ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಉಳಿದುಕೊಳ್ಳಲಿರುವ ಹೋಟೆಲ್‌ನಲ್ಲಿ ಏನೇನಿರಲಿದೆ? ಒಂದು ದಿನದ ವೆಚ್ಚವೆಷ್ಟು?

|
Google Oneindia Kannada News

ನವದೆಹಲಿ, ಫೆಬ್ರವರಿ 24: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಸೋಮವಾರ ಆಗಮಿಸಿದ್ದಾರೆ. ಅವರು ದೆಹಲಿಯ ಸರ್ದಾರ್ ಪಟೇಲ್ ಮಾರ್ಗದಲ್ಲಿನ ಅತ್ಯಂತ ಐಷಾರಾಮಿ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ 'ಚಾಣಕ್ಯ' ಎಂದು ಕರೆಯಲಾಗುವ ಎರಡು ಬೆಡ್‌ರೂಂಗಳ ಗ್ರ್ಯಾಂಡ್ ಪ್ರೆಸಿಡೆನ್ಶಿಯಲ್ ಸೂಟ್‌ನಲ್ಲಿ ಉಳಿದುಕೊಳ್ಳಲಿದ್ದಾರೆ.

ಇದು ಒಂದು ಖಾಸಗಿ ಡ್ರಾಯಿಂಗ್ ರೂಮ್, ಒಂದು ಖಾಸಗಿ ಟೆರೇಸ್, ಜಿಮ್, ಖಾಸಗಿ ಪ್ರವೇಶ ಭಾಗವಿರುವ 12 ಆಸನಗಳ ಭೋಜನ ಸ್ಥಳ, ಅತಿ ವೇಗದ ಎಲಿವೆಟರ್, ಅತ್ಯುನ್ನತ ಭದ್ರತಾ ವ್ಯವಸ್ಥೆ ಮತ್ತು ವಿಶೇಷ ಪರಿಣತ ಬಾಣಸಿಗ ವ್ಯವಸ್ಥೆಯನ್ನು ಒಳಗೊಂಡಿದೆ. ಸೂಟ್‌ನಲ್ಲಿ ಬೃಹತ್ ಸ್ನಾನದ ಕೊಠಡಿ, ಮಿನಿ ಸ್ಪಾ ಕೂಡ ಇದೆ.

ಬೀಫ್ ಪ್ರಿಯ ಡೊನಾಲ್ಡ್ ಟ್ರಂಪ್‌ಗೆ ಭಾರತದಲ್ಲಿ ಸಂಪೂರ್ಣ ಸಸ್ಯಾಹಾರಿ ಊಟಬೀಫ್ ಪ್ರಿಯ ಡೊನಾಲ್ಡ್ ಟ್ರಂಪ್‌ಗೆ ಭಾರತದಲ್ಲಿ ಸಂಪೂರ್ಣ ಸಸ್ಯಾಹಾರಿ ಊಟ

ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಡೊನಾಲ್ಡ್ ಟ್ರಂಪ್, ಈ ವಿಲಾಸಿ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿರುವ ಅಮೆರಿಕದ ನಾಲ್ಕನೆ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ. ಜಾರ್ಜ್ ಡಬ್ಲ್ಯೂ ಬುಷ್, ಬಿಲ್ ಕ್ಲಿಂಟನ್, ಬರಾಕ್ ಒಬಾಮ ಮತ್ತು ಜಿಮ್ಮಿ ಕಾರ್ಟನ್ ಅವರಿಗೆ ಈ ಹೋಟೆಲ್ ಆತಿಥ್ಯ ನೀಡಿತ್ತು.

