ಬಾಂಬ್ ಹಾಕಿ ಎಲ್ಲರನ್ನೂ ಕೊಲ್ಲಿರಿ ಎಂದು ಸುಪ್ರೀಂಕೋರ್ಟ್ ಹೇಳಿದ್ದೇಕೆ?

ನವದೆಹಲಿ, ನವೆಂಬರ್.25: ಕೇಂದ್ರ ಸರ್ಕಾರಕ್ಕೆ ಬಾರಿ ಬಾರಿ ಹೇಳಿದರೂ ಕೇಳಲಿಲ್ಲ. ಖಡಕ್ ಎಚ್ಚರಿಕೆ ನೀಡಿದರೂ ರಾಜ್ಯ ಸರ್ಕಾರಗಳು ಬುದ್ಧಿ ಕಲಿಯಲಿಲ್ಲ. ಇದರಿಂದ ಸರ್ಕಾರಗಳ ವಿರುದ್ಧ ಸುಪ್ರೀಂಕೋರ್ಟ್ ಕೆರಳಿ ಕೆಂಡವಾಗಿದೆ.

ಈಗ ಸುಪ್ರೀಂಕೋರ್ಟ್ ಕೋಪಕ್ಕೆ ಕಾರಣವಾಗಿದ್ದು ಮತ್ತದೇ ದೆಹಲಿಯಲ್ಲಿ ಸೃಷ್ಟಿಯಾಗಿರುವ ವಾಯುಮಾಲಿನ್ಯ ಪರಿಸ್ಥಿತಿ. ಜನರು ನಿತ್ಯ ಉಸಿರಾಡುವುದಕ್ಕೂ ಭಯ ಪಡುವಂತಾ ಪರಿಸ್ಥಿತಿ ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಾಣವಾಗಿದೆ. ದೆಹಲಿ ಸರ್ಕಾರ ಎಲ್ಲರ ಮುಖಕ್ಕೂ ಮಾಸ್ಕ್ ಹಾಕಿ ಸುಮ್ಮನಾಗಿ ಬಿಟ್ಟಿದೆ.

ದಿನ ಬೆಳಗಾದರೆ ಜನರು ಹೊರ ಬರುವುದಕ್ಕೆ ಯೋಚಿಸುವಂತಾಗಿದೆ. ರಾಷ್ಟ್ರ ರಾಜಧಾನಿಯಲ್ಲೇ ವಾಯುಮಾಲಿನ್ಯ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರಗಳು ಅಟ್ಟರ್ ಪ್ಲಾಫ್ ಆಗಿವೆ ಎಂದು ಸುಪ್ರೀಂಕೋರ್ಟ್ ಜಸ್ಟೀಸ್ ಅರುಣ್ ಮಿಶ್ರಾ ಛೀಮಾರಿ ಹಾಕಿದ್ದಾರೆ.

ಕೇಂದ್ರಕ್ಕೆ ಛಡಿಯೇಟು ಕೊಟ್ಟ ಸುಪ್ರೀಂಕೋರ್ಟ್

ಕೇಂದ್ರಕ್ಕೆ ಛಡಿಯೇಟು ಕೊಟ್ಟ ಸುಪ್ರೀಂಕೋರ್ಟ್

ದೆಹಲಿ ವಾಯುಮಾಲಿನ್ಯದ ಬಗ್ಗೆ ನವೆಂಬರ್.25ರಂದು ಸುಪ್ರೀಂಕೋರ್ಟ್ ಜಸ್ಟೀಸ್ ಅರುಣ್ ಮಿಶ್ರಾ ಆತಂಕ ವ್ಯಕ್ತಪಡಿಸಿದರು. ದೆಹಲಿ ಹಾಗೂ ಎನ್ಆರ್ ಸಿಯಲ್ಲಿ ಉಸಿರಾಡುವ ಗಾಳಿಯೇ ವಿಷವಾಗುತ್ತಿದೆ. ದೆಹಲಿ ಎಂಬುಂದು ಗ್ಯಾಸ್ ಛೇಂಬರ್ ನಂತೆ ಆಗಿ ಬಿಟ್ಟಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದೆ ಎಂದು ಸಾಲಿಸಿಟರ್ ಜನರಲ್ ತುಷಾಂತ್ ಮೆಹ್ತಾ ಅವರಿಗೆ ಜಸ್ಟೀಸ್ ಅರುಣ್ ಮಿಶ್ರಾ ಪ್ರಶ್ನಿಸಿದ್ದಾರೆ.

