ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರುಣ್ ಜೇಟ್ಲಿಗೆ ಐದು ಪಂಚಿಂಗ್ ಪ್ರಶ್ನೆ ಎಸೆದ ಎಎಪಿ

By Mahesh
|
Google Oneindia Kannada News

ನವದೆಹಲಿ, ಡಿ. 18: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಚೇರಿ ಮೇಲಿನ ಸಿಬಿಐ ದಾಳಿ ಪ್ರಕರಣದ ಬಿಸಿ ಈಗ ಡಿಡಿಸಿಎ ವಿವಾದತ್ತ ತಿರುಗಿದೆ. ಅರುಣ್ ಜೇಟ್ಲಿ ಅವರ ಜೊತೆ ವಾಕ್ಸಮರ ಮುಂದುವರೆಸಿರುವ ಎಎಪಿ ಶುಕ್ರವಾರದಂದು 5 ನೇರ ಪ್ರಶ್ನೆಗಳನ್ನು ಜೇಟ್ಲಿ ಅವರಿಗೆ ಕೇಳಿದ್ದಾರೆ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ (ಡಿಡಿಸಿಎ) ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅವರಿಗೆ ಪಂಚ ಪ್ರಶ್ನೆಗಳನ್ನು ಕೇಳಿದ್ದೇವೆ. ಇದಕ್ಕೆ ಶೀಘ್ರವೇ ಉತ್ತರ ನಿರೀಕ್ಷಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.[ಎಎಪಿ ಸಂಸದನಿಗೆ ನೀರು ಕುಡಿಸಿದ ಮೋದಿ!]

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ (ಡಿಡಿಸಿಎ) ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಅರುಣ್ ಜೇಟ್ಲಿ ಅವರು ಭಾರಿ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಸ್ವಜನಪಕ್ಷಪಾತ ಮೂಲಕ ಆಡಳಿತ ಪಾರದರ್ಶಕತೆಗೆ ಮಸಿ ಬಳೆದಿದ್ದಾರೆ.

ಫಿರೋಜ್‌ ಶಾ ಕೋಟ್ಲಾ ಮೈದಾನದ ಆಧುನೀಕರಣಕ್ಕಾಗಿ ಮಂಜೂರಾದ ಮೊತ್ತವನ್ನು ತಮ್ಮದಾಗಿಸಿಕೊಳ್ಳಲು ಡಿಡಿಸಿಎ ಪದಾಧಿಕಾರಿಗಳೇ 5 ನಕಲಿ ಕಂಪೆನಿ ಸ್ಥಾಪಿಸಿದ್ದರು.

ಜೇಟ್ಲಿ ಅವರು ತಮ್ಮ ಸ್ನೇಹಿತರೊಬ್ಬರಿಗೆ ಅನುಕೂಲ ಮಾಡಿಕೊಡಲು 21 ಸೆಂಚುರಿ ಎಂಬ ಖಾಸಗಿ ಕಂಪೆನಿಗೆ ಉಪಗುತ್ತಿಗೆ ಅವಕಾಶ ನೀಡಿದ್ದರು. ಇದಲ್ಲದೆ, ಹಾಕಿ ಇಂಡಿಯಾಗೆ 5 ಕೋಟಿ ರು ನೀಡುವಂತೆ ನೀಡುವಂತೆ ಒಎನ್‌ಜಿಸಿ ಮೇಲೆ ಅರುಣ್ ಜೇಟ್ಲಿ ಒತ್ತಡ ಹೇರಿದ್ದಕ್ಕೆ ಸಾಕ್ಷಿಯಿದೆ ಎಂದು ಎಎಪಿ ಮುಖಂಡ ಆಶುತೋಷ್ ಆರೋಪಿಸಿದರು.

 21 ಸೆಂಚುರಿ ಕಂಪೆನಿ ಯಾರದ್ದು?

21 ಸೆಂಚುರಿ ಕಂಪೆನಿ ಯಾರದ್ದು?

