ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ದೆಹಲಿ ಚುನಾವಣೆ ಎಕ್ಸಿಟ್ ಪೋಲ್ ಫಲಿತಾಂಶ: ಎಎಪಿಗೆ ಬಹುಮತ, ಬಿಜೆಪಿಗೆ ಸೋಲು, ಕಾಂಗ್ರೆಸ್‌ಗೆ ಮುಖಭಂಗ

|
Google Oneindia Kannada News

ನವದೆಹಲಿ, ಫೆಬ್ರವರಿ 08: ದೆಹಲಿ ವಿಧಾನಸಭೆ ಚುನಾವಣೆಗೆ ಮತದಾನ ಪ್ರಕ್ರಿಯೆ ಶನಿವಾರ ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಮತದಾನವು ಬಹುತೇಕ ಶಾಂತಿಯುತವಾಗಿದೆ ನಡೆದಿದೆ.

ದೆಹಲಿಯ ಚುಮು-ಚುಮು ಚಳಿಯಲ್ಲಿ ರಾಜಕೀಯ ಬಿಸಿಯೇರಿದ್ದು, ಬಿಜೆಪಿ-ಎಎಪಿ-ಕಾಂಗ್ರೆಸ್ ಪಕ್ಷಗಳು ರಾಷ್ಟ್ರ ರಾಜಧಾನಿಯ ಗದ್ದುಗೆ ಏರಲು ಭಾರಿ ನಡೆಸಿದ್ದ ಭಾರಿ ಪೈಪೋಟಿಗೆ ಜನರು ಇಂದು ಮತತೀರ್ಪು ನೀಡಿದ್ದಾರೆ. ಫಲಿತಾಂಶ ಫೆಬ್ರವರಿ 11 ರಂದು ಪ್ರಕಟವಾಗಲಿದೆ.

ಒಟ್ಟು 672 ಅಭ್ಯರ್ಥಿಗಳು ದೆಹಲಿ ಚುನಾವಣಾ ಕಣದಲ್ಲಿದ್ದಾರೆ. ಮತದಾನವು ಸುಗಮವಾಗಿ ನಡೆಯಲೆಂದು ಭಾರಿ ಭದ್ರತೆ ಆಯೋಜಿಸಲಾಗಿತ್ತು, ನಲವತ್ತು ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಇವರ ಜೊತೆಗೆ ಕೇಂದ್ರೀಯ ಸಶಸ್ತ್ರ ದಳದ ತಂಡಗಳೂ ಇದ್ದವು.

Delhi Elections 2020 Live Updates in Kannada

ನವದೆಹಲಿ ವಿಧಾನಸಭೆ ಕ್ಷೇತ್ರದಲ್ಲಿ ಅತಿಹೆಚ್ಚು 28 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದೇ ಕ್ಷೇತ್ರದಿಂದ ಅರವಿಂದ ಕೇಜ್ರಿವಾಲ್ ಸಹ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಿಜೆಪಿಯ ಮನೋಜ್ ತಿವಾರಿ, ಮನೀಶ್‌ ಸಿಸೋಡಿಯಾ ಸೇರಿ ಹಲವು ಪ್ರಮುಖರು ಚುನಾವಣಾ ಕಣದಲ್ಲಿದ್ದಾರೆ.

Newest FirstOldest First
7:04 PM, 8 Feb

ಹೆಚ್ಚು ವಿಶ್ವಾಸಾರ್ಹ ಸಮೀಕ್ಷಾ ಸಂಸ್ಥೆ ಸಿ-ವೋಟರ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಎಎಪಿ ಯು 49-63 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿಯು 5-19 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನಾಲ್ಕು ಸ್ಥಾನಗಳಲ್ಲಿ ಗೆಲ್ಲಬಹುದು ಎನ್ನಲಾಗಿದೆ.
6:42 PM, 8 Feb

ನ್ಯೂಸ್ ಎಕ್ಸ್‌-ಪೋಲ್‌ಸ್ಟಾರ್ ಸಮೀಕ್ಷೆ ಪ್ರಕಾರ ಎಎಪಿಯು 52-56 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿಯು 10-14 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ 0-2 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.
6:38 PM, 8 Feb

ಇಂಡಿಯಾ ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ ಎಎಪಿ ಯು 55 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿಯು 14 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಇತರೆ ಸೊನ್ನೆ.
6:36 PM, 8 Feb

