ಕೊರೊನಾ: ನೆಟ್ಟಿಗರ ಹೃದಯ ಗೆದ್ದ ತಂದೆ ಮಗನ ಭಾವನಾತ್ಮಕ ಪೋಸ್ಟ್

ನವ ದೆಹಲಿ, ಮಾರ್ಚ್ 18: ಕೊರೊನಾ ಭೀತಿ ಆನ್‌ಲೈನ್‌ನಲ್ಲಿ ದೇವರ ದರ್ಶನ ಮಾಡಿಸಿದೆ, ವಿಡಿಯೋ ಕಾಲ್ ಮೂಲಕ ಮದುವೆ ಮಾಡಿಸಿದೆ. ಅವುಗಳ ಜೊತೆಗೆ ಇದೀಗ ತಂದೆ ಮತ್ತು ಮಗ ಹತ್ತಿರ ಇದ್ದರೂ, ದೂರದಿಂದಲೇ ಮಾತನಾಡುವ ಹಾಗೆ ಮಾಡಿದೆ.

ಕೊರೊನಾ ಬಾರದಂತೆ ಮುಂಜಾಗ್ರತೆವಹಿಸುವುದು ಮುಖ್ಯವಾಗಿದೆ. ಒಬ್ಬರಿಂದ ಮತ್ತೊಬ್ಬ ವ್ಯಕ್ತಿ ಅಂತರದಲ್ಲಿ ಇರುವುದು ಒಳ್ಳೆಯದು ಎಂದು ವೈದ್ಯರು ತಿಳಿಸಿದ್ದಾರೆ. ಇದೀಗ ಆ ಕಾರಣದಿಂದ ಮಗ ತನ್ನ ತಂದೆಯ ಜೊತೆಗೆ ಕಿಟಕಿಯ ಆಚೆ ಕೂತು ಫೋನ್‌ನಲ್ಲಿ ಮಾತನಾಡಿದ್ದಾನೆ.

ಈ ಪೋಸ್ಟ್ ಅನ್ನು ಪೇಸ್ ಬುಕ್ ನಲ್ಲಿ ಸ್ಯಾಂಡಿ ಹಲ್ಮಿಟನ್ ಎಂಬುವವರು ಹಂಚಿಕೊಂಡಿದ್ದಾರೆ. ಪ್ರತಿ ದಿನ ತಂದೆಯನ್ನು ನೋಡಲು ಆತನ ಮಗ ಬರುತ್ತಿದ್ದನಂತೆ. ಆದರೆ, ಕೊರೊನಾ ವೈರಸ್ ಭೀತಿಯಿಂದ ಮನೆಗೆ ಬಂದ ಮಗ ಹೊರಗಿನಿಂದ ಕರೆ ಮಾಡಿ ತಂದೆಯನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಿಕೊಂಡಿದ್ದಾನೆ. ಕೊರೊನಾ ವಿಶ್ವಾದ್ಯಂತ ಹರಡುತ್ತಿದ್ದು, ತನ್ನ ತಂದೆಗೆ ಬಾರಬಾರದು ಎಂದು ಎಚ್ಚರಿಕೆ ವಹಿಸುತ್ತಿದ್ದಾನಂತೆ.

Coronavirus: Son Talking To Father Through Window The Pic Become Viral

ಸೋಷಿಯಲ್ ಮೀಡಿಯಾದಲ್ಲಿ ಕೊರೊನಾ ಬಗ್ಗೆ ಬಂದಿರುವ ಈ ಪೋಸ್ಟ್ ಅನೇಕರ ಗಮನ ಸೆಳೆದಿದೆ. ಈ ಭಾವನಾತ್ಮಕ ಪೋಸ್ಟ್ ನೆಟ್ಟಗರು ಹೃದಯ ಗೆದ್ದಿದೆ. ಈ ಪೋಸ್ಟ್ 145k ಲೈಕ್, 20k ಕಾಮೆಂಟ್ಸ್ ಹಾಗೂ 850k ಶೇರ್ ಪಡೆದುಕೊಂಡಿದೆ. ತಂದೆಯ ಬಗ್ಗೆ ಮಗ ಇಟ್ಟಿರುವ ಪ್ರೀತಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+