ಎಲೆಕ್ಟ್ರಿಕ್ ಕಾರು ಖರೀದಿಗೆ ಸರ್ಕಾರದಿಂದ 1.5ಲಕ್ಷ ರೂಪಾಯಿ ರಿಯಾಯಿತಿ
ನವದೆಹಲಿ, ಆಗಸ್ಟ್ 07: ದೇಶದಲ್ಲಿ ವಾಯು ಮಾಲಿನ್ಯವನ್ನು ತಗ್ಗಿಸಲು, ತೈಲ ಆಮದನ್ನು ಕಡಿಮೆಗೊಳಿಸಲು ಎಲೆಕ್ಟ್ರಿಕ್ ವಾಹನಗಳಿಗೆ ಕೇಂದ್ರ ಸರ್ಕಾರ ಪ್ರಾಶಸ್ತ್ಯ ನೀಡುತ್ತಿದೆ. ಇದೇ ಭಾಗವಾಗಿ ದೆಹಲಿ ಸರ್ಕಾರವು ಮಾಲಿನ್ಯವನ್ನು ಕಡಿಮೆ ಮಾಡಲು ವೇಗವಾಗಿ ಕೆಲಸ ಪ್ರಾರಂಭಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದವರಿಗೆ ಸರ್ಕಾರ ಆಫರ್ ನೀಡಿದ್ದು, ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.

ದೆಹಲಿಯ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯನ್ನು ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಲಿನ್ಯವನ್ನು ನಿಲ್ಲಿಸಿ ಆರ್ಥಿಕತೆಯನ್ನು ವೇಗಗೊಳಿಸುವುದು ಅವರ ಉದ್ದೇಶವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ, ಯಾವ ಎಲೆಕ್ಟ್ರಿಕ್ ವಾಹನಗಳಿಗೆ ಎಷ್ಟು ರಿಯಾಯಿತಿ ಸಿಗುತ್ತದೆ ಎಂದು ತಿಳಿಸಲಾಗಿದೆ.
tweet:Launching Electric Vehicle Policy, which aims to reduce pollution levels and generate employment in the city Press conference | LIVE https://t.co/2pnr1wbMhj
— Arvind Kejriwal (@ArvindKejriwal) August 7, 2020
ಎಲೆಕ್ಟ್ರಿಕ್ ವಾಹನಗಳಿಗೆ ಎಷ್ಟು ರಿಯಾಯಿತಿ:
ಎಲೆಕ್ಟ್ರಿಕ್ ಬೈಕ್‌ಗೆ 30 ಸಾವಿರ ರಿಯಾಯಿತಿ
ಎಲೆಕ್ಟ್ರಿಕ್ ಕಾರಿನ ಮೇಲೆ 1.5ಲಕ್ಷ ರಿಯಾಯಿತಿ
ಎಲೆಕ್ಟ್ರಿಕ್ ಆಟೋಗೆ 30 ಸಾವಿರ ವರೆಗೆ ರಿಯಾಯಿತಿ
ಎಲೆಕ್ಟ್ರಿಕ್ ಸರಕು ವಾಹನಗಳಿಗೆ 30 ಸಾವಿರ ವರೆಗೆ ರಿಯಾಯಿತಿ












Click it and Unblock the Notifications