Get Updates
Get notified of breaking news, exclusive insights, and must-see stories!

ಯೆಚೂರಿ, ಯೋಗೇಂದ್ರ ಆರೋಪಿಗಳಲ್ಲ: ಪೊಲೀಸರ ಸ್ಪಷ್ಟನೆ

ನವದೆಹಲಿ, ಸೆ. 13: ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಹೆಚ್ಚುವರಿ ದೋಷರೋಪಣ ಪಟ್ಟಿ ಬಗ್ಗೆ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಂತೆ ಬಂದಿರುವ ಮಾಧ್ಯಮ ವರದಿಗಳು ಗೊಂದಲದಿಂಡ ಕೂಡಿವೆ ಎಂದಿದ್ದಾರೆ.

ಚಾರ್ಜ್ ಶೀಟ್ ನಲ್ಲಿ ಸೀತಾರಾಮ್ ಯೆಚೂರಿ, ಯೋಗೇಂದ್ರ ಯಾದವ್, ಜಯಂತಿ ಘೋಶ್, ಅಪೂರ್ವನಂದ, ರಾಹುಲ್ ರಾಯ್ ಮುಂತಾದವರ ಹೆಸರು ಉಲ್ಲೇಖಿಸಲಾಗಿದೆ. ಆದರೆ, ಅವರನ್ನು ಆರೋಪಿಗಳೆಂದು ಹೆಸರಿಸಿಲ್ಲ ಎಂದು ಸರಣಿ ಟ್ವೀಟ್ ಮೂಲಕ ದೆಹಲಿ ಮಾಡಿದ್ದಾರೆ.

ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಯೆಚೂರಿ, ಸ್ವರಾಜ್ ಅಭಿಯಾನದ ಮುಖಂಡ ಯೋಗೇಂದ್ರ ಯಾದವ್, ಅರ್ಥಶಾಸ್ತ್ರಜ್ಞೆ ಜಯಂತಿ ಘೋಶ್, ದೆಹಲಿ ವಿವಿ ಪ್ರಾಧ್ಯಾಪಕ ಅಪೂರ್ವನಂದ, ನಿರ್ಮಾಪಕ ರಾಹುಲ್ ರಾಯ್ ಅವರನ್ನು ಸಹ ಸಂಚುಕೋರರು ಎಂದು ದೋಷರೋಪಣ ಪಟ್ಟಿಯಲ್ಲಿ ತಿಳಿಸಲಾಗಿದೆ ಎಂಬ ವರದಿ ಸತ್ಯಕ್ಕೆ ದೂರವಾಗಿದೆ.

 Delhi Police clarification on Delhi Riot Chargesheet: Yechury, Yogendra Yadav not arraigned as accused

ರಾಷ್ಟ್ರ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದು, ಪ್ರಚೋದನಕಾರಿ ಭಾಷಣ ಮಾಡಿದ ಆರೋಪ ಇವರ ಮೇಲೆ ಹೊರೆಸಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿಗಳ ಹೇಳಿಕೆ ಆಧಾರಿಸಿ ಈ ನಡೆ ಇಡಲಾಗಿದೆ ಎನ್ನಲಾಗಿತ್ತು.

ಪಿಂಜರ ತೊಡ್ ಸದಸ್ಯರು ಜೆಎನ್ ಯು ವಿದ್ಯಾರ್ಥಿಗಳಾದ ದೇವಾಂಗಣ ಕಲಿತಾ, ನತಾಶಾ ನರ್ವಾಲ್ ಹಾಗೂ ಗುಲ್ಫಿಶಾ ಫಾತಿಮಾ ಅವರ ಹೇಳಿಕೆ ಆಧಾರಿಸಿ ಪ್ರಮುಖ ವ್ಯಕ್ತಿಗಳ ವಿರುದ್ಧ ದೋಷರೋಪಣ ಪಟ್ಟಿ ಸಲ್ಲಿಸಲಾಗಿದೆ ಎಂದು ವರದಿಯಾಗಿತ್ತು.

ಈಶಾನ್ಯ ದೆಹಲಿಯಲ್ಲಿ ಫೆಬ್ರವರಿ 23 ಹಾಗೂ 26 ರಂದು ಹಿಂಸಾಚಾರ, ಗಲಭೆ ನಡೆದು 53 ಮಂದಿ ಮೃತಪಟ್ಟು, 581 ಮಂದಿ ಗಾಯಗೊಂಡಿದ್ದರು. 97 ಮಂದಿಗೆ ಗುಂಡೇಟು ತಗುಲಿತ್ತು.

ದೆಹಲಿ ಪೊಲೀಸರ ಸರಣಿ ಟ್ವೀಟ್

ಆನ್ ಲೈನ್ ಸುದ್ದಿ ಸಂಸ್ಥೆ ಆಧಾರದ ಮೇಲೆ ಪ್ರಮುಖ ವೆಬ್ ತಾಣಗಳು ಕೂಡಾ ಈ ಸುದ್ದಿಯನ್ನು ಪ್ರಕಟಿಸಿವೆ. ಆರೋಪಿಗಳ ಮುಚ್ಚಳಿಕೆ ಪತ್ರದಲ್ಲಿರುವ ಹೇಳಿಕೆ ಆಧಾರದ ಮೇಲೆ ಚಾರ್ಜ್ ಶೀಟ್ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+