ಜನ್‌-ಕೀ-ಬಾತ್ ಮತ್ತು ರಿಪಬ್ಲಿಕ್ ಟಿವಿ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಎಎಪಿ ಭಾರಿ ಬಹುಮತ ಗಳಿಸಲಿದೆ. ಎಎಪಿಯು 41-61 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿಯು 9-21 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ ಸೊನ್ನೆ ಅಥವಾ ಒಂದು ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ.
6:33 PM, 8 Feb

ಟೈಮ್ಸ್‌ ನೌ-ಐಪಿಎಸ್‌ಓಎಸ್ ಸಮೀಕ್ಷೆ ಪ್ರಕಾರ ದೆಹಲಿಯಲ್ಲಿ ಎಎಪಿಯು ಮತ್ತೆ ಅಧಿಕಾರ ಹಿಡಿಯಲಿದೆ. ಸಮೀಕ್ಷೆ ಪ್ರಕಾರ ಎಎಪಿಯು 44 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿದ್ದರೆ. ಬಿಜೆಪಿಯು 26 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಪಕ್ಷವು ಒಂದೂ ಸ್ಥಾನದಲ್ಲಿ ಗೆಲ್ಲುತ್ತಿಲ್ಲ.
6:24 PM, 8 Feb

ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಅಂತ್ಯವಾಗಿದ್ದು, ಕೆಲವೇ ಕ್ಷಣಗಳಲ್ಲಿ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಲಿದೆ.
6:19 PM, 8 Feb

ಮತದಾನ ಅಂತ್ಯ ಸಮಯ 6 ಗಂಟೆಗೆ 54.65% ರಷ್ಟು ಮತದಾನ ನಡೆದಿದೆ. ಇದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಗಿದ್ದ ಮತದಾನಕ್ಕಿಂತಲೂ 12% ಕಡಿಮೆ. 2015 ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ 67% ಮತದಾನವಾಗಿತ್ತು.
Advertisement
6:18 PM, 8 Feb

ದೆಹಲಿ ಚುನಾವಣೆ ಮತದಾನವು ಅಂತ್ಯವಾಗಿದ್ದು, ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಕೆಲವೇ ಕ್ಷಣದಲ್ಲಿ ಪ್ರಕಟವಾಗಲಿದೆ.
6:04 PM, 8 Feb

ದೆಹಲಿ ವಿಧಾನಸಭೆ ಚುನಾವಣೆಗೆ ಮತದಾನ ಸಮಯ ಮುಕ್ತಾಯವಾಗಿದೆ. ಮತದಾನಕ್ಕಾಗಿ ಸಾಲಿನಲ್ಲಿ ನಿಂತಿದ್ದ ಮತದಾರರಿಗೆ ಮಾತ್ರವೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.
5:56 PM, 8 Feb

ದೆಹಲಿ ಚುನಾವಣೆ ಮತದಾನ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇದ್ದು, ಕೊನೆಯ ಒಂದು ಗಂಟೆಯಲ್ಲಿ ಮತದಾನ ಬಿರುಸು ಪಡೆದುಕೊಂಡಿದೆ.
5:08 PM, 8 Feb

ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಚುನಾವಣೆಯಲ್ಲಿ ಹಣ ಹಂಚಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಗಿರಿರಾಜ್ ಸಿಂಗ್, 'ನಾನು ಅಂಗಡಿಗೆ ಹೋಗಿ ಕೆಲವು ವಸ್ತುಗಳನ್ನು ತೆಗೆದುಕೊಂಡು ಹಣ ಕೊಟ್ಟೆ, ಆ ಅಂಗಡಿಯವನು ನನಗೆ ಪರಿಚನೇ ಆಗಿದ್ದ' ಎಂದು ಹೇಳಿದ್ದಾರೆ.
4:25 PM, 8 Feb

4 ಗಂಟೆ ವೇಳೆಗೆ ದೆಹಲಿ ಚುನಾವಣೆಗೆ 42.70% ಮತದಾನವಾಗಿದೆ. ಆರು ಗಂಟೆಗೆ ಮತದಾನ ಮುಕ್ತಾಯವಾಗಲಿದೆ.
Advertisement
3:15 PM, 8 Feb

