• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಷಾರ್.. ಮನೆಯಿಂದ ಹೊರ ಬಂದರೆ ಬೀಳುತ್ತೆ ಕೇಸ್!

|

ನವದೆಹಲಿ, ಏಪ್ರಿಲ್.03: ಕೊರೊನಾ ವೈರಸ್ ಸೋಂಕು ಹರಡುತ್ತದೆ. ಕೈಗೆ ಸೀಲ್ ಹಾಕಿಸಿಕೊಂಡವರೆಲ್ಲ ಮನೆ ಬಿಟ್ಟು ಹೊರಗೆ ಬರಬೇಡಿ. ಭಾರತ ಲಾಕ್ ಡೌನ್ ಹಿನ್ನೆಲೆ ಸುಖಾಸುಮ್ಮನೆ ಓಡಾಡಬೇಡಿ ಎಂದು ಬೇಡಿಕೊಂಡಿದ್ದು ಆಯ್ತು. ಕೈ ಮುಗಿದು ಕೇಳಿ ಕೊಂಡಿದ್ದು ಆಯ್ತು. ಲಾಠಿರುಚಿ ತೋರಿಸಿದ್ದು ಆಯ್ತು. ಈಗ ಪರಿಸ್ಥಿತಿ ಮೊದಲಿನಂತೆ ಇಲ್ಲ.

   ದೇಶದ ಜನತೆಗೆ ಕರೆ ಕೊಟ್ಟ ಮೋದಿ..! | ಈ ಕರೆಯ ಹಿಂದಿನ ಉದ್ದೇಶ ಏನು..? | Narendra Modi

   ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ಎರಡು ಸಾವಿರದ ಗಡಿ ದಾಟಿದೆ. ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕಿದೆ. ಇಂಥ ಸಂದರ್ಭದಲ್ಲೂ ನಿಯಮಗಳನ್ನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕೇಸ್ ಹಾಕಲಾಗುತ್ತದೆ.

   ದೆಹಲಿ ಧರ್ಮಸಭೆಯಲ್ಲಿ 65 ವಿದೇಶಿಗರು; ಕೇಸ್ ಹಾಕಿದ ಪೊಲೀಸರು ದೆಹಲಿ ಧರ್ಮಸಭೆಯಲ್ಲಿ 65 ವಿದೇಶಿಗರು; ಕೇಸ್ ಹಾಕಿದ ಪೊಲೀಸರು

   ದೆಹಲಿಯ ದ್ವಾರಕದಲ್ಲಿ ಗೃಹ ದಿಗ್ಬಂಧನದಲ್ಲಿ ಇರಿಸಿದ 21 ಜನರು ನಿಯಮವನ್ನು ಉಲ್ಲಂಘಿಸಿ ಮನೆಯಿಂದ ಹೊರಗಡೆ ತಿರುಗಾಡಲು ಬಂದಿದ್ದಕ್ಕೆ ತಪ್ಪಿತಸ್ಥರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.


   ಐಪಿಸಿ ಸೆಕ್ಷನ್ 3ರ ಅಡಿ ಪ್ರಕರಣ ದಾಖಲು:

   ಗೃಹ ದಿಗ್ಬಂಧನದ ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆ 3ರ ಸಾಂಕ್ರಾಮಿಕ ರೋಗ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ದೆಹಲಿಯ ದ್ವಾರಕದಲ್ಲಿ ಗೃಹ ದಿಗ್ಬಂಧನಕ್ಕೆ ಸರ್ಕಾರವು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಸೂಚಿಸಿದೆ. ಅಷ್ಟಾಗಿಯೂ ಅದ್ಯಾವುದಕ್ಕೂ ಕ್ಯಾರೆ ಎನ್ನದೇ ನಿಯಮ ಉಲ್ಲಂಘಿಸಿದ್ದಕ್ಕೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

   ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದುವರೆಗೂ 293 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಮಾರಕ ಸೋಂಕಿಗೆ ನಾಲ್ವರು ಪ್ರಾಣ ಬಿಟ್ಟಿದ್ದಾರೆ. ಎಂಟು ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.

   English summary
   Delhi Police Registered Case Against 21 Peoples For Home-Quarantine Violation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X