ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧನ ಭೀತಿಯಿಂದ ಮತ್ತೆ ಪಾರಾದ ಪಿ.ಚಿದಂಬರಂ ಆಂಡ್ ಸನ್

By Manjunatha
|
Google Oneindia Kannada News

ನವದೆಹಲಿ, ಆಗಸ್ಟ್ 07: ಏರ್ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ಸಿಲುಕಿ ಬಂಧನದ ಭೀತಿ ಎದುರಿಸುತ್ತಿದ್ದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಅವರ ಮಗ ಕಾರ್ತಿಗೆ ಅಲ್ಪ ನಿರಾಳ ದೊರಕಿದೆ.

ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಬಂಧನಕ್ಕೆ ಅನುಮತಿ ಕೋರಿ ಸಿಬಿಐ ಮತ್ತು ಇಡಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಚಿದಂಬರಂ ಹಾಗೂ ಮಗ ಕಾರ್ತಿಯ ಮಧ್ಯಂತರ ರಕ್ಷಣೆಯನ್ನು ಅಕ್ಟೋಬರ್ 08ರವರೆಗೆ ವಿಸ್ತರಿಸಿದೆ.

ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ ಮೇಲೆ ಸಿಬಿಐ ಚಾರ್ಜ್ ಶೀಟ್ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ: ಚಿದಂಬರಂ ಮೇಲೆ ಸಿಬಿಐ ಚಾರ್ಜ್ ಶೀಟ್

ಕೋರ್ಟ್ ಆದೇಶದಂತೆ ಪಿ.ಚಿದಂಬರಂ ಹಾಗೂ ಕಾರ್ತಿ ಅವರನ್ನು ಸಿಬಿಐ ಅಥವಾ ಇಡಿ ಅಕ್ಟೋಬರ್ 8 ರವರೆಗೆ ಬಂಧಿಸುವಂತಿಲ್ಲ. ಈ ಹಿಂದೆ ನ್ಯಾಯಾಲಯವು ಆಗಸ್ಟ್‌ 7ರವರೆಗೆ ಮಧ್ಯಂತರ ರಕ್ಷಣೆಯನ್ನು ನೀಡಿತ್ತು.

Delhi court extends interim protection for P Chidambaram, Karti

ಪ್ರಕರಣದ ಎಲ್ಲ ಸಾಕ್ಷ್ಯಗಳು ಡಾಕ್ಯುಮೆಂಟ್ ರೂಪದಲ್ಲಿದ್ದು, ಅವು ಈಗಾಗಲೇ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳ ವಶದಲ್ಲಿದೆ ಹಾಗಾಗಿ ಅವನ್ನು ತಿದ್ದುವ ಪ್ರಯತ್ನ ಮಾಡಲಾಗದು ಹಾಗಾಗಿ ಈ ಪ್ರಕರಣದಲ್ಲಿ ಯಾರನ್ನೂ ಬಂಧಿಸಬಾರದು ಎಂದು ಪಿ.ಚಿದಂಬರಂ ಅವರು ಮೇ 30 ರಂದು ನ್ಯಾಯಾಲಯದ ಮೊರೆ ಹೋಗಿದ್ದರು ಹಾಗಾಗಿ ಅವರಿಗೆ ಮಧ್ಯಂತರ ರಕ್ಷಣೆ ನೀಡಲಾಗಿತ್ತು.

ಚಿದಂಬರಂ-ಕಾರ್ತಿಗೆ ಮಧ್ಯಂತರ ರಕ್ಷಣೆ ಅವಧಿ ವಿಸ್ತರಣೆಚಿದಂಬರಂ-ಕಾರ್ತಿಗೆ ಮಧ್ಯಂತರ ರಕ್ಷಣೆ ಅವಧಿ ವಿಸ್ತರಣೆ

ಏರ್ ಸೆಲ್ ಮ್ಯಾಕ್ಸಿಸ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹಾಗೂ ಅವರ ಮಗ ಕಾರ್ತಿಯನ್ನು ಸಿಬಿಐ ಆರೋಪಿಗಳನ್ನಾಗಿ ಮಾಡಿದೆ. ಕಾರ್ತಿ ಮೇಲೆ 1.2 ಕೋಟಿ ಲಂಚ ಪಡೆದಿರುವ ಆರೋಪವೂ ಇದೆ.

English summary
Delhi court extends interim protection for P Chidambaram, Karti till october 8. CBI and ED can not arrest both Chidambaram and Karthi till october 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X