ಗಣ್ಯವ್ಯಕ್ತಿಗಳ ಭದ್ರತೆಗೆ CRPF ಮಹಿಳಾ ಅಧಿಕಾರಿಗಳ ನೇಮಕ
ನವದೆಹಲಿ, ಡಿಸೆಂಬರ್ 23: ಗಣ್ಯ ವ್ಯಕ್ತಿಗಳ ಭದ್ರತೆಗಾಗಿ ಸಿಆರ್‌ಪಿಎಫ್ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವದ್ರಾ, ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಗುರುಶರಣ್ ಕೌರ್ ಮತ್ತು ಮಾಜಿ ಪ್ರಧಾನಿಯಂತಹ ಇತರ ಝಡ್ ಪ್ಲಸ್ ಗಣ್ಯರ ರಕ್ಷಣೆಗಾಗಿ 32 ಸಿಆರ್‌ಪಿಎಫ್ ಮಹಿಳಾ ಕಮಾಂಡೋಗಳ ಮೊದಲ ಬ್ಯಾಚ್ ಅನ್ನು ಶೀಘ್ರದಲ್ಲೇ ನಿಯೋಜಿಸಲಾಗುತ್ತಿದೆ.
ಮಹಿಳಾ ಕಮಾಂಡೋಗಳನ್ನು ಬಹು ಕರ್ತವ್ಯಗಳಿಗೆ ನಿಯೋಜಿಸಲಾಗುತ್ತುದೆ, ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ವಿಐಪಿ ರಾಜಕಾರಣಿಗಳ ರಕ್ಷಣೆಗೆ ಇವರು ಜೊತೆಗೂಡಬಹುದು ಎಂದು ಮೂಲಗಳು ತಿಳಿಸಿವೆ.

ಶಸ್ತ್ರಾಸ್ತ್ರಗಳಿಲ್ಲದೆ ಶತ್ರುಗಳ ವಿರುದ್ಧ ಹೋರಾಡುವುದು, ಎಲ್ಲ ರೀತಿಯ ಶಸ್ತ್ರಗಳ ಬಳಸುವ ನೈಪುಣ್ಯತೆ, ಭದ್ರತೆಯ ಮೇಲೆ ಹದ್ದಿನ ಕಣ್ಣಿಡುವುದು, ವಿಐಪಿಗಳಿಗೆ ಎದುರಾಗುವ ಬೆದರಿಕೆಯನ್ನು ಪತ್ತೆ ಹಚ್ಚಿ ಭದ್ರತೆ ಒದಗಿಸುವುದು ಹೀಗೆ 10 ವಾರಗಳ ಕಠಿಣ ತರಬೇತಿಯನ್ನು ಈ ಮಹಿಳಾ ಕಮಾಂಡೋಗಳ ತಂಡ ಪೂರೈಸಿದೆ.
ಈ ಕಮಾಂಡೋಗಳನ್ನು ಜನವರಿಯಿಂದ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಾಗುತ್ತಿದೆ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ವೇಳೆ ವಿವಿಐಪಿಗಳು ತಂಗುವ ಮನೆಗಳನ್ನು ಪರಿಶೀಲಿಸುವ ಜವಾಬ್ದಾರಿ ಈ ಮಹಿಳಾ ಕಮಾಂಡೋಗಳ ಮೇಲಿದೆ ಎಂದು ಮೂಲಗಳು ತಿಳಿಸಿವೆ.
ವಿಐಪಿಗಳ ಗೃಹ ಸಂರಕ್ಷಣಾ ತಂಡದ ಭಾಗವಾಗಿ ಕಮಾಂಡೋಗಳನ್ನು ನಿಯೋಜಿಸಲಾಗುತ್ತದೆ ಮತ್ತು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾದಲ್ಲಿ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಅಗತ್ಯವಿದ್ದಲ್ಲಿ ಗಣ್ಯರ ರಕ್ಷಣೆಗೆ ಇವರು ನಿಲ್ಲುತ್ತಾರೆ ಎಂದು ಮೂಲಗಳು ತಿಳಿಸಿವೆ.
