ಮೊಯ್ಲಿ ಸೇರಿದಂತೆ ನಾಲ್ವರ ವಿರುದ್ಧ ಆಮ್ ಆದ್ಮಿ FIR

ಇದೀಗತಾನೆ (ಮಂಗಳವಾರ) ದೆಹಲಿಯಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲಾ ಅವರು CNG ಸರಬರಾಜು, ಬೆಲೆ ನಿಗದಿ ಸಂಬಂಧ ಭ್ರಷ್ಟ್ರಾಚಾರ ನಡೆಸಿರುವ ಈ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಈ ನಾಲ್ವರ ವಿರುದ್ಧ ತಮ್ಮ ಸರಕಾರಕ್ಕೆ ದೂರೊಂದು ಬಂದಿದೆ. ಹಾಗಾಗಿ, ತಾನು FIR ದಾಖಲಿಸುವಂತೆ ಸೂಚಿಸಿದ್ದೇನೆ ಎಂದು ಸಿಎಂ ಕೇಜ್ರಿವಾಲಾ ಮಾಧ್ಯಮಗಳಿಗೆ ತಿಳಿಸಿದರು.
ಮುಕೇಶ್ ಅಂಬಾನಿ ಮಾಲೀಕತ್ವದ RIL ಕಂಪನಿಯು ಉತ್ಪಾದನಾ ವೆಚ್ಚವನ್ನು ಆಧರಿಸಿ CNG ಅನಿಲ ದರ ನಿಗದಿ ಪಡಿಸಿಲ್ಲ. ಜತೆಗೆ ಅದು ದೇಶದಲ್ಲಿ ಅನಿಲದ ಕೃತಕ ಅಭಾವ ಸೃಷ್ಟಿಸಿದೆ ಎಂದು ಆಪಾದಿಸಿದರು.
ಕೃಷ್ಣ-ಗೋದಾವರಿ ತೈಲ ನಿಕ್ಷೇಪದಿಂದ ಅನಿಲ ಸರಬರಾಜು ಮಾಡುವ RIL ಕಂಪನಿಯು ದುಪ್ಪಟ್ಟು ದರದಲ್ಲಿ ಅನಿಲ ಮಾರಾಟ ಮಾಡುತ್ತಿದೆ. ಇದರಿಂದ ಭಾರಿ ಲಾಭ ಮಾಡಿಕೊಳ್ಳುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಆಪಾದಿಸಿದ್ದಾರೆ.
ಹಿಂದಿನ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ವಿಧಾನಸಭೆ ಚುನಾವಣೆಗೂ ಮುನ್ನ ರಿಲಯನ್ಸ್ ಅಂಬಾನಿಯಿಂದ ಚುನಾವಣಾ ವೆಚ್ಚಕ್ಕಾಗಿ ಲಂಚ ಪಡೆದಿವೆ. ಹಾಗಾಗಿ RIL ಕಂಪನಿಯ ಅಕ್ರಮದ ಬಗ್ಗೆ ಚಕಾರವೆತ್ತಿಲ್ಲ ಎಂದೂ ಸಿಎಂ ಕೇಜ್ರಿವಾಲಾ ಗಂಭೀರ ಆರೋಪ ಮಾಡಿದರು.












Click it and Unblock the Notifications