ಕೇಂದ್ರ V/S ರಾಜ್ಯ: ಸಾಂವಿಧಾನಿಕ ಪೀಠದಿಂದ ವಿಚಾರಣೆಗೆ ಶಿಫಾರಸು

ನವದೆಹಲಿ, ಮೇ 6: ದೆಹಲಿಯಲ್ಲಿರುವ ಸರಕಾರಿ ಇಲಾಖೆಗಳು ಮತ್ತು ಅಧಿಕಾರಿಗಳು ಯಾರ ಅಧೀನದಲ್ಲಿರಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ನಡೆಯುತ್ತಿರುವ ತಿಕ್ಕಾಟಕ್ಕೆ ಸುಪ್ರೀಂ ಕೋರ್ಟ್‌ಗೂ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ, ಐವರು ಸದಸ್ಯರ ಸಂವಿಧಾನಿಕ ಪೀಠದಿಂದ ವಿಚಾರಣೆ ಆಗಬೇಕೆಂದು ಅಭಿಪ್ರಾಯಪಟ್ಟಿತು.

ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಇರುವ ಇತರ ವ್ಯಾಜ್ಯಗಳ ವಿಚಾರಣೆ ಅಗತ್ಯ ಇಲ್ಲ. 2018ರ ಸುಪ್ರೀಂ ಕೋರ್ಟ್ ಸಂವಿಧಾನಿಕ ನ್ಯಾಯಪೀಠದ ತೀರ್ಪಿನಲ್ಲಿ ಹಲವು ವಿಚಾರಗಳ ಬಗ್ಗೆ ತೀರ್ಪು ನೀಡಲಾಗಿದೆ ಎಂದು ಸಿಜೆಐ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಈಗ ಸರಕಾರಿ ಸೇವೆ ವಿಭಾಗದ ನಿಯಂತ್ರಣಕ್ಕಾಗಿ ನಡೆಯುತ್ತಿರುವ ವ್ಯಾಜ್ಯದ ವಿಚಾರಣೆ ಮಾತ್ರ ನಡೆಯಲಿದೆ.

ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಈ ವಿಚಾರ ಪದೇ ಪದೇ ಪ್ರತಿಧ್ವನಿಸುತ್ತಿದೆ. ಪೊಲೀಸ್ ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳು ತಮ್ಮ ನಿಯಂತ್ರಣದಲ್ಲಿ ಇಲ್ಲ. ಯಾವ ಯೋಜನೆಯನ್ನೂ ಸಮರ್ಪಕವಾಗಿ ಜಾರಿಗೆ ತರಲು ಆಗುತ್ತಿಲ್ಲ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮ ಮಾತು ಕೇಳುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ದೂರುತ್ತಲೇ ಬಂದಿದ್ದರು.

Delhi-Central govt fight: SC refers issue to Constitution Bench

ಲೆಫ್ಟಿನೆಂಟ್ ಗವರ್ನರ್ ವಿಚಾರದಲ್ಲಿ 2018ರಲ್ಲಿ ಸಾಂವಿಧಾನಿಕ ನ್ಯಾಯಪೀಠ ಮಹತ್ವದ ತೀರ್ಪು ನೀಡಿತ್ತು. ಲೆಫ್ಟಿನೆಂಟ್ ಗವರ್ನರ್ ರಾಜ್ಯ ಸರಕಾರದ ಸಲಹೆಗೆ ಕಟಿಬದ್ಧರಾಗಿರಬೇಕು. ಅವರು ಮತ್ತು ರಾಜ್ಯ ಸರಕಾರ ಪರಸ್ಪರ ಪೂರಕವಾಗಿ, ಸೌಹಾರ್ದಯುತವಾಗಿ ಕೆಲಸ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಅರಾಜಕತನಕ್ಕೆ ಅವಕಾಶ ಇರಕೂಡದು ಎಂದು ತೀರ್ಪಿನಲ್ಲಿ ತಿಳಿಸಲಾಗಿತ್ತು.

ರಾಜ ಇಲ್ಲದ ರಾಜ್ಯದಂತೆ: ಸರಕಾರಿ ಸೇವೆ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ನಿಯಂತ್ರಣವೇ ಇಲ್ಲವಾಗಿದೆ. ಇದೊಂದು ರೀತಿ ರಾಜನಿಲ್ಲದ ರಾಜ್ಯದಂತಾಗಿದೆ. ಪ್ರಜಾತಂತ್ರದ ಮೂಲಕದ ಜನರಿಂದ ಆಯ್ಕೆಯಾದ ಸರಕಾರ ಒಬ್ಬ ಆರೋಗ್ಯ ಕಾರ್ಯದರ್ಶಿ ಅಥವಾ ವಾಣಿಜ್ಯ ಇಲಾಖೆ ಕಾರ್ಯದರ್ಶಿ ನೇಮಕಾತಿಗೂ ಲೆಫ್ಟಿನೆಂಟ್ ಗವರ್ನರ್ ಅನುಮೋದನೆಗೆ ಕಾಯಬೇಕಾದ ಪರಿಸ್ಥಿತಿ ಬಂದಿದೆ ಎಂದು ದೆಹಲಿ ಸರಕಾರ ಸುಪ್ರೀಂ ಕೋರ್ಟ್ ಮುಂದೆ ಹತಾಶೆ ವ್ಯಕ್ತಪಡಿಸಿತು.

