ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆ ಸ್ಥಾನಮಾನವಿಲ್ಲ: ದೆಹಲಿ HC
ನವದೆಹಲಿ, ಜುಲೈ 26: 'ವಂದೇ ಮಾತರಂ' ಗೀತೆಗೆ ರಾಷ್ಟ್ರಗೀತೆ 'ಜನಗಣಮನ'ಕ್ಕೆ ನೀಡಿದ ಸಮಾನ ಸ್ಥಾನವನ್ನೇ ನೀಡಬೇಕು ಎಂದು ಹೂಡಲಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾ ಮಾಡಿದೆ.
ಬಿಜೆಪಿ ಮುಖಂಡ, ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಎಂಬುವವರು ಅರ್ಜಿ ಸಲ್ಲಿಸಿ, 'ಜನಗಣಮನ'ಕ್ಕೆ ನೀಡಿದ ರಾಷ್ಟ್ರಗೀತೆ ಸ್ಥಾನಮಾನವನ್ನೇ 'ವಂದೇ ಮಾತರಂ' ಗೀತೆಗೂ ನೀಡಬೇಕು ಎಂದು ಅರ್ಜಿ ಹೂಡಿದ್ದರು.
ಅಷ್ಟೇ ಅಲ್ಲ, ರಾಷ್ಟ್ರೀಯ ನೀತಿಯೊಂದನ್ನು ರೂಪಿಸಿ, ಈ ಎರಡು ಗೀತೆಗಳನ್ನೂ ರಾಷ್ಟ್ರಗೀತೆಗಳೆಂದು ಪರಿಗಣಿಸಿ, ಅವುಗಳ ಪ್ರಚಾರಕ್ಕೆ ಮತ್ತು ಅವುಗಳನ್ನು ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ಹಾಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ಮಾಡಬೇಕು ಎಂದು ಅಶ್ವಿನ್ ಕುಮಾರ್ ಮನವಿ ಮಾಡಿದ್ದರು.

2017 ರಲ್ಲೂ ಇದೇ ರೀತಿಯ ಅರ್ಜಿಯನ್ನು ವ್ಯಕ್ತಿಯೊಬ್ಬರು ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಆಗ ಪ್ರತಿಕ್ರಿಯೆ ನೀಡಿದ್ದ ದೆಹಲಿ ನ್ಯಾಯಾಲಯ, 'ವಂದೇ ಮಾತರಂ ಗೀತೆಗೆ ವಿಭಿನ್ನ ಮತ್ತು ವಿಶೇಷ ಸ್ಥಾನವಿದೆ. ಅದನ್ನು ರಾಷ್ಟ್ರಗೀತೆ ಎಂದು ಪರಿಗಣಿಸುವುದಕ್ಕೆ ಬರುವುದಿಲ್ಲ' ಎಂದಿತ್ತು.
'ವಂದೇ ಮಾತರಂ' ಗೀತೆಯನ್ನು ಬಂಕೀಮ್ ಚಂದ್ರ ಚಟರ್ಜಿ ಅವರು ಬರೆದಿದ್ದರೆ, 'ಜನಗಣಮನ' ಗೀತೆಯನ್ನು ನೊಬೆಲ್ ವಿಜೇತ ಕವಿ ರವೀಂದ್ರನಾಥ್ ಠಾಗೋರ್ ಬರೆದಿದ್ದರು.












Click it and Unblock the Notifications