ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ನಗರಸಭೆಯಲ್ಲಿ ಜಯಭೇರಿ ಬಾರಿಸಲಿದೆ ಬಿಜೆಪಿ: ಸಮೀಕ್ಷೆ

ದೆಹಲಿ ನಗರಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದೆ ಬಿಜೆಪಿ ಎಂದು ಸಮೀಕ್ಷೆಯೊಂದು ಹೇಳಿದೆ. ಅದರ ಪ್ರಕಾರ ಎಎಪಿ ಹಾಗೂ ಕಾಂಗ್ರೆಸ್ ಎರಡು, ಮೂರನೇ ಸ್ಥಾನದಲ್ಲಿ ನಿಲ್ಲಲಿವೆಯಂತೆ. ಹಾಗಿದ್ದರೆ ಸಮೀಕ್ಷೆ ಏನು ಹೇಳುತ್ತದೆ ಎಂದು ತಿಳಿಯಲು ಈ ವರದಿ ಓದಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಏಪ್ರಿಲ್ 21: ದೆಹಲಿ ನಗರಸಭೆಯಲ್ಲಿ ಬಿಜೆಪಿ ಭಾರೀ ಗೆಲುವು ಪಡೆಯಲಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆ ನಡೆಸಿದ್ದು, ದೆಹಲಿಯ ನಗರಸಭೆ ಮೂರು ವಿಭಾಗದಲ್ಲೂ ಬಿಜೆಪಿ ಜಯ ಸಾಧಿಸಲಿದೆ ಎನ್ನಲಾಗಿದೆ. ಆಮ್ ಆದ್ಮಿ ಪಕ್ಷವು ಎರಡನೇ ಹಾಗೂ ಕಾಂಗ್ರೆಸ್ ಕನಿಷ್ಠ ಸ್ಥಾನದೊಂದಿಗೆ ಮೂರನೇ ಪಕ್ಷವಾಗಲಿದೆಯಂತೆ.

ಪಂಜಾಬ್ ಹಾಗೂ ಗೋವಾ ವಿಧಾನಸಭೆ ಚುನಾವಣೆಯಲ್ಲಿ ನಿರೀಕ್ಷೆಗಿಂತ ಹೀನಾಯವಾಗಿ ಸೋತ ಎಎಪಿಗೆ ದೆಹಲಿ ನಗರಸಭೆ ಚುನಾವಣೆ 2017 ತುಂಬಾ ಮುಖ್ಯವಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದವರ ಪೈಕಿ ಶೇಕಡಾ 36ರಷ್ಟು ಮಂದಿ ಬಿಜೆಪಿ ಪರ, 26ರಷ್ಟು ಎಎಪಿ ಹಾಗೂ 17ರಷ್ಟು ಮಂದಿ ಕಾಂಗ್ರೆಸ್ ಪರ ಒಲವು ತೋರಿದ್ದಾರೆ.[ಗೂಟದ ಕಾರಿನ ಬಳಕೆ ನಿಂತರೆ ಖುಷಿ ಪಡೋರು ಪೊಲೀಸರು!]

Delhi MCD elections 2017: Survey predicts mammoth BJP win

ಉತ್ತರ ಹಾಗೂ ದಕ್ಷಿಣ ದೆಹಲಿ ನಗರಸಭೆಯಲ್ಲಿ ತಲಾ ನೂರಾನಾಲ್ಕು ಸ್ಥಾನಗಳಿವೆ. ಪೂರ್ವ ನಗರಸಭೆಯಲ್ಲಿ ಅರವತ್ನಾಲ್ಕು ವಾರ್ಡ್ ಗಳಿವೆ. ಚುನಾವಣೆ ಪ್ರಚಾರದ ಆರಂಭದಿಂದಲೂ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದೆ. ಕೇಂದ್ರ ಸಚಿವ ವಿಜಯ್ ಗೋಯಲ್, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿದ್ದು, ಇನ್ನೂರಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ನಂಬಿಕೆಯಲ್ಲಿದ್ದಾರೆ.

ಸದ್ಯಕ್ಕೆ ಬಿಜೆಪಿಯ ನೂರಾ ಐವತ್ಮೂರು ಬಿಜೆಪಿ ಕೌನ್ಸಿಲರ್ ಗಳಿದ್ದಾರೆ. ಆದರೆ ಈ ಪೈಕಿ ಯಾರಿಗೂ ಬಿಜೆಪಿ ಮತ್ತೆ ಟಿಕೆಟ್ ನೀಡಿಲ್ಲ. ದೆಹಲಿ ನಗರಸಭೆ ಚುನಾವಣೆ ಏಪ್ರಿಲ್ ಇಪ್ಪತ್ಮೂರರಂದು ನಡೆಯಲಿದೆ.

English summary
The MCD elections in Delhi will be won by the BJP, a survey states. The ABP New-C Voter survey says that the BJP is set to win the three wings of the MCD. The AAP is set to come second and Congress a distant third. The MCD elections 2017 is crucial for the AAP after the party suffered a spate of defeats in Punjab and Goa in the recently concluded assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X