• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Today's Update: ಮಹಾರಾಷ್ಟ್ರ-ತಮಿಳುನಾಡಿನಲ್ಲಿ ಹೆಚ್ಚು, ದೆಹಲಿಯಲ್ಲಿ ಎಷ್ಟು ಕೇಸ್?

|

ದೆಹಲಿ, ಜೂನ್ 24: ಮಹಾರಾಷ್ಟ್ರದಲ್ಲಿಂದು 3890 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ 208 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,42,900ಕ್ಕೆ ಏರಿಕೆಯಾಗಿದೆ. ಈವರೆಗೂ 6739 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

   SSLC Exam : ಪರೀಕ್ಷೆ ಬರೆಯುವ ಮುನ್ನ‌ ವಿದ್ಯಾರ್ಥಿಗಳು ಈ ನಿಯಮಗಳನ್ನು ಪಾಲಿಸಲೇಬೇಕು| Precautions for SSLC Exam

   ತಮಿಳುನಾಡಿನಲ್ಲಿ ಇಂದು 2,865 ಹೊಸ ಕೋವಿಡ್-19 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 67,468ಕ್ಕೆ ಏರಿಕೆಯಾಗಿದೆ.

   ಕರ್ನಾಟಕದಲ್ಲಿ 10 ಸಾವಿರ ಗಡಿ ದಾಟಿದ ಕೊರೊನಾ ಕೇಸ್

   ಕರ್ನಾಟಕದಲ್ಲಿಂದು 397 ಜನರಿಗೆ ಕೊರೊನಾ ವೈರಸ್ ಪತ್ತೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,118 ಗಡಿ ದಾಟಿದೆ. ಇಂದಿನ ವರದಿ ಪೈಕಿ ಬೆಂಗಳೂರಿನಲ್ಲಿ 173 ಜನರಿಗೆ ಕೊರೊನಾ ವೈರಸ್ ಮಹಾಮಾರಿ ವಕ್ಕರಿಸಿದೆ.

   ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪಾಸಿಟಿವ್ ಸಂಖ್ಯೆ 70,000 ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 3,788 ಕೇಸ್‌ಗಳು ಪತ್ತೆಯಾಗಿವೆ. 2,365 ಮಂದಿ ಸಾವನ್ನಪ್ಪಿದ್ದಾರೆ.

   -ಕೇರಳದಲ್ಲಿ ಇಂದು ಅತಿ ಹೆಚ್ಚು 152 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದು ಸತತ ಆರನೇ ದಿನವಾಗಿದ್ದು, ಕೇರಳವು ದಿನಕ್ಕೆ 100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. ರಾಜ್ಯದಲ್ಲಿ 3,603 ಪ್ರಕರಣಗಳಿದ್ದು, ಅದರಲ್ಲಿ 1,691 ಪ್ರಕರಣಗಳು ಸಕ್ರಿಯವಾಗಿವೆ: ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್

   -ಹಿಮಾಚಲ ಪ್ರದೇಶದಲ್ಲಿ ಕೋವಿಡ್-19 ಪಾಸಿಟಿವ್ ಕೇಸ್‌ಗಳ ಸಂಖ್ಯೆ 778ಕ್ಕೆ ತಲುಪಿದ್ದು, ಇದರಲ್ಲಿ 318 ಸಕ್ರಿಯ ಪ್ರಕರಣಗಳಿವೆ.

   -ಜಮ್ಮು ಕಾಶ್ಮೀರದಲ್ಲಿಂದು 186 ಮಂದಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಸೋಂಕಿನ ಸಂಖ್ಯೆ 6422ಕ್ಕೆ ಏರಿಕೆಯಾಗಿದೆ.

   -ಗುಜರಾತ್‌ನಲ್ಲಿ ಹೊಸದಾಗಿ 572 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29001ಕ್ಕೆ ಜಿಗಿದಿದೆ.

   -ಅಸ್ಸಾಂನಲ್ಲಿ ಹೊಸದಾಗಿ 226 ಜನರಿಗೆ ಕೊವಿಡ್ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿನ ಸಂಖ್ಯೆ 6282ಕ್ಕೆ ಏರಿಕೆಯಾಗಿದೆ.

   -ಪಂಜಾಬ್‌ನಲ್ಲಿ ಇಂದು 230 ಕೊರೊನಾ ವೈರಸ್ ಕೇಸ್ ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4627ಕ್ಕೆ ಏರಿಕೆಯಾಗಿದೆ.

   -ಮುಂಬೈನ ಧಾರವಿ ಪ್ರದೇಶದಲ್ಲಿ 10 ಹೊಸ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಪ್ರದೇಶದ ಒಟ್ಟು ಪ್ರಕರಣಗಳ ಸಂಖ್ಯೆ 2,199ಕ್ಕೆ ಏರಿಕೆಯಾಗಿದೆ. ಇದರಲ್ಲಿ 1,018 ಸಕ್ರಿಯ ರೋಗಿಗಳು.

   English summary
   3890 new cases of COVID-19 reported in Maharashtra today and 2865 new COVID19 cases reported in Tamil Nadu today.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X