ಕ್ಲಿಂಟನ್ ಪ್ಲಾಟರ್, ಒಬಾಮ ಪ್ಲಾಟರ್

ಕ್ಲಿಂಟನ್ ಪ್ಲಾಟರ್, ಒಬಾಮ ಪ್ಲಾಟರ್

ಬಿಲ್ ಕ್ಲಿಂಟನ್ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪಂಚತಾರಾ ಹೋಟೆಲ್, ವಿಶೇಷವಾಗಿ ಕ್ಲಿಂಟನ್ ಪ್ಲಾಟರ್ ಮತ್ತು ಚೆಲ್ಸಾ ಪ್ಲಾಟರ್ ಅನ್ನು (ವಿಶೇಷ ಆಹಾರ) ಸಿದ್ಧಪಡಿಸಿತ್ತು. ಅದೇ ರೀತಿ ಬರಾಕ್ ಒಬಾಮ ಅವರ ಭಾರತದ ಎರಡು ಬಾರಿ ಭೇಟಿ ವೇಳೆ ಕೂಡ ಹೋಟೆಲ್ 'ಒಬಾಮ ಪ್ಲಾಟರ್' ಸಿದ್ಧಪಡಿಸಿತ್ತು. ಅಂದಿನಿಂದ ಈ ಆಹಾರ ಶೈಲಿಯೂ ಹೋಟೆಲ್‌ನ ಮೆನುವಿನಲ್ಲಿ ಸೇರಿಕೊಂಡಿದ್ದು, ಈ ಪ್ಲಾಟರ್‌ಗಳು ಹೋಟೆಲ್‌ನ ಗ್ರಾಹಕರ ಮೆಚ್ಚಿನ ಖಾದ್ಯವಾಗಿವೆ.

ಟ್ರಂಪ್ ಪ್ಲಾಟರ್‌ಗೆ ಸಿದ್ಧತೆ

ಟ್ರಂಪ್ ಪ್ಲಾಟರ್‌ಗೆ ಸಿದ್ಧತೆ

ಈ ಹೋಟೆಲ್ ಈಗ 'ಟ್ರಂಪ್ ಪ್ಲಾಟರ್' ಅನ್ನೂ ತಯಾರಿಸಲು ಸಿದ್ಧತೆ ನಡೆಸಿದೆ. ಜತೆಗೆ ಭಾರತೀಯ ಶೈಲಿಯಲ್ಲಿ ವಿಶೇಷ ಭಕ್ಷ್ಯವೊಂದನ್ನು ಸಿದ್ಧಪಡಿಸುತ್ತಿದೆ. ಭಾರತ ಮತ್ತು ವಿದೇಶದ ಅನೇಕ ಪ್ರಮುಖ ಸೆಲೆಬ್ರಿಟಿಗಳ ಹೆಸರಿನಲ್ಲಿಯೂ ಹೊಸ ಹೊಸ ಖಾದ್ಯಗಳನ್ನು, ತಯಾರಿಸಿರುವ ಐಟಿಸಿ ಮೌರ್ಯದ ಬುಖಾರಾ ರೆಸ್ಟೋರೆಂಟ್ ತಂದೂರಿ ಭಕ್ಷ್ಯಗಳಿಗೆ ಹೆಸರುವಾಸಿ. ಈ ರೆಸ್ಟೋರೆಂಟ್‌ನಲ್ಲಿ ಆಹಾರ ಸೇವಿಸಿದ ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್, ಬಿಲ್ ಕ್ಲಿಂಟನ್, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ಚಿತ್ರಕಲಾವಿದ ಎಂ.ಎಫ್ ಹುಸೇನ್ ಮುಂತಾದವರ ಚಿತ್ರಗಳೂ ಇಲ್ಲಿವೆ.

