ದೆಹಲಿಯಲ್ಲಿ ಗುಂಡಿನ ಚಕಮಕಿ; ಇಬ್ಬರು ಉಗ್ರರ ಬಂಧನ

ನವದೆಹಲಿ, ಸೆಪ್ಟೆಂಬರ್ 07 : ವಾಯುವ್ಯ ದೆಹಲಿಯಲ್ಲಿ ಪೊಲೀಸರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸರು ಇಬ್ಬರು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Recommended Video

      IPL 2020 ವೇಳಾಪಟ್ಟಿ ಬಿಡುಗಡೆ ಮಾಡಿದ BCCI | Oneindia Kannada

      ಸೋಮವಾರ ದೆಹಲಿ ಪೊಲೀಸ್ ವಿಶೇಷ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಬಬ್ಬರ್ ಖಸ್ಲಾ ಇಂಟರ್‌ ನ್ಯಾಷನಲ್ (ಬಿಕೆಐ) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

      Delhi Police Arrested Two Terrorists After Brief Exchange Of Fire

      ಬಂಧಿತ ಉಗ್ರರನ್ನು ಭೂಪೇಂದರ್ ಅಲಿಯಾಸ್ ದಿಲ್ವಾರ್ ಸಿಂಗ್ ಮತ್ತು ಕುಲ್ವಂತ್ ಸಿಂಗ್ ಎಂದು ಗುರುತಿಸಲಾಗಿದೆ. ಇಬ್ಬರ ಬಳಿ ಇದ್ದ ಆರು ಪಿಸ್ತೂಲ್ ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

      ಇಬ್ಬರು ಬಂಧಿತ ಉಗ್ರರಿಂದ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಇಬ್ಬರೂ ಉಗ್ರರ ಮೇಲೆ ಪಂಜಾಬ್‌ನಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು.

      ಉಗ್ರರ ಸಂಚಾರದ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಅವರು ವಾಯುವ್ಯ ದೆಹಲಿಯಲ್ಲಿ ಸಂಚಾರ ನಡೆಸುವಾಗ ಬಂಧಿಸಲು ಪ್ರಯತ್ನಿಸಿದರು. ಆಗ ಪೊಲೀಸರ ಮೇಲೆ ಉಗ್ರರು ಗುಂಡು ಹಾರಿಸಿದರು. ಆಗ ಗುಂಡಿನ ಚಕಮಕಿ ನಡೆದಿದೆ.

      ಬಿಕೆಐ ಸಿಖ್ ಮೂಲಭೂತವಾದಿಗಳ ಪ್ರಮುಖ ಸಂಘಟನೆಯಾಗಿದೆ. ಪ್ರತ್ಯೇಕ ಸಿಖ್ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಈ ಸಂಘಟನೆ ಹೋರಾಟ ನಡೆಸುತ್ತಿದೆ. ಆಗಾಗ ಪೊಲೀಸರ ಮೇಲೆ ದಾಳಿಗಳನ್ನು ಸಹ ಇದು ನಡೆಸುತ್ತದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+