ಈ ಮಹಿಳಾ ಕಮಾಂಡೋಗಳು ವಿಐಪಿ ಭದ್ರತಾ ಕರ್ತವ್ಯಗಳು, ನಿರಾಯುಧ ಯುದ್ಧ, ದೇಹ ಪರೀಕ್ಷೆ ಹಾಗೂ ವಿಶೇಷ ಶಸ್ತ್ರಾಸ್ತ್ರಗಳ ಬಳಕೆ ಒಳಗೊಂಡ 10 ವಾರಗಳ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
2022ರ ಜನವರಿ ಎರಡನೇ ವಾರದಿಂದ 32 ಮಹಿಳಾ ಸಿಬ್ಬಂದಿಯನ್ನು ವಿಐಪಿ ಭದ್ರತಾ ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇವರೊಂದಿಗೆ ಹೆಚ್ಚಿನ ಭದ್ರತಾ ಅಪಾಯವನ್ನು ಹೊಂದಿರುವ ವ್ಯಕ್ತಿಗಳ ಭದ್ರತೆಗೂ ಮಹಿಳಾ ಕಮಾಂಡೋಗಳ ನಿಯೋಜನೆಯಾಗಲಿದೆ.
ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್ ತನ್ನ ವಿಐಪಿ ಭದ್ರತಾ ವಿಭಾಗದಲ್ಲಿ 32 ಮಹಿಳಾ ಕಮಾಂಡೋಗಳ ಮೊದಲ ತುಕಡಿಯನ್ನು ಸಿದ್ಧ ಮಾಡಿದ್ದು, ದೆಹಲಿ ಮೂಲದ ವಿವಿಐಪಿಗಳು ಹಾಗೂ ಝಡ್ ಪ್ಲಸ್ ಭದ್ರತೆ ಹೊಂದಿರುವ ವ್ಯಕ್ತಿಗಳ ಭದ್ರತೆಗೆ ನಿಯೋಜನೆಯಾಗಲಿದ್ದಾರೆ.
ಅಮಿತ್ ಷಾ, ಸೋನಿಯಾ ಗಾಂಧಿ ಕುಟುಂಬವಲ್ಲದೆ, ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಹಾಗೂ ಅವರ ಪತ್ನಿ ಗುರುಶರಣ್ ಕೌರ್ ಅವರಿಗೂ ಈ ವಿಭಾಗ ಭದ್ರತೆ ನೀಡಲಿದೆ.
ವಿಐಪಿಗಳ ಗೃಹ ರಕ್ಷಣಾ ತಂಡದ ಭಾಗವಾಗಿ ಮಹಿಳಾ ಕಮಾಂಡೋಗಳನ್ನು ನಿಯೋಜನೆ ಮಾಡಲಾಗಿದೆ. ಹಾಗೇನಾದರೂ ಈ ರಾಜಕೀಯ ವ್ಯಕ್ತಿಗಳು ಮುಂಬರುವ ಉತ್ತರ ಪ್ರದೇಶ , ಪಂಜಾಬ್ , ಉತ್ತರಾಖಂಡ್, ಮಣಿಪುರ ಹಾಗೂ ಗೋವಾ ರಾಜ್ಯಗಳ ಚುನಾವಣಾ ಪ್ರಚಾರಕ್ಕೆ ತೆರಳುವ ವೇಳೆ ಅವರಿಗೆ ಅಗತ್ಯವಿದ್ದಲ್ಲಿ ವೈಯಕ್ತಿಕ ಭದ್ರತೆಯನ್ನೂ ನೀಡಲಿದ್ದಾರೆ.
ಈ ಕಮಾಂಡೋಗಳು ಗೃಹ ರಕ್ಷಣೆಗಾಗಿ ನಿಯೋಜಿಸಲ್ಪಟ್ಟಿದ್ದ ವೇಳೆ ಮಹಿಳಾ ಸಂದರ್ಶಕರನ್ನು ಪರಿಶೀಲನೆ ಮಾಡುವುದರೊಂದಿಗೆ, ಪ್ರವಾಸದ ಸಂದರ್ಭದಲ್ಲಿ ವಿಐಪಿಗಳ ಮನೆಯ ಒಟ್ಟಾರೆ ಭದ್ರತೆಯ ಭಾಗವಾಗಿರಲಿದ್ದಾರೆ. ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಿಚಾರದಲ್ಲಿ ಅವರು ಹೆಚ್ಚಿನ ಭದ್ರತೆಯನ್ನು ಒದಗಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications