ಸುನಂದಾ ಕೊಲೆ ಕೇಸ್: ಎಸ್ ಐಟಿಯಿಂದ ವಿಚಾರಣೆ

ನವದೆಹಲಿ, ಜ.7: ಕೇಂದ್ರದ ಮಾಜಿ ಸಚಿವ ಶಶಿತರೂರ್​ ಪತ್ನಿ ಸುನಂದಾ ಪುಷ್ಕರ್ ಕೊಲೆ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ದೆಹಲಿ ಪೊಲೀಸರು ರಚಿಸಿದ್ದಾರೆ.

ಈಗಾಗಲೇ ಐಪಿಸಿ 302 ಅಡಿ ಕೊಲೆ ಪ್ರಕರಣ ದಾಖಲಾಗಿದ್ದು, ಅಪರಿಚಿತ ವ್ಯಕ್ತಿ ವಿರುದ್ಧ ಎಫ್ಐಆರ್​ ಹಾಕಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಂದು ದೆಹಲಿ ಪೊಲೀಸ್​ ಆಯುಕ್ತ ಬಿ.ಎಸ್. ​ಬಸ್ಸಿ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆ ಬಗ್ಗೆ ಈ ಹಿಂದೆಯಿದ್ದ ಕೆಲ ಗೊಂದಲಗಳು ನಿವಾರಣೆಯಾಗಿದೆ. ಸುನಂದಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ಕೋನದಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.[ಸುನಂದಾ ಕೊಲೆ ಪ್ರಕರಣ, ತನಿಖಾಧಿಕಾರಿಗೆ ಕಬ್ಬಿಣದ ಕಡಲೆ]

Delhi Police form SIT to probe Sunanda Pushkar's death case

ದೆಹಲಿ ಉಪ ಪೊಲೀಸ್ ಆಯುಕ್ತ ಪ್ರೇಮನಾಥ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ)ವನ್ನು ರಚಿಸಲಾಗಿದ್ದು, ಡಿಸಿಪಿ ದಕ್ಷಿಣ ವಲಯ, ಠಾಣಾಧಿಕಾರಿ, ಒಬ್ಬ ಇನ್ಸ್ ಪೆಕ್ಟರ್ ತಂಡದಲ್ಲಿರುತ್ತಾರೆ ತರೂರ್ ಆಗಲಿ ಯಾರೇ ಆಗಲಿ ತನಿಖಾ ಸಂದರ್ಭದಲ್ಲಿ ಅಗತ್ಯ ಬಿದ್ದರೆ ಎಲ್ಲರನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಅಯುಕ್ತ ಬಸ್ಸಿ ಹೇಳಿದ್ದಾರೆ. [ಸುನಂದಾ ಪುಷ್ಕರ್ ಆತ್ಮಹತ್ಯೆಯಲ್ಲ, ಕೊಲೆ : ಪೊಲೀಸ್]

ತಡವಾಗಿದ್ದು ಏಕೆ?: ಕೆಲವೊಮ್ಮೆ ಅಧಿಕವಾಗಿ ಮಾತ್ರೆ ಸೇವನೆ ಕೂಡಾ ವಿಷವಾಗಿ ಪರಿಣಮಿಸುತ್ತದೆ. ಸುನಂದಾ ದೇಹದಲ್ಲಿ ಕಂಡು ಬಂದ ವಿಷದ ಬಗ್ಗೆ ಮಾಹಿತಿ ಕಲೆ ಹಾಕಲು ಸಾಕಷ್ಟು ಸಮಯ ಬೇಕಾಯಿತು. ವಿಸೇರಾದಲ್ಲಿ ಪರಮಾಣು ಪದಾರ್ಥವಿರುವ ಬಗ್ಗೆ ತಿಳಿದಿದೆಯಾದರೂ ಎಷ್ಟು ಪ್ರಮಾಣದಲ್ಲಿ ಯಾವ ವಿಷ ನೀಡಲಾಗಿದೆ ಎಂಬುದು ಇನ್ನೂ ನಿಗೂಢವಾಗಿದೆ. ಅಗತ್ಯ ಬಿದ್ದರೆ ವಿಸೇರಾವನ್ನು ವಿದೇಶಕ್ಕೆ ಕಳಿಸಿ ಪರೀಕ್ಷೆ ನಡೆಸಲಾಗುವುದು ಎಂದು ಬಸ್ಸಿ ತಿಳಿಸಿದರು.

ಅಣು ವಿಕಿರಣ ಘಟಕದ ಉತ್ಪನ್ನ ಪೊಲೊನಿಯಂ 210,ಥಾಲಿಯಂ,ಹಾವಿನ ವಿಷಗಳು ಬಂದಿದ್ದು ಎಲ್ಲಿಂದ? ವಿಧಿ ವಿಜ್ಞಾನ ಇಲಾಖೆ, ಏಮ್ಸ್ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನು ಹೇಳಲಾಗಿದೆ? ಎಂಬ ಅನೇಕ ವಿಷಯಗಳು ಪ್ರಶ್ನೆಗಳು ಹಾಗೆ ಉಳಿದಿವೆ. [ಸಾವು ಹುಟ್ಟುಹಾಕಿದ 5 ಪಶ್ನೆಗಳು]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+