ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ "ಎಚ್ಚರಿಕೆ ಗಂಟೆ" ಎಂಬುದನ್ನು ಮರೆಯುವ ಹಾಗೇ ಇಲ್ಲ; WHO

|
Google Oneindia Kannada News

ನವದೆಹಲಿ, ಡಿಸೆಂಬರ್ 29: ಕೊರೊನಾ ಸೋಂಕು ಪತ್ತೆಯಾಗಿ ವರ್ಷ ಸಮೀಪಿಸುತ್ತಿದೆ. ಈ ಒಂದು ವರ್ಷದಲ್ಲಿ ಕೊರೊನಾ ಸೋಂಕಿನಿಂದಾದ ಪರಿಣಾಮಗಳು ಇಡೀ ವಿಶ್ವವೇ ನೆನಪಿಟ್ಟುಕೊಳ್ಳಬೇಕಾದ್ದು. ಲಕ್ಷಾಂತರ ಮಂದಿಯ ಸಾವಿಗೆ ಕಾರಣವಾದ ಈ ಸೋಂಕಿನಿಂದ ಪ್ರಪಂಚವೇ ಆತಂಕಕ್ಕೆ ಒಳಗಾಗಿದೆ. ಇದೀಗ ಸೃಷ್ಟಿಯಾಗುತ್ತಿರುವ ಕೊರೊನಾ ರೂಪಾಂತರಗಳು ಮತ್ತೂ ಒಂದು ತಲೆ ನೋವಾಗಿ ಪರಿಣಮಿಸಿವೆ.

ಕೊರೊನಾ ಸೋಂಕಿಗೆ ವಿಶ್ವದಾದ್ಯಂತ ಲಸಿಕೆಗಳು ಅಭಿವೃದ್ಧಿಯಾಗುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆ ಜನರನ್ನು ಮತ್ತೆ ಭೀತಿಗೆ ದೂಡಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ಎಚ್ಚರಿಕೆಯನ್ನು ನೀಡಿದೆ. ಮುಂದೆ ಓದಿ...

"ಕೊರೊನಾ ಅಂಥ ದೊಡ್ಡ ಸಮಸ್ಯೆಯೇನಲ್ಲ"

ವಿಶ್ವದಲ್ಲಿ ಸೋಂಕು ಪತ್ತೆಯಾದ ಈ ಒಂದು ವರ್ಷದಲ್ಲಿ ಸುಮಾರು ಹದಿನೇಳು ಲಕ್ಷ ಜನರು ಸಾವನ್ನಪ್ಪಿದ್ದಾರೆ. ಆದರೆ ಕೊರೊನಾ ಸೋಂಕು ಅಂಥ ದೊಡ್ಡ ಸಮಸ್ಯೆಯಲ್ಲ. ಇದಾಗ್ಯೂ ಕೊರೊನಾ ಎಚ್ಚರಿಕೆಯ ಗಂಟೆ ಎಂಬುದನ್ನು ಮರೆಯಲೇಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಮೈಕಲ್ ರಾನ್ ಎಚ್ಚರಿಕೆ ನೀಡಿದ್ದಾರೆ.

ಕೊರೊನಾವೈರಸ್ ಮುಂದಿನ 10 ವರ್ಷಗಳ ಕಾಲ ನಮ್ಮೊಂದಿಗೆ ಇರಲಿದೆಕೊರೊನಾವೈರಸ್ ಮುಂದಿನ 10 ವರ್ಷಗಳ ಕಾಲ ನಮ್ಮೊಂದಿಗೆ ಇರಲಿದೆ

"ಎಂದಿಗೂ ಮರೆಯಬಾರದ ಎಚ್ಚರಿಕೆ"

ಎಲ್ಲವೂ ಮುಗಿದುಹೋಯಿತು ಎಂದು ನಿಟ್ಟುಸಿರುಬಿಟ್ಟು ಸುಮ್ಮನಾಗುವ ಸಮಯ ಇದಲ್ಲವೇ ಅಲ್ಲ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ, ಕೊರೊನಾ ಎಚ್ಚರಿಕೆಯ ಗಂಟೆಯಾಗಿದೆ. ನಮ್ಮ ಆರೋಗ್ಯಕ್ಕಿಂತ ಹೆಚ್ಚು ಬೇರೇನೂ ಇಲ್ಲ ಎಂಬುದನ್ನು ಮತ್ತೆ ಎಚ್ಚರಿಸುತ್ತಿದೆ ಎಂದು ಹೇಳಿದ್ದಾರೆ

 ಲಸಿಕೆ ಅಭಿವೃದ್ಧಿ ನೆಮ್ಮದಿಯ ವಿಷಯ

ಲಸಿಕೆ ಅಭಿವೃದ್ಧಿ ನೆಮ್ಮದಿಯ ವಿಷಯ

ಅತಿ ವೇಗವಾಗಿ ಈ ವೈರಸ್ ವಿಶ್ವದಾದ್ಯಂತ ಹರಡಿತು. ಭೂಮಿಯ ಪ್ರತಿ ಮೂಲೆಯ ಮೇಲೂ ಇದರ ಪರಿಣಾಮ ಗೋಚರಿಸುತ್ತಿದೆ. ಆದರೆ ಅಂದುಕೊಂಡಷ್ಟು ಇದು ದೊಡ್ಡ ವಿಷಯವೇನಲ್ಲ. ಏಕೆಂದರೆ ಇದಕ್ಕೆ ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಹಾಗೆಂದು ಮೈಮರೆತರೆ ಮುಂದಿನ ಫಲಗಳಿಗೂ ಬೆಲೆ ತೆರಬೇಕಾಗುತ್ತದೆ. ಈ ಪರಿಸ್ಥಿತಿಗೆ ಉದಾಹರಣೆ, ಕೊರೊನಾ ರೂಪಾಂತರಗಳು ಸೃಷ್ಟಿಯಾಗುತ್ತಿರುವುದು ಎಂದು ಹೇಳಿದೆ.

ಭಾರತದಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆಭಾರತದಲ್ಲಿ ಹೊಸ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ

 ಸಾವಿನ ಪ್ರಮಾಣದಲ್ಲಿ ಇಳಿಕೆ

ಸಾವಿನ ಪ್ರಮಾಣದಲ್ಲಿ ಇಳಿಕೆ

ಕಳೆದ ಒಂದು ವರ್ಷದಲ್ಲಿ ಅತಿ ಶ್ರೀಮಂತ ದೇಶಗಳನ್ನೂ ಮಂಡಿಯೂರುವಂತೆ ಮಾಡಿದೆ ಈ ಕೊರೊನಾ ಸೋಂಕು. ಜಾಗತಿಕವಾಗಿ 8 ಕೋಟಿ ಸೋಂಕಿನ ಪ್ರಕರಣಗಳಿವೆ. ಆದರೆ ಈ ಹಿಂದಿನ ಸ್ಥಿತಿಗೆ ಹೋಲಿಸಿದರೆ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದು ನೆಮ್ಮದಿಯ ವಿಷಯವಾದರೂ ಯಾವ ಕಾಲಕ್ಕೂ ಕೊರೊನಾ ಎಂಬುದು ಎಚ್ಚರಿಕೆಯ ಗಂಟೆಯಾಗಿ ಉಳಿಯಲಿದೆ ಎಂದಿದ್ದಾರೆ ಮೈಕಲ್ ರಾನ್.

English summary
Covid-19 pandemic is not necessarily the big one and it’s more of a wake-up call warned WHO emergencies chief Michael Ryan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X