ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವಕ್ಕೆ ಕಾರಣವಾದ ಇದೊಂದು ಘಟನೆ!
ನವದೆಹಲಿ, ಮೇ 11: ಮಂಗಳವಾರ ರಾತ್ರಿ ದೆಹಲಿ-ಮೀರತ್ ಕಾರಿಡಾರ್‌ನ 50 ಟನ್ ಸಿಮೆಂಟೆಡ್ ವಿಭಾಗವು ಕ್ರೇನ್ ತಂತಿ ತುಂಡಾಗಿ ರಸ್ತೆಯ ಮೇಲೆ ಬಿದ್ದಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಈ ಘಟನೆಯಿಂದ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಪ್ರಾಥಮಿಕ ವರದಿಯ ಪ್ರಕಾರ ದೆಹಲಿ ಅಗ್ನಿಶಾಮಕ ದಳ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ದೆಹಲಿ-ಮೀರತ್ ಕಾರಿಡಾರ್‌ನ 50 ಟನ್ ಸಿಮೆಂಟೆಡ್ ವಿಭಾಗದ ಹಠಾತ್ ಕುಸಿತದಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
50 ಟನ್ ತೂಕದ ಭಾರೀ ಸಿಮೆಂಟೆಡ್ ವಿಭಾಗದ ಹಠಾತ್ ಕುಸಿತದಿಂದ ಸ್ಥಳದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಸ್ಥಳೀಯರು ಕೂಡ ಭೂಕಂಪನ ಸಂಭವಿಸುತ್ತಿದೆಯೇ? ಎಂದು ಭಾವಿಸಿದ್ದರು. ಆದರೆ ತದನಂತರದಲ್ಲಿ ಈ ಸಿಮೆಂಟೆಡ್ ವಿಭಾಗದ ಕುಸಿತದಿಂದ ಭೂಮಿ ಕಂಪಿಸಿದಂತಾಗಿದೆ ಎಂಬುದು ತಿಳಿದು ಬಂದಿದೆ.

ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ: ದೆಹಲಿ-ಮೀರತ್ ಕಾರಿಡಾರ್‌ನ 50 ಟನ್ ಸಿಮೆಂಟೆಡ್ ವಿಭಾಗವು ಗೊತ್ತುಪಡಿಸಿದ ಮೀಸಲು ಪ್ರದೇಶದೊಳಗೆ ಬಿದ್ದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಎರಡು ಸೇತುವೆಗಳನ್ನು ಸಂಪರ್ಕಿಸಲು ಈ ವಿಭಾಗವನ್ನು ನಿರ್ಮಿಸಲಾಗಿತ್ತು.












Click it and Unblock the Notifications