21 ಸೆಂಚುರಿ ಕಂಪೆನಿ ಯಾರದ್ದು? ಈ ಕಂಪೆನಿಯ ಸದಸ್ಯರು ಯಾರು? ಇದರಲ್ಲಿ ನಿಮ್ಮ (ಜೇಟ್ಲಿ) ಬಂಧುಗಳು ಯಾರಾದರೂ ಇದ್ದಾರೆಯೇ?

ಮಾಜಿ ಕ್ರಿಕೆಟರ್ ಕೀರ್ತಿ ಅಜಾದ್ ಹೇಳಿಕೆ ಉತ್ತರಿಸಿ

ಲೋಕೇಶ್ ಶರ್ಮ ಎಂಬುವರಿಗೆ ಸೇರಿದ 21 ಸೆಂಚುರಿ ಕಂಪೆನಿಗೆ ಉಪ ಗುತ್ತಿಗೆ ನೀಡಿ 5.40 ಕೋಟಿ ರು ಗಳಿಸಿದ್ದು ಎಲ್ಲಿ ಯಾರ ಕೈಸೇರಿದೆ?

ಕೋಟ್ಲಾ ಮೈದಾನದ ಆಧುನಿಕರಣ ಅವ್ಯವಹಾರ

ಕೋಟ್ಲಾ ಮೈದಾನದ ಆಧುನಿಕರಣ ಅವ್ಯವಹಾರ

ಫಿರೋಜ್‌ ಶಾ ಕೋಟ್ಲಾ ಮೈದಾನದ ಆಧುನಿಕರಣದ ಹಣ ಕಬಳಿಸಲು ಡಿಡಿಸಿಎ ಪದಾಧಿಕಾರಿಗಳೇ 5 ನಕಲಿ ಕಂಪೆನಿ ಸ್ಥಾಪಿಸಿದ್ದರು. ಒಂದೇ ವಿಳಾಸ, ಒಬ್ಬನೇ ವ್ಯಕ್ತಿ ನಿರ್ದೇಶಕನಾಗಿರುವ ಈ ಕಂಪೆನಿಗಳ ಮಾಹಿತಿ ಬಹಿರಂಗಪಡಿಸಿ?

ಒಎನ್‌ಜಿಸಿ ಮೇಲೆ ಒತ್ತಡ ಹೇರಿದ್ದು ಯಾಕೆ?

ಒಎನ್‌ಜಿಸಿ ಮೇಲೆ ಒತ್ತಡ ಹೇರಿದ್ದು ಯಾಕೆ?

ಹಾಕಿ ಇಂಡಿಯಾಗೆ 5 ಕೋಟಿ ನೀಡುವಂತೆ ಒಎನ್‌ಜಿಸಿ ಮೇಲೆ ಒತ್ತಡ ಹೇರಿದ್ದು ಯಾಕೆ?

ಆಶುತೋಷ್ ರಿಂದ ಜೇಟ್ಲಿಗೆ ಟ್ವೀಟ್ ಪ್ರಶ್ನೆ

ಆಶುತೋಷ್ ಅವರು ಟ್ವೀಟ್ ಮಾಡಿ ಪ್ರಶ್ನೆಗಳನ್ನು ಕೇಳಿದ್ದಾರೆ

ನರೇಂದ್ರ ಭಾರ್ತಾ ಜೊತೆ ನಿಮ್ಮ ಸಂಬಂಧವೇನು?

ನರೇಂದ್ರ ಭಾರ್ತಾ ಜೊತೆ ನಿಮ್ಮ ಸಂಬಂಧವೇನು?

ಹಾಕಿ ಇಂಡಿಯಾದ ಮುಖ್ಯಸ್ಥ ನರೇಂದ್ರ ಭಾರ್ತಾ ಮತ್ತು ನಿಮ್ಮ ನಡುವಿನ ಸಂಬಂಭ ಏನು? ಎಸ್‌ಎಫ್‌ಐಒ ವರದಿ ಹಿಂದಿನ ವಾಸ್ತವವನ್ನು ಬಹಿರಂಗಪಡಿಸಿ.

English summary
The AAP today(Dec.18) put "five specific" questions to Finance Minister Arun Jaitley relating to its allegations of corruption in Delhi's cricket body DDCA under his watch and accused him of giving "vague" response to the charges
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X