ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಪೊಲೀಸರಿಂದ ತಬ್ಲಿಘಿ ಮುಖ್ಯಸ್ಥನಿಗೆ 4ನೇ ಬಾರಿ ನೋಟಿಸ್

|
Google Oneindia Kannada News

ದೆಹಲಿ, ಏಪ್ರಿಲ್ 30: ದೆಹಲಿಯ ನಿಜಾಮುದ್ದೀನ್‌ನಲ್ಲಿ ತಬ್ಲಿಘಿಗಳ ಸಭೆ ಆಯೋಜಿಸಿದ್ದ ಮುಖ್ಯಸ್ಥ ಮೌಲನಾ ಸಾದ್‌ಗೆ ನಾಲ್ಕನೇ ಬಾರಿ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಸರ್ಕಾರಿ ಪ್ರಯೋಗಾಲಯದಲ್ಲಿ ಕೊವಿಡ್ ಪರೀಕ್ಷೆಗೆ ಒಳಪಡಬೇಕೆಂದು ಸೂಚಿಸಿ ನೊಟೀಸ್ ನೀಡಲಾಗಿದೆ. ಖಾಸಗಿ ಲ್ಯಾಬ್‌ನಲ್ಲಿ ಮೌಲನಾ ಸಾದ್ ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಫಲಿತಾಂಶ ನೆಗಿಟಿವ್ ಬಂದಿದೆ ಎಂದು ತಬ್ಲಿಘಿ ಮುಖ್ಯಸ್ಥ ಪರ ವಕೀಲ ಸೋಮವಾರ ದೆಹಲಿ ಪೊಲೀಸರಿಗೆ ವರದಿ ನೀಡಿದ್ದರು.

ಮನಿ ಲಾಂಡರಿಂಗ್ ಪ್ರಕರಣ: ತಬ್ಲಿಘಿ ಮುಖ್ಯಸ್ಥನ ವಿರುದ್ಧ FIR ದಾಖಲಿಸಿದ ಇಡಿಮನಿ ಲಾಂಡರಿಂಗ್ ಪ್ರಕರಣ: ತಬ್ಲಿಘಿ ಮುಖ್ಯಸ್ಥನ ವಿರುದ್ಧ FIR ದಾಖಲಿಸಿದ ಇಡಿ

ಈಗಾಗಲೇ ಮೌಲನಾ ಸಾದ್‌ ಮೂರು ಬಾರಿ ನೋಟಿಸ್ ನೀಡಲಾಗಿದೆ. ಆದರೆ, ವಿಚಾರಣೆಗೆ ಹಾಜರಾಗಿಲ್ಲ. ತಲೆಮರಿಸಿಕೊಂಡಿರುವ ಸಾದ್ ತಮ್ಮ ವಕೀಲರ ಮುಖಾಂತರ ದೆಹಲಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇನ್ನು ಹಲವು ಪ್ರಶ್ನೆಗಳಿಗೆ ಸಾದ್ ಉತ್ತರಿಸಬೇಕಾಗಿದೆ. ಅದಕ್ಕೆ ಸ್ಪಷ್ಟನೆ ನೀಡಿಲ್ಲ ಎಂದು ದೆಹಲಿ ಪೊಲೀಸರು ನಾಲ್ಕನೇ ಬಾರಿ ನೊಟೀಸ್ ನೀಡಿದ್ದಾರೆ ಎನ್ನಲಾಗಿದೆ.

Delhi Police Issues 4th Notice To Tablighi Chief Maulana Saad

ಅಂದ್ಹಾಗೆ, ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಾಜ್ ತಬ್ಲಿಘಿ ಜಮಾತ್‌ನಲ್ಲಿ ನಡೆದ ಧಾರ್ಮಿಕ ಸಭೆಗೆ ಸಂಬಂಧಿಸಿದಂತೆ ಜಮಾತ್‌ನ ಮುಖ್ಯಸ್ಥ ಮೌಲನಾ ಸಾದ್‌ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ಎಫ್ ಐ ಆರ್ ದಾಖಲಾಗಿದೆ.

ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮ ಕೊರೊನಾ ವೈರಸ್‌ಗೆ ಕೇಂದ್ರಬಿಂದು ಆಗಿದ್ದು, ದೇಶದಲ್ಲಿ ಕೊರೊನಾ ವೈರಸ್ ಹರಡಲು ಕಾರಣವಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮಂದಿಗೆ ಕೊವಿಡ್ ಪಾಸಿಟಿವ್ ಬಂದಿದೆ.

'ದೇಶದ ಶೇಕಡಾ 63ರಷ್ಟು ಕೋವಿಡ್ ಪ್ರಕರಣಗಳಿಗೆ ತಬ್ಲಿಘಿ ಜಮಾತ್ ಕಾರಣ' 'ದೇಶದ ಶೇಕಡಾ 63ರಷ್ಟು ಕೋವಿಡ್ ಪ್ರಕರಣಗಳಿಗೆ ತಬ್ಲಿಘಿ ಜಮಾತ್ ಕಾರಣ'

ಇನ್ನು ದೆಹಲಿ ಪೊಲೀಸರು ದಾಖಲಿಸಿರುವ ಪ್ರಕರಣದ ಆಧಾರದ ಮೇಲೆ ತಬ್ಲಿಘಿ ಮುಖ್ಯಸ್ಥ ಸಾದ್ ಮತ್ತು ಇತರರ ವಿರುದ್ಧ ಮನಿ ಲಾಂಡರಿಂಗ್ ತಡೆಗಟ್ಟುವ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ.

English summary
Delhi Police issues 4th notice to Tablighi Chief Maulana Saad asking him to tested COVID19 in govt lab.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X