 5,03,084 ಇದೆ.

ಅಗತ್ಯವಿದ್ದರೆ ಪ್ರಮುಖ ಮಾರುಕಟ್ಟೆಗಳನ್ನು ಬಂದ್ ಮಾಡುವಂತೆ ಅನುಮತಿ ಕೇಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೇಶದಲ್ಲಿ 45,576 ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. 24 ಗಂಟೆಗಳಲ್ಲಿ 585 ಮಂದಿ ಮೃತಪಟ್ಟಿದ್ದಾರೆ, , 48,493 ಮಂದಿ ಬಿಡುಗಡೆ, 4,43,303 ಒಟ್ಟು ಸಕ್ರಿಯ ಪ್ರಕರಣಗಳು, 83,83,603 ಮಂದಿ ಬಿಡುಗಡೆ, ಇದುವರೆಗೂ 1,31,578 ಮಂದಿ ಬಲಿಯಾಗಿದ್ದಾರೆ.












Click it and Unblock the Notifications