ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ: ಐಎಎಸ್ ಅಧಿಕಾರಿಯ ಪತ್ನಿ, ಪುತ್ರಿ ಆತ್ಮಹತ್ಯೆಗೆ ಶರಣು

By Mahesh
|
Google Oneindia Kannada News

ನವದೆಹಲಿ, ಜುಲೈ 19 : ಕಾರ್ಪೋರೇಟ್ ವ್ಯವಹಾರಗಳ ಮಹಾ ನಿರ್ದೇಶಕ ಬಿಕೆ ಬನ್ಸಲ್ ಅವರ ಪತ್ನಿ ಹಾಗೂ ಪುತ್ರಿ ತಮ್ಮ ಸ್ವಗೃಹದಲ್ಲಿ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ಕಾರ್ಪೋರೇಟ್ ವ್ಯವಹಾರಗಳ ಮಹಾ ನಿರ್ದೇಶಕ ಬಿ.ಕೆ. ಬನ್ಸಲ್ ಅವರ ಪತ್ನಿ ಹಾಗೂ ಪುತ್ರಿ ಮೃತ ದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಮಧು ವಿಹಾರ್ ನಲ್ಲಿರುವ ಅವರ ನಿವಾಸದಲ್ಲಿ ಪತ್ತೆಯಾಗಿದೆ.

Delhi: Corporate affairs DG BK Bansal's wife and daughter commit suicide

ಲಂಚ ಪ್ರಕರಣದಲ್ಲಿ ಸಿಲುಕಿರುವ ಬನ್ಸಲ್ ಅವರನ್ನು ಜುಲೈ 16 ರಂದು ಸಿಬಿಐ ತಂಡ ಬಂಧಿಸಿತ್ತು. ಕಾರ್ಪೋರೇಟ್ ಸಚಿವಾಲಯದ ಮಹಾನಿರ್ದೇಶಕ ಹುದ್ದೆಯಲ್ಲಿರುವ ಬನ್ಸಲ್ ಅವರು ಮಧ್ಯವರ್ತಿ ವಿಶ್ವದೀಪ್ ಬನ್ಸಲ್ ಮೂಲಕ ಲಂಚ ಪಡೆದು ಖಾಸಗಿ ವಲಯದ ಉದ್ದಿಮೆ ನೆರವು ನೀಡಿದ ಆರೋಪ ಹೊಂದಿದ್ದಾರೆ.

ಬನ್ಸಲ್ ಲಂಚ ಪಡೆದ ಸುದ್ದಿಯನ್ನು ನೋಡಿದ ಬನ್ಸಲ್ ಅವರ ಪತ್ನಿ ಹಾಗೂ ಪುತ್ರಿ ಆಘಾತಕ್ಕೊಳಗಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ.

ಬನ್ಸಲ್ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಕೇಸ್ ದಾಖಲಿಸಲಾಗಿದೆ. 9 ಲಕ್ಷ ರು ಲಂಚ ಪಡೆಯುವಾಗ ವಿಶ್ವದೀಪ್ ಹಾಗೂ ಬನ್ಸಲ್ ರನ್ ರೆಡ್ ಹ್ಯಾಂಡ್ ಆಗಿ ಸಿಬಿಐ ತಂಡ ಹಿಡಿದಿತ್ತು. ಆದರೆ, ಮುಂಬೈ ಮೂಲದ ಔಷಧ ಕಂಪನಿ ವಿಷಯಕ್ಕೆ ಸಂಬಂಧಿಸಿದಂತೆ 50 ಲಕ್ಷ ರೂ ಗಳಿಗೂ ಅಧಿಕ ಮೊತ್ತವನ್ನು ಬನ್ಸಲ್ ಡಿಮ್ಯಾಂಡ್ ಮಾಡಿದ್ದರು ಎಂಬ ಸುದ್ದಿಯಿದೆ.(ಪಿಟಿಐ)

English summary
Delhi: Corporate affairs DG BK Bansal's wife and daughter commit suicideArrested Corporate Affairs DG, BK Bansal's wife and daughter were found dead at their residence in Madhu Vihar, Delhi on Tuesday. Reportedly, the family members committed suicide by hanging themselves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X