3 ಗಂಟೆಯ ವೇಳೆಗೆ ಶೇ 30.11ರಷ್ಟು ಮತದಾನ ವರದಿಯಾಗಿದೆ.
3:01 PM, 8 Feb

ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ನವದೆಹಲಿ ಕ್ಷೇತ್ರದ ಕಾಮರಾಜ್ ಲೇನ್‌ನಲ್ಲಿ ಮತ ಚಲಾಯಿಸಿದರು.
3:00 PM, 8 Feb

ಪ್ರತಿ ಅಭ್ಯರ್ಥಿಯೂ ಮತಗಟ್ಟೆಗೆ ಭೇಟಿ ನೀಡಿ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ. ನಾನು ಮತಗಟ್ಟೆಯಿಂದ ಹೊರಬರುವಾಗ ಎಎಪಿ ಅಭ್ಯರ್ಥಿಯ ಅಭ್ಯರ್ಥಿ ಮಗ ತಮ್ಮನ್ನು ಮತಗಟ್ಟೆ ಒಳಗೆ ಬಿಡುವಂತೆ ಪೊಲೀಸರ ಬಳಿ ವಾದಿಸುತ್ತಿದ್ದದ್ದನ್ನು ನೋಡಿದೆ. ಎಎಪಿ ಕಾರ್ಯಕರ್ತ ಹರ್ಮಿಶ್ ನನ್ನನ್ನು ನಿಂದಿಸಿದರು. ನಾನು ಅವರನ್ನು ಕಳೆದ ಹಲವು ವರ್ಷಗಳಿಂದ ಬಲ್ಲೆ. ಕಳೆದ ವರ್ಷ ಪೊಲೀಸರು ಅವರನ್ನು ಠಾಣೆಗೆ ಕರೆದೊಯ್ದಿದ್ದರು- ಅಲ್ಕಾ ಲಂಬಾ
2:58 PM, 8 Feb

2.30ರ ವೇಳೆಗೆ ಶೇ 28.78ರಷ್ಟು ಮತದಾನವಾಗಿದೆ.
2:43 PM, 8 Feb

ಮಧ್ಯಾಹ್ನ 2 ಗಂಟೆಗೆ ವರದಿಯಾದಂತೆ ಚುನಾವಣೆಯಲ್ಲಿ ಶೇ 28.14ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2:41 PM, 8 Feb

ಈಗಿನ ಬಾಂಗ್ಲಾದೇಶದಲ್ಲಿ ಜನಿಸಿದ್ದ 111 ವರ್ಷದ ಕಲಿತಾರಾ ಮಂಡಲ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ರಾಜಧಾನಿಯಲ್ಲಿನ ಅತ್ಯಂತ ಹಿರಿಯ ಮತದಾರರೆನಿಸಿಕೊಂಡಿದ್ದಾರೆ.
1:33 PM, 8 Feb

ಮಧ್ಯಾಹ್ನ 1 ಗಂಟೆ ವೇಳೆಗೆ ದೆಹಲಿ ವಿಧಾನಸಭೆ ಚುನಾವಣೆಗೆ 19.37% ಮತದಾನ ದಾಖಲಾಗಿದೆ. ಮತದಾನವು 6 ಗಂಟೆಗೆ ಮುಕ್ತಾಯವಾಗಲಿದೆ.
12:55 PM, 8 Feb

ಕೇಜ್ರಿವಾಲ್ ಹನುಮ ದೇವರಿಗೆ ಅವಮಾನ ಮಾಡಿದ್ದಾರೆ, ದೇವರನ್ನು ಅಶುದ್ಧಗೊಳಿಸಿದ್ದಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಆರೋಪಿಸಿದ್ದಾರೆ. 'ಕೇಜ್ರಿವಾಲ್ ಚಪ್ಪಲಿ ಮುಟ್ಟಿದ ಕೈಗಳಲ್ಲೇ ದೇವರಿಗೆ ಹಾರ ಹಾಕಿದ್ದಾರೆ' ಎಂದು ತಿವಾರಿ ಹೇಳಿದ್ದಾರೆ. ಈ ಕುರಿತು ವಿಡಿಯೋವನ್ನೂ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
12:26 PM, 8 Feb

ಮಧ್ಯಾಹ್ನ 12 ವೇಳೆಗೆ ದೆಹಲಿ ಚುನಾವಣೆಯಲ್ಲಿ 15.68% ಮತದಾನವಾಗಿದೆ. ಸಂಜೆ 6 ಕ್ಕೆ ಮತದಾನ ಅಂತ್ಯವಾಗಲಿದೆ.
12:19 PM, 8 Feb

