ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೀಸೆಲ್ ಮೇಲಿನ VAT ಇಳಿಸಲು ದೆಹಲಿ ಸರ್ಕಾರ ನಿರ್ಧಾರ

|
Google Oneindia Kannada News

ನವದೆಹಲಿ, ಜುಲೈ 30: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸಂಪುಟವು ಡೀಸೆಲ್ ಮೇಲಿನ ವ್ಯಾಲ್ಯೂ ಆಡೆಡ್ ಟ್ಯಾಕ್ಸ್ (VAT) ಅನ್ನು 30ರಿಂದ 16.75 ಪರ್ಸೆಂಟ್ ಗೆ ಇಳಿಸಲು ನಿರ್ಧಾರ ಮಾಡಿದೆ. ಇದರಿಂದ ಡೀಸೆಲ್ ಪ್ರತಿ ಲೀಟರ್ ಗೆ 8.36 ರುಪಾಯಿ ಇಳಿಕೆ ಆಗಲಿದೆ. 82 ರುಪಾಯಿ ಇರುವ ಲೀಟರ್ ಡೀಸೆಲ್ ಬೆಲೆ 73.64ಕ್ಕೆ ಇಳಿಕೆ ಆಗಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದರು.

ದೆಹಲಿ ಆರ್ಥಿಕತೆಯನ್ನು ಮುನ್ನಡೆಸುವಲ್ಲಿ ಡೀಸೆಲ್ ಬೆಲೆ ಇಳಿಕೆ ಪ್ರಮುಖ ಹೆಜ್ಜೆ ಎಂದಿದ್ದಾರೆ. ಇನ್ನು ಉದ್ಯೋಗ ಪೋರ್ಟಲ್ ನಲ್ಲಿ 7577 ಕಂಪೆನಿಗಳು ನೋಂದಣಿ ಆಗಿದ್ದು, 2,04,785 ಉದ್ಯೋಗಗಳ ಜಾಹೀರಾತು ನೀಡಲಾಗಿದೆ. ದೆಹಲಿ ಸರ್ಕಾರಿ ಉದ್ಯೋಗ ಪೋರ್ಟಲ್ ಆರಂಭಿಸಿದ ನಾಲ್ಕು ದಿನಗಳೊಳಗೆ 3,22,865 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಶೇ.88ರಷ್ಟು ಮಂದಿ ಕೊವಿಡ್ 19ನಿಂದ ಚೇತರಿಕೆದೆಹಲಿಯಲ್ಲಿ ಶೇ.88ರಷ್ಟು ಮಂದಿ ಕೊವಿಡ್ 19ನಿಂದ ಚೇತರಿಕೆ

ದೆಹಲಿಯ ವರ್ತಕರು, ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಕೈ ಜೋಡಿಸಿ. ಆ ಮೂಲಕ ದೆಹಲಿ ಆರ್ಥಿಕತೆಯನ್ನು ಮರಳಿ ಹಳಿಗೆ ತರಲು ಸಹಕರಿಸಿ ಎಂದು ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

Delhi Cabinet decides to reduce VAT on diesel: CM Arvind Kejriwal

ದೆಹಲಿಯ ಎರಡು ಕೋಟಿ ಜನರು ಕೊರೊನಾವನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಮಾಸ್ಕ್ ಧರಿಸಬೇಕು. ಒಂದು ವೇಳೆ ನಾವು ನಿರ್ಲಕ್ಷ್ಯ ತೋರಿದರೆ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತವೆ. ನಾವೀಗ ದೆಹಲಿ ಆರ್ಥಿಕತೆಯ ಪುನಶ್ಚೇತನದ ಕಡೆಗೆ ಗಮನ ನೀಡಬೇಕು. ಕಾರ್ಖಾನೆ- ವ್ಯಾಪಾರ, ವ್ಯವಹಾರ ಮುಚ್ಚಿರುವುದರಿಂದ ಹಲವರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದರು.

ಈ ಆರ್ಥಿಕ ಸವಾಲನ್ನು ನಾವು ಸ್ವೀಕರಿಸಿ, ಗೆಲ್ಲುತ್ತೇವೆ. ಈ ದಿನ ನಡೆದ ಸಂಪುಟ ಸಭೆಯಲ್ಲಿ ಪ್ರಮುಖ ತೀರ್ಮಾನ ತೆಗೆದುಕೊಂಡಿದ್ದೇವೆ. ಆರ್ಥಿಕತೆ ಮುನ್ನಡೆಸಲು ಇದು ಮುಖ್ಯ ಹೆಜ್ಜೆ ಆಗುತ್ತದೆ ಎಂದು ನಂಬಿರುವುದಾಗಿ ಕೇಜ್ರಿವಾಲ್ ತಿಳಿಸಿದರು.

ಡೀಸೆಲ್ ಬೆಲೆ ಇಳಿಕೆಗಾಗಿ ಕೈಗಾರಿಕೋದ್ಯಮಿಗಳು, ವರ್ತಕರು, ಉದ್ಯಮಿಗಳು ಬೇಡಿಕೆ ಇಟ್ಟಿದ್ದರು. ಏಕೆಂದರೆ ಇದರಿಂದ ಜನರ ಬಜೆಟ್ ಮೇಲೆ ಪರಿಣಾಮ ಆಗುತ್ತಿತ್ತು. ಈಗ ಡೀಸೆಲ್ ಬೆಲೆ ಇಳಿಸಿರುವುದರಿಮ್ದ ದೆಹಲಿ ಆರ್ಥಿಕತೆ ಮೇಲೆ ಪರಿಣಾಮ ಆಗುತ್ತದೆ ಎಂದು ನಾನು ನಂಬುತ್ತೇನೆ ಎಂಬ ಮಾತನ್ನಾಡಿದ್ದಾರೆ.

ಮಳಿಗೆಗಳ ಮಾಲೀಕರು, ವರ್ತಕರು, ಕೈಗಾರಿಕೋದ್ಯಮಿಗಳು ತಮ್ಮ ಕಾರ್ಖಾನೆ ಹಾಗೂ ಅಂಗಡಿಗಳ ಬಾಗಿಲು ತೆರೆಯುವಂತೆ ಮನವಿ ಮಾಡಲು ಬಯಸುತ್ತೇನೆ. ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ. ಮತ್ತೆ ಕೆಲಸ ಶುರು ಆಗಲಿ. ಮುಂಬರುವ ದಿನಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಲವು ಕೈಗಾರಿಕೋದ್ಯಮಿಗಳು ಮತ್ತು ವರ್ತಕರ ಜತೆ ಚರ್ಚೆ ನಡೆಸಲಿದ್ದೇನೆ. ಅವರ ಸಮಸ್ಯೆಗಳನ್ನು ಬಗೆಹರಿಸಲಿದ್ದೇನೆ ಎಂದು ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

English summary
Chief Minister Arvind Kejriwal on Thursday announced that the prices of diesel in Delhi will be reduced by Rs 8.36 per litre. As per the decision taken in the meeting held by the Delhi cabinet on Thursday, the VAT on diesel will be reduced from 30% to 16.75%, bringing down diesel price from Rs 82 to Rs 73.64 per litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X