ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಶೇ. 90ರಷ್ಟು ಜನರು ಕೊರೊನಾದಿಂದ ಗುಣಮುಖ: ಅರವಿಂದ್ ಕೇಜ್ರಿವಾಲ್

|
Google Oneindia Kannada News

ನವದೆಹಲಿ, ಆಗಸ್ಟ್‌ 10: ಇಡೀ ಜಗತ್ತು ಕೊರೊನಾದಿಂದ ಬಳಲುತ್ತಿರುವ ರೀತಿಯಲ್ಲಿ ಭಾರತವೂ ದಿನೇ ದಿನೇ ಕೊರೊನಾ ಸಂಖ್ಯೆಯ ಏರಿಕೆ ದಾಖಲಿಸಿದೆ. ಇದರ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಮನಾರ್ಹ ಫಲಿತಾಂಶ ಬಂದಿದೆ.

Recommended Video

ಪ್ರಪಂಚಕ್ಕೆ ಸಿಹಿಸುದ್ದಿ ಕೊಟ್ಟ ರಷ್ಯಾ | Oneindia Kannada

ಆರಂಭದ ದಿನಗಳಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದ್ದ ಅಗ್ರ ಐದು ರಾಜ್ಯಗಳಲ್ಲಿ ಗುರುತಿಸಿಕೊಂಡಿದ್ದ ದೆಹಲಿ ಕ್ರಮೇಣ ಭಾರೀ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾಗಿರುವುದಕ್ಕೆ ಸಾಕ್ಷಿಯಾಗಿದೆ.

ಕೊರೊನಾದಿಂದ ಮೃತಪಟ್ಟ ತಂದೆಯ ದೇಹ ತೋರಿಸಲು ಆಸ್ಪತ್ರೆ ವಿಧಿಸಿದ ಶುಲ್ಕ ಎಷ್ಟು ಗೊತ್ತೇ?ಕೊರೊನಾದಿಂದ ಮೃತಪಟ್ಟ ತಂದೆಯ ದೇಹ ತೋರಿಸಲು ಆಸ್ಪತ್ರೆ ವಿಧಿಸಿದ ಶುಲ್ಕ ಎಷ್ಟು ಗೊತ್ತೇ?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಾಜ್ಯದ ಕೊರೊನಾ ಸ್ಥಿತಿಗತಿ ಕುರಿತು ಟ್ವೀಟ್ ಮಾಡಿದ್ದು, ರಾಜಧಾನಿಯಲ್ಲಿ ಶೇ. 90ರಷ್ಟು ಜನರು ಗುಣಮುಖರಾಗಿದ್ದು, ಒಟ್ಟು ಪ್ರಕರಣಗಳಲ್ಲಿ ಕೇವಲ ಶೇಕಡಾ 7ರಷ್ಟು ಮಾತ್ರ ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.

tweet:

ನಿಧಾನವಾಗಿ ಮತ್ತು ಸ್ಥಿರವಾಗಿ ವೈರಸ್‌ ಅನ್ನು ಸೋಲಿಸುತ್ತಿರುವ ದೆಹಲಿಯ ಜನರನ್ನು ಶ್ಲಾಘಿಸಿದ ಕೇಜ್ರಿವಾಲ್, ತಮ್ಮ ಟ್ವಿಟರ್‌ನಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ದೆಹಲಿ ಮಾದರಿಯ ಮಹತ್ವವನ್ನು ಉಲ್ಲೇಖಿಸಿದ್ದಾರೆ.

Delhi Coronavirus: Over 90% Covid-19 Patients Recovered So Far Says CM

ದೈನಂದಿನ ಬುಲೆಟಿನ್ ಪ್ರಕಾರ, ಆಗಸ್ಟ್ 2 ರಿಂದ 4 ರವರೆಗೆ, ದೈನಂದಿನ ಪ್ರಕರಣಗಳು ಕ್ರಮೇಣ ಕುಸಿಯಿತು, ಇದು ಮೂರು ಅಂಕಿಗಳ ಸಂಖ್ಯೆಯನ್ನು ಕಂಡಿದೆ. ಆಗಸ್ಟ್ 2 (961), ಆಗಸ್ಟ್ 3 (805) ಮತ್ತು ಆಗಸ್ಟ್ 4 (674).

ಆದಾಗ್ಯೂ, ಆಗಸ್ಟ್ 5 ರಿಂದ 9 ರವರೆಗೆ, ದೈನಂದಿನ ಪ್ರಕರಣಗಳು 1,000 ಕ್ಕಿಂತ ಹೆಚ್ಚು ದಾಖಲಾಗಿದ್ದು, ಆಗಸ್ಟ್ 10 ರಂದು ಮತ್ತೆ ಮೂರು ಅಂಕಿಗಳ ಸಂಖ್ಯೆಗೆ ಇಳಿದಿದೆ.

English summary
Delhi chief minister Arvind Kejriwal on Monday said that over 90% of the Covid-19 patients in the national capital have recovered so far while only 7% of the total cases are active.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X