ಬ್ರೆಜಿಲ್, ಅಮೆರಿಕಕ್ಕಿಂತ ಭಾರತದಲ್ಲೇ ಹೆಚ್ಚು ಕೊರೊನಾ ಕೇಸ್!
ದೆಹಲಿ, ಜುಲೈ 28: ಜಗತ್ತಿನಾದ್ಯಂತ 1.66 ಕೋಟಿ ಜನರಿಗೆ ಕೊರೊನಾ ವೈರಸ್ ತಗುಲಿದೆ. ಅದರಲ್ಲಿ ಅಮೆರಿಕ ಒಂದರಲ್ಲೇ 44 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಬ್ರೆಜಿಲ್‌ನಲ್ಲಿ 24 ಲಕ್ಷ ಕೇಸ್ ದಾಖಲಾಗಿದೆ. ಈ ಎರಡು ದೇಶಗಳಲ್ಲಿ ಪ್ರಸ್ತುತ ಹೆಚ್ಚು ಕೊವಿಡ್ ಪ್ರಕರಣಗಳು ವರದಿಯಾಗಿದೆ.
Recommended Video
ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ ಇಂದಿನ ವರದಿ ಬಳಿಕ 14 ಲಕ್ಷಕ್ಕೂ ಅಧಿಕ ಕೇಸ್ ಪತ್ತೆಯಾಗಿದೆ. ಇದೀಗ, ಹೊಸ ಕೇಸ್‌ಗಳ ಪಟ್ಟಿಯಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಎರಡೂ ದೇಶವನ್ನು ಹಿಂದಿಕ್ಕುವತ್ತಾ ಭಾರತ ಸಾಗಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 15ರ ವೇಳೆ ಅಮೆರಿಕ ಮತ್ತು ಬ್ರೆಜಿಲ್ ದೇಶಕ್ಕಿಂತ ಹೆಚ್ಚು ಕೊವಿಡ್ ಸೋಂಕಿತರು ಭಾರತದಲ್ಲಿ ಪತ್ತೆಯಾಗಲಿದ್ದಾರೆ ಎಂಬ ಆತಂಕ ಹುಟ್ಟಿಕೊಂಡಿದೆ. ಮುಂದೆ ಓದಿ....

ಕೊರೊನಾ ಕೇಸ್‌ನಲ್ಲಿ ಬ್ರೆಜಿಲ್ ಹಿಂದಿಕ್ಕಿಲಿರುವ ಭಾರತ!
ಅಮೆರಿಕದಲ್ಲಿ ದಿನವೊಂದಕ್ಕೆ ಹೆಚ್ಚು ಕೊವಿಡ್ ಸೋಂಕಿತರು ವರದಿಯಾಗುತ್ತಿದ್ದಾರೆ. ಅಮೆರಿಕ ಬಿಟ್ಟರೆ ಬ್ರೆಜಿಲ್‌ನಲ್ಲಿ ಹೆಚ್ಚು ಕೇಸ್ ಪತ್ತೆಯಾಗುತ್ತಿದೆ. ನಂತರ ಭಾರತದಲ್ಲಿ ಹೆಚ್ಚು ಸೋಂಕಿತರು ದಾಖಲಾಗುತ್ತಿದ್ದಾರೆ. ಆದರೆ, ಇನ್ನೊಂದು ವಾರದಲ್ಲಿ ಇದು ಬದಲಾಗಬಹುದು. ಬ್ರೆಜಿಲ್‌ಗಿಂತ ಭಾರತದಲ್ಲಿ ಹೆಚ್ಚು ಕೊರೊನಾ ಕೇಸ್ ವರದಿಯಾಗಲಿದೆ ಎಂದು ಅಂಕಿ ಅಂಶ ಹೇಳುತ್ತಿದೆ.

ಮುಂದಿನ ವಾರದಲ್ಲಿ ಹೆಚ್ಚು ಸೋಂಕು
ಕಳೆದ ಒಂದು ವಾರದಲ್ಲಿ ಬ್ರೆಜಿಲ್‌ನಲ್ಲಿ ಒಟ್ಟು 3.2 ಲಕ್ಷ ಕೊರೊನಾ ಕೇಸ್ ದಾಖಲಾಗಿದೆ. ಭಾರತದಲ್ಲಿ ಒಂದು ವಾರದಲ್ಲಿ 3.1 ಲಕ್ಷ ಕೊವಿಡ್ ಸೋಂಕಿತರು ವರದಿಯಾಗಿದ್ದಾರೆ. ಆದರೆ, ಮುಂದಿನ ಒಂದು ವಾರದಲ್ಲಿ ಇದು ಉಲ್ಟಾ ಆಗಲಿದೆ. ಬ್ರೆಜಿಲ್‌ಗಿಂತ ಹೆಚ್ಚು ಕೇಸ್ ಭಾರತದಲ್ಲಿ ವರದಿಯಾಗಲಿದೆ ಎಂದು ಹೇಳಲಾಗಿದೆ. ನಿನ್ನೆ ಭಾರತದಲ್ಲಿ 47,704 ಮಂದಿಗೆ ಸೋಂಕು ತಗುಲಿದೆ.

ಅಮೆರಿಕವನ್ನು ಹಿಂದಕ್ಕೆ ತಳ್ಳಲಿದೆ ಭಾರತ!
ಇನ್ನೆರಡು ವಾರದಲ್ಲಿ ಅಮೆರಿಕಕ್ಕಿಂತ ಭಾರತದಲ್ಲಿ ಹೆಚ್ಚು ಕೊವಿಡ್ ಕೇಸ್ ದಾಖಲಾಗಲಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ 15ರ ಸಮಯಕ್ಕೆ ಭಾರತದಲ್ಲಿ ದಿನವೊಂದಕ್ಕೆ ಸುಮಾರು 90 ಸಾವಿರ ಸೋಂಕಿತರು ವರದಿಯಾಗುವ ಸಾಧ್ಯತೆ ಇದೆ. ಅಷ್ಟೊತ್ತಿಗೆ ಅಮೆರಿಕದಲ್ಲಿ ದಿನವೊಂದಕ್ಕೆ 85 ಸಾವಿರ ಸೋಂಕು ದಾಖಲಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಾವಿನ ಸಂಖ್ಯೆ ಎಷ್ಟಿದೆ?
ಹೊಸ ಕೇಸ್‌ಗಳ ಸಂಖ್ಯೆಯಲ್ಲಿ ಮಾತ್ರವಲ್ಲ ಸಾವಿನ ಸಂಖ್ಯೆಯಲ್ಲು ಭಾರತ ಮುಂದೆ ಸಾಗುತ್ತಿದೆ. ಅಮೆರಿಕದಲ್ಲಿ ಇದುವರೆಗೂ ಕೊರೊನಾದಿಂದ 150,450 ಮಂದಿ ಸಾವನ್ನಪ್ಪಿದ್ದಾರೆ. ಬ್ರೆಜಿಲ್‌ನಲ್ಲಿ 87,737 ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಒಟ್ಟು ಸಾವಿನ ಸಂಖ್ಯೆ 33,461ಕ್ಕೆ ಏರಿಕೆಯಾಗಿದೆ.












Click it and Unblock the Notifications