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪುತ್ರಿ ಪ್ರಿಯಾಂಕಾ ಗಾಂಧಿ ಅವರು ದೆಹಲಿ ವಿಧಾನಸಭಾ ಚುನಾವಣೆಗೆ ಮತ ಚಲಾವಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕಾ, 'ಪ್ರತಿಯೊಬ್ಬರು ಮತದಾನ ಮಾಡಿ' ಎಂದು ಕರೆ ನೀಡಿದರು.
12:17 PM, 8 Feb

ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಮತ್ತು ಪುತ್ರಿ ಪ್ರತಿಭಾ ಅಡ್ವಾಣಿ ಅವರು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿದರು.
12:16 PM, 8 Feb

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿ ಚುನಾವಣೆಗೆ ಮತ ಚಲಾಯಿಸಿದರು.
11:43 AM, 8 Feb

ದೆಹಲಿ ಚುನಾವಣೆ: ದೆಹಲಿಯ ಮಂಜುಲಾ ಟೇಲಾ ಬಳಿ ಕಾಂಗ್ರೆಸ್ ಮತ್ತು ಎಎಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಎಎಪಿಯ ಕಾರ್ಯಕರ್ತ ಒಬ್ಬರಿಗೆ ಕಪಾಳಕ್ಕೆ ಹೊಡೆಯಲು ಯತ್ನಿಸಿದ್ದಾರೆ. ಎಎಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ದೂರು ನೀಡುವುದಾಗಿ ಪೊಲೀಸರು ಹೇಳಿದ್ದಾರೆ.
10:51 AM, 8 Feb

ದೆಹಲಿ ವಿಧಾನಸಭಾ ಚುನಾವಣೆ: ಬೆಳಿಗ್ಗೆ 10 ಗಂಟೆ ವೇಳೆಗೆ 4.46% ಶೇಕಡಾ ಮತದಾನವಾಗಿದೆ.
10:48 AM, 8 Feb

ಬದರ್‌ಪುರ ಶಾಲೆಯಲ್ಲಿ ನಿರ್ಮಿಸಲಾಗಿದ್ದ ಬೂತ್‌ನ ಚುನಾವಣಾ ಅಧಿಕಾರಿ ಉದ್ದಮ್ ಸಿಂಗ್ ಎಂಬುವರು ಕರ್ತವ್ಯ ನಿರ್ವಹಿಸುತ್ತಿರುವ ವೇಳೆಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
10:43 AM, 8 Feb

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ತಾಯಿ-ತಂದೆ, ಪತ್ನಿ, ಮಗನ ಜೊತೆಗೆ ಆಗಮಿಸಿ ಮತದಾನ ಮಾಡಿದರು. ಮತದಾನಕ್ಕೂ ಮುನ್ನಾ ತಂದೆ-ತಾಯಿಯಿಂದ ಅವರು ಆಶೀರ್ವಾದ ಪಡೆದರು.
10:34 AM, 8 Feb

ರಾಷ್ಟ್ರಪತಿ ರಮಾನಾಥ ಕೋವಿಂದ್ ಮತ್ತು ಪತ್ನಿ ಸವಿತಾ ಕೋವಿಂದ್ ಅವರು ದೆಹಲಿಯ ರಾಜೇಂದ್ರ ಪ್ರಸಾದ್ ಕೇಂದ್ರಿಯ ವಿದ್ಯಾಲಯದಲ್ಲಿ ಮತ ಚಲಾವಣೆ ಮಾಡಿದರು.
9:26 AM, 8 Feb

ಕೆಲವು ಕಡೆಗಳಲ್ಲಿ ಮತಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಯಮುನಾ ವಿಹಾರ್‌ ಸಿ10 ಬ್ಲಾಕ್, ಸರ್ದಾರ್ ಪಟೇಲ್ ವಿದ್ಯಾಭವನ ಬೂತ್ ಸಂಖ್ಯೆ 114 ರಲ್ಲೂ ಇವಿಎಂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಚುನಾವಣಾ ಆಯೋಗದ ತಾಂತ್ರಿಕ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ.
READ MORE

English summary
Delhi Assembly Elections 2020 Live Updates in Kannada : Get all the live updates of Delhi assembly election news, voting updates, photos, videos and more on Kannada Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X