'2005ರ ಮುನ್ನ ತಂದೆ ಸಾವನ್ನಪ್ಪಿದ್ದಲ್ಲಿ ಆ ಹೆಣ್ಣುಮಕ್ಕಳಿಗೆ ಆಸ್ತಿ ಇಲ್ಲ'
ನವದೆಹಲಿ, ನವೆಂಬರ್, 03 : ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ-2005 ಜಾರಿಗೆ ಬರುವ ಮುನ್ನ ತಂದೆ ಸಾವನ್ನಪ್ಪಿದ್ದಲ್ಲಿ ಅಥವಾ ಆಸ್ತಿ ಹಂಚಿಕೆಯಾಗಿದ್ದಲ್ಲಿ ಅಂತಹ ಹೆಣ್ಣು ಮಕ್ಕಳಿಗೆ ತಂದೆಯ ಕುಟುಂಬದ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ.
2005ರ ಹಿಂದೂ ಉತ್ತರಾಧಿಕಾರ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ದಿನ ಮತ್ತು ನಂತರದ ದಿನಗಳಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಮಾತ್ರ ತಮ್ಮ ತಂದೆಯ ಆಸ್ತಿಗೆ ಹಕ್ಕುದಾರರಾಗಿರುತ್ತಾರೆ ಎಂದು ನ್ಯಾಯಾದೀಶ ಅನಿಲ್ ಆರ್ ದವೆ ಮತ್ತು ಆದರ್ಶ್.ಕೆ ಗೋಯಲ್ ಅವರಿದ್ದ ಪೀಠ ಈ ತೀರ್ಮಾನ ಪ್ರಕಟಿಸಿದೆ.[ವಿಚ್ಛೇದಿತ ಮಹಿಳೆಯರೇ,ಜೀವನಾಂಶ ಬೇಕೇ? ಪರಪುರುಷನ ಸಂಗ ಬಿಡಿ]

1956ರ ಉತ್ತರಾಧಿಕಾರ ಕಾಯ್ದೆಯ ಪ್ರಕಾರ ಹೆಣ್ಣು ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಹಕ್ಕು ಇರಲಿಲ್ಲ. ಬಳಿಕ 2005ರಲ್ಲಿ 1956ರ ಉತ್ತರಾಧಿಕಾರ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. ಈ ಕಾಯ್ದೆಯನ್ವಯ ಹೆಣ್ಣು ಮಕ್ಕಳು ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಬಹುದು. ಆಸ್ತಿಯ ವಿಚಾರದಲ್ಲಿ ಪುರುಷರಂತೆ ಆಕೆಗೂ ಸಮಾನ ಹಕ್ಕು ಇದೆ ಎಂದು ತೀರ್ಪು ನೀಡಿತ್ತು.
ಆದರೆ ೨೦೦೫ರ ಕಾಯ್ದೆಯಲ್ಲಿ ಕೊಂಚ ಬದಲಾವಣೆ ಮಾಡಿರುವ ಸುಪ್ರೀಂ ಕೋರ್ಟ್ 2005ರ ಮೊದಲೇ ತಂದೆ ಸಾವನ್ನಪ್ಪಿದರೆ ಅಂತಹ ಮಕ್ಕಳು ತಂದೆಯ ಪಿತ್ರಾರ್ಜಿತ ಆಸ್ತಿಯ ಮೇಲೆ ಯಾವುದೇ ಹಕ್ಕು ಇಲ್ಲ ಎಂಬ ತೀರ್ಪು ನೀಡಿ ದೇಶಾದ್ಯಂತ ಹೆಣ್ಣು ಮಕ್ಕಳಿಗೆ ನಿರಾಸೆಯ ಛಾಯೆಯನ್ನು ಹುಟ್ಟಿಸಿದೆ.












Click it and Unblock the Notifications