ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಮನೆಗೆ ಅಪರಿಚಿತರ ದಾಳಿ
ದೆಹಲಿ ಬಿಜೆಪಿ ಮುಖ್ಯಸ್ಥ-ಸಂಸದ ಮನೋಜ್ ತಿವಾರಿ ಮನೆ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದ್ದು, ಇದರಲ್ಲಿ ಪೊಲೀಸರ ಕೈವಾಡವಿರುವ ಸಾಧ್ಯತೆ ಇದೆ ಎಂದು ಮನೋಜ್ ತಿವಾರಿ ಮಾಧ್ಯಮಗಳಿಗೆ ಹೇಳಿದ್ದಾರೆ.
ನವದೆಹಲಿ, ಮೇ 1: ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರ ಮನೆ ಮೇಲೆ ಭಾನುವಾರ ರಾತ್ರಿ ದಾಳಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ನಡೆದ ವೇಳೆ ಮನೋಜ್ ತಿವಾರಿ ಅವರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಇದು ದರೋಡೆ ಯತ್ನದಂತೆ ಅನಿಸುತ್ತಿದೆ ಎಂದಿದ್ದಾರೆ. ಈಚೆಗೆ ದೆಹಲಿ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಅದ್ಭುತ ಗೆಲುವು ಸಾಧಿಸಿದ್ದರ ಹಿಂದೆ ಒಳ್ಳೆ ಕೆಲಸ ಮಾಡಿದ್ದು ಇದೇ ಮನೋಜ್ ತಿವಾರಿ. ಅವರದೇ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಿತ್ತು.[ನಾನು ಪಾಕ್ ನ ISI ಏಜೆಂಟ್, ಆದ್ರೆ ಭಾರತದಲ್ಲಿರೋಕೆ ಇಷ್ಟ!]

ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಸ್ಥಾನ ಗಳಿಕೆಯಲ್ಲಿ ಎರಡನೇ ಪಕ್ಷವಾಗಿ ಹೊರಹೊಮ್ಮಿದರೆ, ಕಾಂಗ್ರೆಸ್ ಮೂರನೇ ಸ್ಥಾನ ತಲುಪಿತ್ತು. ಇದೊಂದು ದೊಡ್ಡ ಪಿತೂರಿ. ಇದರ ಹಿಂದೆ ಪೊಲೀಸರು ಕೂಡ ಭಾಗಿಯಾದಂತಿದೆ ಎಂದು ಮಾಧ್ಯಮದವರಿಗೆ ತಿವಾರಿ ಹೇಳಿದ್ದಾರೆ.[ಸೋಲಿನ ನಂತರ ಬಿಜೆಪಿಯನ್ನು ಅಭಿನಂದಿಸಿದ ಕೇಜ್ರಿವಾಲ್]
ತಿವಾರಿ ಆರೋಪಿಸುವ ಪ್ರಕಾರ, ಎಂಟರಿಂದ ಹತ್ತು ಮಂದಿ ಇದ್ದ ಗುಂಪು ಮನೆಯೊಳಗೆ ನುಗ್ಗಿ, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದೆ. ಆ ನಂತರ ಕೋಣೆಗಳಲ್ಲಿ ಹುಡುಕಾಟ ನಡೆಸಿದೆ. ಸಮವಸ್ತ್ರದಲ್ಲಿರುವ ವ್ಯಕ್ತಿ ಅವರಿಗೆ ಕೋಣೆಯನ್ನು ತೋರಿಸಿರುವುದು ಕಂಡುಬಂದಿದೆ. "ಇದು ದೊಡ್ಡ ಬೆದರಿಕೆ" ಎಂದು ತಿವಾರಿ ಘಟನೆಯನ್ನು ವ್ಯಾಖ್ಯಾನಿಸಿದ್ದಾರೆ.












Click it and Unblock the Notifications