ಸಂಸದ ಶಶಿ ತರೂರ್ ಗೆ ನ್ಯಾಯಾಲಯದಿಂದ ಶುಭಸುದ್ದಿ

Recommended Video

      ಮೋದಿ ಶಿವಲಿಂಗದ ಮೇಲಿನ ಚೇಳು ಎಂದಿದ್ದ ಶಶಿ ತರೂರ್ ವಿರುದ್ಧದ ವಾರಂಟ್ ಗೆ ತಡೆಯಾಜ್ಞೆ | Oneindia Kannada

      ನವದೆಹಲಿ, ನವೆಂಬರ್ 14: 'ಪ್ರಧಾನಿ ನರೇಂದ್ರ ಮೋದಿ ಶಿವಲಿಂಗದ ಮೇಲಿನ ಚೇಳು' ಎಂದು ಹೇಳಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ಸಹಿತ ವಾರಂಟ್ ಗೆ ದೆಹಲಿ ನ್ಯಾಯಾಲಯವೊಂದು ಗುರುವಾರದಂದು ತಡೆಯಾಜ್ಞೆ ನೀಡಿದೆ. ಇನ್ನೊಂದೆಡೆ, ವಿದೇಶಕ್ಕೆ ಹಾರಲು ಕೋರಿದ್ದ ಅರ್ಜಿಯನ್ನು ದೆಹಲಿ ಕೋರ್ಟ್ ಪುರಸ್ಕರಿಸಿದೆ.

      ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಹಾಜರಾಗದ ಕಾರಣ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ವಾರಂಟ್ ಹೊರಡಿಸಲಾಗಿತ್ತು.

      2018ರಲ್ಲಿ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನ(Bengaluru literature festival) ಕಾರ್ಯಕ್ರಮದಲ್ಲಿ ತಮ್ಮ ಪುಸ್ತಕ "The Paradoxical Prime Minister" ಬಗ್ಗೆ ಮಾತನಾಡುತ್ತಿದ್ದ ಶಶಿ ತರೂರ್, 'ಪ್ರಧಾನಿ ನರೇಂದ್ರ ಮೋದಿ ಅವರು ಶಿವಲಿಂಗದ ಮೇಲಿರುವ ಚೇಳಿನ ಹಾಗೆ. ಬರಿ ಕೈಯಿಂದ ಅದನ್ನು ಸರಿಸುವುದಕ್ಕೂ ಆಗುವುದಿಲ್ಲ. ಚಪ್ಪಲಿಯಿಂದ ಹೊಡೆಯಲೂ ಸಾಧ್ಯವಿಲ್ಲ' ಎಂಬ ಹೇಳಿಕೆ ನೀಡಿದ್ದರು. ಆರೆಸ್ಸೆಸ್ ನ ಹಲವರಿಗೆ ಮೋದಿ ನಡೆ ಇಷ್ಟವಿಲ್ಲ. ಆದರೆ ಅವರನ್ನು ನಿಯಂತ್ರಿಸುವುದು ಬಹಳ ಕಷ್ಟವಾಗಿದೆ. ಈ ಬಗ್ಗೆ ಆ ಸಂಘಟನೆಯವರೇ ಹೇಳಿಕೊಂಡಿದ್ದಾರೆ ಎಂದಿದ್ದರು.

      Defamation case: Delhi HC stays bailable warrant against Tharoor

      ಈ ಕುರಿತು ಅವರ ವಿರುದ್ಧ ಬಿಜೆಪಿ ನಾಯಕ ರಾಜೀವ್ ಬಬ್ಬರ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ದೆಹಲಿಯ ನ್ಯಾಯಾಲಯವೊಂದು ಜಾಮೀನು ನೀಡಿತ್ತು.

      ದೆಹಲಿಯ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನವೀನ್ ಕುಮಾರ್ ಅವರು ತರೂರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ವಾರಂಟ್ ಜಾರಿಗೊಳಿಸಿದ್ದರು. ಐಪಿಸಿ ಸೆಕ್ಷನ್ 499, 500 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ವಾರಂಟ್ ವಿರುದ್ಧ ಸುಪ್ರೀಂಕೋರ್ಟಿಗೆ ಶಶಿ ಮೇಲ್ಮನವಿ ಸಲ್ಲಿಸಿದ್ದರು.

      ವಿದೇಶಕ್ಕೆ ಹಾರಲು ಅನುಮತಿ ಕೊಟ್ಟ ಕೋರ್ಟ್
      ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಆರೋಪಿಯಾದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ವಿದೇಶಕ್ಕೆ ತೆರಳಲು ವಿಶೇಷ ಜಡ್ಜ್ ಅಜಯ್ ಕುಮಾರ್ ಕುಹಾರ್ ಅವರು ಅನುಮತಿ ನೀಡಿದ್ದಾರೆ. ನವೆಂಬರ್ 14 ರಿಂದ 18 ರ ತನಕ ದುಬೈ ಪ್ರವಾಸದಲ್ಲಿರಲಿದ್ದಾರೆ. 2 ಲಕ್ಷ ಠೇವಣಿ ಇಡಬೇಕು ಎಂಬ ಷರತ್ತು ವಿಧಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+