ದೆಹಲಿ ಸರಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು, "2018ರ ಸುಪ್ರೀಂ ತೀರ್ಪು ಕೇಂದ್ರ ಹಾಗು ರಾಜ್ಯ ಸರಕಾರಗಳ ಅಧಿಕಾರಗಳು ಪರಸ್ಪರ ಪೂರಕವಾಗಿರಬೇಕು. ನಿರ್ಧಾರವು ಸಾಮೂಹಿಕವಗಿರಬೇಕು ಎಂದಿದೆ. ಆದರೆ, ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಯಲ್ಲಿ ಯಾವುದೇ ಅಧಿಕಾರ ಇಲ್ಲದ ದೆಹಲಿ ಸರಕಾರಕ್ಕೆ ಅದೆಂಥ ಸಾಮೂಹಿಕ ಜವಾಬ್ದಾರಿ ಬರುತ್ತದೆ? ಇಲ್ಲಿ ಒಕ್ಕೂಟ ವ್ಯವಸ್ಥೆಯೇ ದುರ್ಬಲಗೊಳ್ಳುತ್ತಿದೆ" ಎಂದರು.

Delhi-Central govt fight: SC refers issue to Constitution Bench

ಕೇಂದ್ರದ ವಾದ: ದೆಹಲಿಯು ರಾಷ್ಟ್ರ ರಾಜಧಾನಿ ಜೊತೆಗೆ ಪ್ರಮುಖ ಮೆಟ್ರೋ ನಗರಿಯಾದ್ದರಿಂದ ಅದು ಕೇಂದ್ರ ಸರಕಾರದ ನಿಯಂತ್ರಣದಲ್ಲಿ ಇರಬೇಕು. ಅಲ್ಪ ಸಂಪನ್ಮೂಲಗಳಿಗೆ ದೆಹಲಿಯನ್ನು ಬಿಡಲಾಗದು ಎಂದು ಕೇಂದ್ರದ ಪರವಾಗಿ ಸಾಲಿಸಿಟರ ಜನರಲ್ ತುಷಾರ್ ಮೆಹತಾ ಪ್ರತಿವಾದ ಮುಂದಿಟ್ಟರು. ಜೊತೆಗೆ, ಈ ವ್ಯಾಜ್ಯದ ವಿಚಾರಣೆಯನ್ನು ಸಾಂವಿಧಾನಿಕ ನ್ಯಾಯಪೀಠ ನಡೆಸುವುದು ಉತ್ತಮ ಎಂದು ಸಲಹೆ ಕೊಟ್ಟರು. ಕೇಂದ್ರದ ಈ ಸಲಹೆಯನ್ನು ನ್ಯಾಯಪೀಠ ಒಪ್ಪಿತು.

2019ರಲ್ಲಿ ಸ್ಪಷ್ಟ ತೀರ್ಪು ಬರಲಿಲ್ಲ: ಸರಕಾರಿ ಸೇವೆ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಮಧ್ಯೆ ಇರುವ ವ್ಯಾಜ್ಯದ ಬಗ್ಗೆ 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ನ್ಯಾ. ಎ.ಕೆ. ಸಿಕ್ರಿ ಮತ್ತು ನ್ಯಾ. ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠದಲ್ಲಿ ಅಭಿಪ್ರಾಯಭೇದವಾಗಿ ಸ್ಪಷ್ಟ ತೀರ್ಪು ಬರಲಿಲ್ಲ. ರಾಜ್ಯ ಸರಕಾರಕ್ಕೆ ಸೇವೆ ವಿಚಾರದಲ್ಲಿ ಯಾವ ಅಧಿಕಾರ ಇಲ್ಲ ಎಂದು ನ್ಯಾ. ಅಶೋಕ್ ಭೂಷಣ್ ಅಭಿಪ್ರಾಯಪಟ್ಟರು. ನ್ಯಾ. ಸಿಕ್ರಿ ಇದಕ್ಕೆ ವ್ಯತಿರಿಕ್ತವೆನಿಸುವ ತೀರ್ಪು ನೀಡಿದ್ದರು. ಹೀಗಾಗಿ, ತ್ರಿಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆಗೆ ಶಿಫಾರಸು ಮಾಡಲಾಗಿತ್ತು. ಈಗ ತ್ರಿಸದಸ್ಯ ಪೀಠವು ಸಾಂವಿಧಾನಿಕ ನ್ಯಾಯಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುತ್ತಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+