ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

66 ಖಾಸಗಿ ಮದ್ಯದಂಗಡಿ ತೆರೆಯಲು ದೆಹಲಿ ಸರ್ಕಾರ ಅನುಮತಿ

|
Google Oneindia Kannada News

ದೆಹಲಿ, ಮೇ 23: ಲಾಕ್‌ಡೌನ್‌ ವೇಳೆ ಮದ್ಯದಂಗಡಿ ತೆರೆಯಲು ಅನುಮತಿ ಕೊಟ್ಟಿದ್ದಕ್ಕೆ ಅನೇಕ ಕಡೆ ವಿರೋಧ ವ್ಯಕ್ತವಾಗಿತ್ತು. ಆದರೆ, ರಾಜ್ಯ ಸರ್ಕಾರಗಳ ಆರ್ಥಿಕ ಸ್ಥಿತಿ ಸುಧಾರಿಸಲು ಮದ್ಯದಂಗಡಿ ತೆರೆಯುವುದು ಅನಿವಾರ್ಯವಾಗಿತ್ತು. ಹಾಗಾಗಿ, ಮೂರನೇ ಲಾಕ್‌ಡೌನ್‌ ಸಂದರ್ಭದಲ್ಲಿಯೇ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿತ್ತು.

Recommended Video

ದೇವೇಗೌಡರ ಹುಟ್ಟುಹಬ್ಬದಂದು ಡಿಕೆಶಿ ಜೊತೆ ಲಂಚ್ | Deve gowda , DKS | Oneindia Kannada

ಇದೀಗ, ದೆಹಲಿ ಸರ್ಕಾರ ಖಾಸಗಿ ಮದ್ಯದಂಗಡಿಗಳನ್ನು ಓಪನ್ ಮಾಡಲು ಅವಕಾಶ ಕೊಟ್ಟಿದೆ. ಶುಕ್ರವಾರದಿಂದ 66 ಖಾಸಗಿ ಮದ್ಯದಂಗಡಿ ತೆರೆಯಲು ದೆಹಲಿ ಅಬಕಾರಿ ಇಲಾಖೆ ಅನುಮತಿ ನೀಡಿದೆ.

ಏಮ್ಸ್ ಆಸ್ಪತ್ರೆಯ ಆಶ್ರಯ ಕೇಂದ್ರದಲ್ಲಿ 21 ಜನರಿಗೆ ಕೊರೊನಾ ಸೋಂಕು ಏಮ್ಸ್ ಆಸ್ಪತ್ರೆಯ ಆಶ್ರಯ ಕೇಂದ್ರದಲ್ಲಿ 21 ಜನರಿಗೆ ಕೊರೊನಾ ಸೋಂಕು

ಬೆಳಿಗ್ಗೆ 9 ರಿಂದ ಸಂಜೆ 6:30 ರವರೆಗೆ ತೆರೆಯಲು ಅವಕಾಶ ಕೊಟ್ಟಿದ್ದು, ಸರ್ಕಾರದ ಆದೇಶದ ಅನುಸಾರ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಿದೆ. ಜೊತೆ ಸಮ ಮತ್ತು ಬೆಸ ನಿಯಮವನ್ನು ಅನುಸರಿಸಲು ಸೂಚಿಸಲಾಗಿದೆ. ಇನ್ನುಳಿದಂತೆ ಮಾಲ್‌ಗಳಲ್ಲಿನ ಮದ್ಯದಂಗಡಿಗಳು ತೆರೆಯಲು ಅವಕಾಶ ಇಲ್ಲ.

Delhi govt allows 66 private liquor shop from friday

ದೆಹಲಿಯಲ್ಲಿ ಒಟ್ಟು 863 ಮದ್ಯದಂಗಡಿಗಳಿವೆ. ಇದರಲ್ಲಿ 475 ಅಂಗಡಿಗಳು, ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ, ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ, ನಾಗರಿಕ ಸರಬರಾಜು ನಿಗಮ ಮತ್ತು ಗ್ರಾಹಕರ ಸಹಕಾರಿ ಸಗಟು ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಉಳಿದಂತೆ 389 ಅಂಗಡಿಗಳು ಖಾಸಗಿ ವ್ಯಕ್ತಿಗಳ ಒಡೆತನದಲ್ಲಿದೆ. ಈ 389 ರಲ್ಲಿ, ಸುಮಾರು 150 ಶಾಪಿಂಗ್ ಮಾಲ್‌ಗಳಲ್ಲಿವೆ. ಹಾಗಾಗಿ, ಅವುಗಳು ಮೇ 31ರವರೆಗೂ ತೆರೆಯಲು ಅನುಮತಿ ಇಲ್ಲ.

ದೆಹಲಿ ಸರ್ಕಾರ ಸೋಮವಾರ ಲಾಕ್‌ಡೌನ್ 4ರ ಮಾರ್ಗಸೂಚಿ ಹೊರಡಿಸಿತ್ತು. ಎಲ್ಲಾ ಮಾರುಕಟ್ಟೆಗಳು ಮತ್ತು ಮಾರುಕಟ್ಟೆ ಸಂಕೀರ್ಣಗಳನ್ನು ಬೆಸ-ಸಮ-ಆಧಾರದ ಮೇಲೆ ತೆರೆಯಲು ಅವಕಾಶ ಮಾಡಿಕೊಟ್ಟಿತು. ಇದರರ್ಥ ಕೇವಲ 50ರಷ್ಟು ಅಂಗಡಿಗಳನ್ನು ಮಾತ್ರ ತೆರೆಯಬೇಕು.

''ಅಗತ್ಯವಸ್ತುಗಳು ಸೇರಿದಂತೆ ಪುಸ್ತಕಗಳು, ಲೇಖನ ಸಾಮಗ್ರಿಗಳು, ಫ್ಯಾನ್ ಅಂಗಡಿಗಳನ್ನು ಎಲ್ಲಾ ದಿನಗಳಲ್ಲಿ ತೆರೆಯಲು ಅನುಮತಿ ಇದೆ" ಎಂದು ದೆಹಲಿ ಸರ್ಕಾರದ ಆದೇಶದಲ್ಲಿ ತಿಳಿಸಿದೆ.

English summary
Delhi government's excise department Allows 66 Private Liquor Shops to Reopen from friday (may 23rd).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X