ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮೇ 12 ರ ರಾತ್ರಿ 8ಕ್ಕೆ ಭಾಷಣ

ನವದೆಹಲಿ, ಮೇ 12: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ಕುರಿತು ಪ್ರಧಾನ ಮಂತ್ರಿ ಕಾರ್ಯಾಲಯ, ''ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ'' ಎಂದು ಟ್ವೀಟ್ ಮಾಡಿದೆ.

ನಿನ್ನೆಯಷ್ಟೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು. ಒಂದು ಕಡೆ ಕೋವಿಡ್-19, ಇನ್ನೊಂದು ಕಡೆ ಆರ್ಥಿಕ ವ್ಯವಸ್ಥೆ.. ಇವೆರಡರ ಬಗ್ಗೆಯೂ ನಿನ್ನೆಯ ವಿಡಿಯೋ ಸಂವಾದದಲ್ಲಿ ಚರ್ಚೆ ಆಯಿತು.

Covid-19: PM Narendra Modi To Address Nation On May 12th 8 PM

ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ವಿಸ್ತರಣೆಗೆ ಒಲವು ತೋರಿದ್ದರೆ, ಕೆಲವರು ಲಾಕ್ ಡೌನ್ ಸಡಿಲಿಕೆಗೆ ಒತ್ತು ನೀಡಿದ್ದರು. ಕಂಟೇನ್ಮೆಂಟ್ ಝೋನ್ ಗಳಲ್ಲಿ ಮಾತ್ರ ಲಾಕ್ ಡೌನ್ ಮುಂದುವರೆಸುವ ಸಲಹೆಯೂ ನಿನ್ನೆಯ ವಿಡಿಯೋ ಕಾನ್ಫರೆನ್ಸ್ ನಲ್ಲಿ ಬಂದಿತ್ತು.

ಮೇ 17 ರಂದು ಮೂರನೇ ಹಂತದ ಲಾಕ್ ಡೌನ್ ಮುಕ್ತಾಯವಾಗಲಿದೆ. ಈ ಹಿನ್ನಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಬಹಳ ಮಹತ್ವ ಪಡೆದುಕೊಂಡಿದೆ.

ಕೊರೊನಾ ವೈರಸ್ ತಡೆಗಟ್ಟಲು ಮೇ 17 ರ ಬಳಿಕವೂ ಪ್ರಧಾನಿ ಮೋದಿ ಲಾಕ್ ಡೌನ್ ಮುಂದುವರೆಸುತ್ತಾರಾ.? ಇಲ್ಲ, ಈಗಿನ ನಿಯಮಗಳೇ ಮುಂದುವರೆಯುತ್ತಾ.? ಈ ಪ್ರಶ್ನೆಗಳಿಗೆ ಇಂದು ರಾತ್ರಿ 8 ಗಂಟೆಗೆ ಉತ್ತರ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+