ಬಾಂಬ್ ಹಾಕಿ ಒಟ್ಟಾಗಿ ಕೊಂದು ಬಿಡಿ

ಬಾಂಬ್ ಹಾಕಿ ಒಟ್ಟಾಗಿ ಕೊಂದು ಬಿಡಿ

ದೆಹಲಿ ಜನರನ್ನು ಒತ್ತಾಯಪೂರ್ವಕವಾಗಿ ಗ್ಯಾಸ್ ಛೇಂಬರ್ ನಲ್ಲಿ ಇರಿಸಲಾಗುತ್ತಿದೆ. ಇಲ್ಲಿ ಜನರು ದಿನವಿಡೀ ಭಯದಲ್ಲೇ ಜೀವನ ಸಾಗಿಸುವಂತಾಗಿದೆ. ವಾಯುಮಾಲಿನ್ಯದಿಂದ ಜನರು ನಿತ್ಯ ನರಳುತ್ತಿದ್ದಾರೆ. ಅದರ ಬದಲು 15 ಕೆಜಿ ಸ್ಫೋಟಕಗಳಿರುವ ಬ್ಯಾಗ್ ಗಳನ್ನು ಹಾಕಿ ಎಲ್ಲರನ್ನೂ ಒಟ್ಟಾಗಿ ಕೊಂದು ಬಿಡಿ ಎಂದು ಸುಪ್ರೀಂಕೋರ್ಟ್ ಜಸ್ಟೀಸ್ ಅರುಣ್ ಮಿಶ್ರಾ ಕಿಡಿ ಕಾರಿದ್ದಾರೆ.

ಅಲ್ಲಿ ಬೆಂಕಿ ಹಚ್ಚಿದರೆ, ಇಲ್ಲಿ ಬದುಕೇ ಬೂದಿ!

ಅಲ್ಲಿ ಬೆಂಕಿ ಹಚ್ಚಿದರೆ, ಇಲ್ಲಿ ಬದುಕೇ ಬೂದಿ!

ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ದಿನೇ ದಿನೆ ಮಿತಿ ಮೀರಿತ್ತಿದೆ. ಹರಿಯಾಣ ಹಾಗೂ ಗುಜರಾತ್ ನಲ್ಲಿ ರೈತರು ಹಗಲು-ರಾತ್ರಿ ಎನ್ನದೇ ಬೆಳೆಗಳಿಗೆ ಬೆಂಕಿ ಹಚ್ಚುತ್ತಲೇ ಇದ್ದಾರೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಏರಿಕೆ ಆಗುತ್ತಲೇ ಇದೆ. ದೆಹಲಿಯ ಜನರು ನಿತ್ಯ ಭಯದಲ್ಲೇ ಬದುಕು ಸಾಗಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ.

ಹರಿಯಾಣ, ಗುಜರಾತ್ ಸರ್ಕಾರಕ್ಕೆ ಛಾಟಿ

ಹರಿಯಾಣ, ಗುಜರಾತ್ ಸರ್ಕಾರಕ್ಕೆ ಛಾಟಿ

ಬಾರಿ ಬಾರಿ ಎಚ್ಚರಿಕೆ ನೀಡಿದರೂ ಹರಿಯಾಣ ಹಾಗೂ ಗುಜರಾತ್ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಎರಡು ರಾಜ್ಯಗಳಲ್ಲಿ ರೈತರು ತಮ್ಮ ಕೆಲಸವನ್ನು ಯಥಾವತ್ತಾಗಿ ಮುಂದುವರಿಸುತ್ತಿದ್ದಾರೆ. ರಾಜ್ಯ ಸರ್ಕಾರಗಳು ಜಾಣಮೌನ ಪ್ರದರ್ಶಿಸುತ್ತಿವೆ. ಕಳೆದ ಬಾರಿ ಎರಡು ಸರ್ಕಾರಗಳು ಬೆಳೆಗೆ ಬೆಂಕಿ ಹಚ್ಚುವುದಕ್ಕ ಸ್ವಲ್ಪ ಕಡಿವಾಣ ಹಾಕಿದ್ದವು. ಆದರೆ, ಈ ಬಾರಿ ಬೆಳೆಯನ್ನು ಸುಡುವುದಕ್ಕೆ ಸರ್ಕಾರಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಎಲ್ಲ ಅಂಶಗಳು ಕೂಡಾ ಸುಪ್ರೀಂಕೋರ್ಟ್ ಗಮನಕ್ಕೆ ಬಂದಿದೆ.

ಬೆಳೆಯನ್ನು ಸುಡುವ ರೈತರ ವಿರುದ್ಧ ನೀವು ಯಾವುದೇ ಕ್ರಮವನ್ನು ಜರುಗಿಸಿಲ್ಲ. ನಿಮ್ಮ ವಿರುದ್ಧ ಈಗ ಸುಪ್ರೀಂಕೋರ್ಟ್ ಯಾಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂದು ಜಸ್ಟೀಸ್ ಅರುಣ್ ಮಿಶ್ರಾ ಹರಿಯಾಣ ಹಾಗೂ ಗುಜರಾಜ್ ಸರ್ಕಾರಗಳಿಗೆ ಛಾಟಿ ಬೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+