ಟ್ರಂಪ್ ಭೇಟಿ: ಸ್ಥಳೀಯ ಮಂಗಗಳಿಂದ ರಕ್ಷಣೆಗೆ ಭಾರೀ ಪೊಲೀಸ್ ನಿಯೋಜನೆಟ್ರಂಪ್ ಭೇಟಿ: ಸ್ಥಳೀಯ ಮಂಗಗಳಿಂದ ರಕ್ಷಣೆಗೆ ಭಾರೀ ಪೊಲೀಸ್ ನಿಯೋಜನೆ

ಒಂದು ರಾತ್ರಿಯ ವೆಚ್ಚ ಎಂಟು ಲಕ್ಷ ರೂ

ಒಂದು ರಾತ್ರಿಯ ವೆಚ್ಚ ಎಂಟು ಲಕ್ಷ ರೂ

ಸುಮಾರು 4,600 ಚದರ ಅಡಿ ವಿಸ್ತೀರ್ಣ ಇರುವ ಚಾಣಕ್ಯ ಸೂಟ್‌ನಲ್ಲಿ ಒಂದು ರಾತ್ರಿ ಕಳೆಯಲು ತಗುಲುವ ವೆಚ್ಚ 8 ಲಕ್ಷ ರೂಪಾಯಿ. ಎರಡು ವಾರಕ್ಕೂ ಮುಂಚಿನಿಂದಲೇ ಎನ್‌ಎಸ್‌ಜಿ ಕಮಾಂಡೋಗಳು ಇಲ್ಲಿನ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇರಿಸಿದ್ದಾರೆ. ಪ್ರತಿ ದಿನವೂ ಹೋಟೆಲ್‌ನ ಪ್ರತಿ ಅಂತಸ್ತುಗಳಲ್ಲಿಯೂ ಪರಿಶೀಲನೆ ನಡೆಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ವಾಸ್ತವ್ಯದ ಸಂದರ್ಭದಲ್ಲಿ ಇಲ್ಲಿ ಇತರೆ ಅತಿಥಿಗಳ ವಾಸ್ತವ್ಯಕ್ಕೆ ಅವಕಾಶವಿಲ್ಲ. ಹೀಗಾಗಿ ಹೋಟೆಲ್‌ನಲ್ಲಿರುವ ಎಲ್ಲ 438 ಕೊಠಡಿಗಳನ್ನು ಕೂಡ ಟ್ರಂಪ್ ಅವರಿಗಾಗಿಯೇ ಕಾಯ್ದಿರಿಸಲಾಗಿದೆ.

ಗಣ್ಯರ ವಾಸ್ತವ್ಯ

ಗಣ್ಯರ ವಾಸ್ತವ್ಯ

ದಲೈ ಲಾಮಾ, ರೋಜರ್ ಫೆಡರರ್, ವ್ಲಾಡಿಮಿರ್ ಪುಟಿನ್, ಅರ್ನಾಲ್ಡ್ ಶಾಷ್ನೆಗರ್, ಮಿಕ್ ಜ್ಯಾಗರ್ ಮತ್ತು ಟೈಗರ್ ವುಡ್ ಸೇರಿದಂತೆ ಅನೇಕ ಗಣ್ಯರು ಈ ಹೋಟೆಲ್‌ನಲ್ಲಿ ಅತಿಥಿಗಳಾಗಿ ಉಳಿದುಕೊಂಡಿದ್ದಾರೆ. ಅತ್ಯಾಕರ್ಷಕ ವಿನ್ಯಾಸವಿರುವ ಈ ಹೋಟೆಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ಸೋಮವಾರ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಚೀನಾ ಯೋಜನೆಗೆ ಅಮೆರಿಕ-ಭಾರತ ಪ್ರತಿತಂತ್ರ: ಬ್ಲೂ ಡಾಟ್ ಯೋಜನೆ ಬಗ್ಗೆ ಮಾತುಕತೆಚೀನಾ ಯೋಜನೆಗೆ ಅಮೆರಿಕ-ಭಾರತ ಪ್ರತಿತಂತ್ರ: ಬ್ಲೂ ಡಾಟ್ ಯೋಜನೆ ಬಗ್ಗೆ ಮಾತುಕತೆ

English summary
The Chanakya suit of ITC Maurya where US President Donald Trump will stay on Monday costs around Rs 8 lakh per night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X