• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರ್ ಭಾರತ ಕಟ್ಟಲು ಪಣ

|
Google Oneindia Kannada News

ನವದೆಹಲಿ, ಆಗಸ್ಟ್.10: ಭಾರತದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಆತ್ಮ ನಿರ್ಭರ್ ಭಾರತ್ ಸಪ್ತಾಹ'ಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ಸೋಮವಾರ ಮಧ್ಯಾಹ್ನ 3.30ಕ್ಕೆ ಕಚೇರಿಯಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಸಪ್ತಾಹಕ್ಕೆ ಚಾಲನೆ ನೀಡಲಿದ್ದಾರೆ.

ಮೊದಲ ಹಂತದಲ್ಲಿ ರಕ್ಷಣಾ ವಲಯದಲ್ಲಿ 101 ಸಾಮಗ್ರಿಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದಕ್ಕೆ ನಿರ್ಬಂಧ ಹೇರುವ ಬಗ್ಗೆ ಕೇಂದ್ರ ಸರ್ಕಾರವು ತೀರ್ಮಾನಿಸಿದೆ. 2020ರ ಸಾಲಿನಿಂದಲೇ ಈ ಕ್ರಮವು ಜಾರಿಗೆ ಬರಲಿದ್ದು, ಮುಂದಿನ 2024ರವರೆಗೂ ಜಾರಿಯಲ್ಲಿರುತ್ತದೆ.

ಆತ್ಮ ನಿರ್ಭರ ಭಾರತ; ರಾಜನಾಥ್ ಸಿಂಗ್ ಮಹತ್ವದ ಘೋಷಣೆಆತ್ಮ ನಿರ್ಭರ ಭಾರತ; ರಾಜನಾಥ್ ಸಿಂಗ್ ಮಹತ್ವದ ಘೋಷಣೆ

ಕೊರೊನಾವೈರಸ್ ಸೋಂಕು ಹರಡುವಿಕೆ ಮತ್ತು ಲಾಕ್ ಡೌನ್ ನಿಂದಾಗಿ ಮೇ ತಿಂಗಳಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮನಿರ್ಭರ್ ಭಾರತ್ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ್ದರು. ಇದರ ಹಂತವಾಗಿ ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಉದ್ದೇಶವನ್ನು ಹೊಂದಲಾಗಿದೆ.

ರಕ್ಷಣಾ ಕ್ಷೇತ್ಪದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣ:

ಭಾರತವನ್ನು ರಕ್ಷಣಾ ಕ್ರೇತ್ರದಲ್ಲಿ ಸದೃಢ ಮತ್ತು ಸ್ವತಂತ್ರ್ಯವನ್ನಾಗಿ ಮಾಡುವುದಕ್ಕೆ ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರಿಂದ ಮುಂದಿನ ಆರೇಳು ವರ್ಷಗಳಲ್ಲಿ ಸ್ವದೇಶಿ ಕಂಪನಿಗಳಿಗೆ 4 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯ ಗುತ್ತಿಗೆ ಸಿಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಯಾವ್ಯಾವ ರಕ್ಷಣಾ ಸಾಮಗ್ರಿಗಳ ಮೇಲೆ ನಿರ್ಬಂಧ:

ಅತ್ಯಾಧುನಿಕ ತಂತ್ರಜ್ಞಾನದ ಫಿರಂಗಿಗಳು, ಸಾಧಾರಿತ ರೈಫಲ್ಸ್, ಕಾರ್ವೆಟ್ ಗಳು, ಸೋನಾರ್ ವ್ಯವಸ್ಥೆ,. ಮದ್ದುಗುಂಡುಗಳ ಸಾಗಾಣೆ ವಿಮಾನ, ಲಘು ಯುದ್ಧ ಹೆಲಿಕಾಪ್ಟರ್, ರೆಡಾರ್ಸ್, ಮತ್ತು ಇನ್ನಿತರ ಸಾಮಗ್ರಿಗಳ ಮತ್ತು ಇನ್ನಿತರ ಕ್ಷಿಪಣಿ ವ್ಯವಸ್ಥೆಗಳಿವೆ. ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆ, ನೌಕೆಯಲ್ಲಿ ಬಳಸುವ ಕ್ಷಿಪಣಿ, ದೂರಗಾಮಿ ಭೂ ದಾಳಿಯ ಕ್ಷಿಪಣಿ ಸಂವಹನಹ ಉಪಗ್ರಹ, ಲಘು ಸಾಗಣೆ ವಾಹನ, ತರಬೇತಿ ವಿಮಾನಗಳು, ಬಹು ಬ್ಯಾರೆಲ್ ರಾಕೆಟ್ ಉಡಾಹಕ, ಸ್ಪಿನ್ನರ್ ರೈಫಲ್, ಮಿನಿ ಯುಎವಿ, ನಿರ್ಬಂಧ ವಿಧಿಸುವ ಬಗ್ಗೆ ಪಟ್ಟೆ ಮಾಡಲಾಗಿದೆ.

English summary
Defence Minister Rajnath Singh Launched 'Atma Nirbhar Bharat Saptah' On Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X