Breaking; ದೆಹಲಿಯ 3 ಪಾಲಿಕೆ ವಿಲೀನ, ಅಧಿಸೂಚನೆ ಪ್ರಕಟ

ನವದೆಹಲಿ, ಏಪ್ರಿಲ್ 19; ದೆಹಲಿಯ ಮೂರು ಮಹಾನಗರ ಪಾಲಿಕೆಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಸಿದೆ. ಏಪ್ರಿಲ್ 5ರಂದು ಸಂಸತ್‌ನಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಕಾಯ್ದೆ 2022ಕ್ಕೆ ಅನುಮೋದನೆ ಸಿಕ್ಕಿತ್ತು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ ಬಳಿಕ ಕೇಂದ್ರ ಸರ್ಕಾರ ಮೂರು ಮಹಾನಗರ ಪಾಲಿಕೆಗಳ ವಿಲೀನದ ಕುರಿತು ಅಧಿಸೂಚನೆ ಪ್ರಕಟಿಸಿದೆ. ದೆಹಲಿಯ ಪೂರ್ವ, ದಕ್ಷಿಣ ಮತ್ತು ಉತ್ತರ ಮಹಾನಗರ ಪಾಲಿಕೆಗಳನ್ನು ವಿಲೀನಗೊಳಿಸಲಾಗುತ್ತದೆ. ಒಬ್ಬರೇ ಮೇಯರ್ ಇರಲಿದ್ದಾರೆ.

ಮೂರು ಮಹಾನಗರ ಪಾಲಿಕೆ ವಿಲೀನದ ಬಳಿಕ ಮುನ್ಸಿಪಲ್ ಕಾರ್ಪೊರೇಷನ್ ದೆಹಲಿ ಎಂಬ ಒಂದೇ ಸಂಸ್ಥೆ ಅಸ್ತಿತ್ವದಲ್ಲಿ ಇರಲಿದೆ. ಸರ್ಕಾರ ಇದರ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ಅಧಿಕಾರಿಯನ್ನು ನೇಮಕ ಮಾಡಲಿದೆ. ಅಧಿಸೂಚನೆ ಪ್ರಕಟಗೊಂಡ ದಿನದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಕಾನೂನು ಸಚಿವಾಲಯ ಹೇಳಿದೆ.

Delhi 3 Municipal Corporations Merged Into One Notification Issued

ಮಹಾನಗರ ಪಾಲಿಕೆಗಳ ವಿಲೀನದ ಬಳಿಕ ಮುನ್ಸಿಪಲ್ ಕಾರ್ಪೊರೇಷನ್ ದೆಹಲಿ ಒಂದೇ ಉಳಿಯಲಿದೆ. ಇದರ ವ್ಯಾಪ್ತಿಗೆ ಸೇರುವ ವಾರ್ಡ್‌ಗಳ ಕುರಿತು ಹೊಸದಾಗಿ ಸಮೀಕ್ಷೆ ನಡೆಸಲಾಗುತ್ತದೆ ಎಂದು ಅಧಿಸೂಚನೆ ತಿಳಿಸಿದೆ.

ಮೂರು ಮಹಾನಗರ ಪಾಲಿಕೆಯಿಂದಾಗಿ ದೆಹಲಿಯಲ್ಲಿ 272 ವಾರ್ಡ್‌ಗಳಿದ್ದವು. ಉತ್ತರ ಮತ್ತು ದಕ್ಷಿಣ ಪಾಲಿಕೆ ತಲಾ 104 ವಾರ್ಡ್‌ಗಳನ್ನು ಹೊಂದಿದ್ದವು. ಪೂರ್ವ ಪಾಲಿಕೆಯಲ್ಲಿ 64 ವಾರ್ಡ್‌ಗಳಿತ್ತು.

ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೂರು ಮಹಾನಗರ ಪಾಲಿಕೆಗಳ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರದಲ್ಲಿ ಇಷ್ಟು ವರ್ಷ ಬಿಜೆಪಿ ಆಡಳಿತವಿದ್ದರೂ ಏಕೆ ವಿಲೀನಗೊಳಿಸಿರಲಿಲ್ಲ ಎಂದು ಪ್ರಶ್ನಿಸಿದ್ದರು.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಗಳನ್ನು ವಿಳಂಬಗೊಳಿಸುವ ಉದ್ದೇಶದಿಂದ ಈಗ ಪಾಲಿಕೆ ವಿಲೀನ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು.

ಮಹಾನಗರ ಪಾಲಿಕೆ ಚುನಾವಣೆಗಳು ನಡೆದರೆ ಬಿಜೆಪಿ ಸೋಲುವ ಭಯವಿದೆ. ಆದ್ದರಿಂದ ಚುನಾವಣೆಗೆ ದಿನಾಂಕ ಘೋಷಣೆಗೆ ಕೆಲವೇ ದಿನ ಮೊದಲು ಪಾಲಿಕೆ ವಿಲೀನ ತೀರ್ಮಾನ ಕೈಗೊಂಡು ಬಿಜೆಪಿ ರಾಜಕಾರಣದಲ್ಲಿ ತೊಡಗಿದೆ ಎಂದು ಆಮ್ ಆದ್ಮಿ ಪಕ್ಷ ಸಹ ಆರೋಪ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+