ವಿಡಿಯೋ:ದೆಹಲಿ ಆಸ್ಪತ್ರೆ ಕಟ್ಟಡದಿಂದ ಹಾರಲು ಯತ್ನಿಸಿದ ಕೊರೊನಾ ಸೋಂಕಿತ

ನವದೆಹಲಿ, ಏಪ್ರಿಲ್.19: ಕೊರೊನಾ ವೈರಸ್ ಸೋಂಕು ಹರಡುವಿಕೆ ನಡುವೆ ನವದೆಹಲಿಯಲ್ಲಿ ಸೋಂಕಿತನೊಬ್ಬ ಆಸ್ಪತ್ರೆಯ ಕಟ್ಟಡದಿಂದಲೇ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ನವದೆಹಲಿ ಸಫ್ದರ್ ಜಂಗ್ ಆಸ್ಪತ್ರೆಯ 3ನೇ ಫ್ಲೋರ್ ಏರಿದ ಕೊರೊನಾ ವೈರಸ್ ಸೋಂಕಿತನೊಬ್ಬ ಅಲ್ಲಿಂದ ಹಾರಿ ಪ್ರಾಣ ಬಿಡುವುದಾಗಿ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಕೊನೆಗೆ ಆಸ್ಪತ್ರೆ ಸಿಬ್ಬಂದಿ ಆತನ ಮನವೊಲಿಸಿ ಕಾಪಾಡಿದ್ದಾರೆ.

Coronavirus Patient Attempt To Suicide In Delhi Safdarjung Hospital

ವೈದ್ಯಕೀಯ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸೋಂಕಿತ ವ್ಯಕ್ತಿಯು ತನ್ನ ಹತ್ತಿರ ತೆರಳಿದರೆ ಕೈಗಳನ್ನು ಕಟ್ ಮಾಡಿಕೊಳ್ಳುವುದಾಗಿ ಆವಾಜ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವೈದ್ಯಕೀಯ ಸಿಬ್ಬಂದಿ ಮೇಲೆ ಉಗುಳಿದ ಸೋಂಕಿತ:

ನವದೆಹಲಿ ಸಫ್ದರ್ ಜಂಗ್ ಆಸ್ಪತ್ರೆಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ಕೊರೊನಾ ವೈರಸ್ ಸೋಂಕಿತನನ್ನು ರಕ್ಷಿಸಲು ತೆರಳಿದಾಗ ವೈದ್ಯಕೀಯ ಸಿಬ್ಬಂದಿಯ ಮೇಲೆಯೇ ಉಗುಳಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಆತ್ಮಹತ್ಯೆಗೆ ಯತ್ನಿಸಿದ ಸೋಂಕಿತನನ್ನು ರಕ್ಷಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+