ಕೊರೊನಾ ವೈರಸ್‌ ಆರ್ಭಟದ ನಡುವೆಯೂ ಒಂದು ಶುಭ ಸುದ್ದಿ

ನವ ದೆಹಲಿ, ಮೇ 30: ಕೊರೊನಾ ವೈರಸ್‌ ತನ್ನ ಆಕ್ರಮಣವನ್ನು ಇನ್ನೂ ಕಡಿಮೆ ಮಾಡಿಲ್ಲ. ಆದರೆ, ಅದರ ನಡುವೆಯೂ ಭಾರತೀಯರಿಗೆ ಒಂದು ಶುಭ ಸುದ್ದಿ ಬಂದಿದೆ.

ಭಾರತದಲ್ಲಿ 24 ಗಂಟೆಗಳಲ್ಲಿ 11,264 ಸೋಂಕಿತರು ಗುಣಮುಖರಾಗಿದ್ದಾರೆ. ಇದು ನಿಜಕ್ಕೂ ಸಮಾಧಾನದ ಸಂಗತಿಯಾಗಿದೆ. ಒಂದು ದಿನದಲ್ಲಿ 7,964 ಹೊಸ ಪ್ರಕರಣಗಳು ಬಂದಿದ್ದು, ಗುಣಮುಖರ ಸಂಖ್ಯೆ ಬಹಳ ಹೆಚ್ಚಿದೆ.

ಈವರೆಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,73,763ಕ್ಕೆ ಏರಿಕೆ ಕಂಡಿದೆ. ಇದರಲ್ಲಿ 82,369 ಮಂದಿ ಗುಣಮುಖರಾಗಿದ್ದಾರೆ. 4971 ಮಂದಿ ಸಾವನಪ್ಪಿದ್ದಾರೆ.

Coronavirus In India: 11,264 Recoveries In The Last 24 Hours

ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಸೋಂಕಿತರು ಇದ್ದು, ರಾಜ್ಯ ಗುಣಮುಖರಾದವರ ಸಂಖ್ಯೆಯಲ್ಲಿಯೂ ಮೊದಲ ಸ್ಥಾನದಲ್ಲಿ ಇದೆ. 62,228 ಒಟ್ಟು ಸೋಂಕಿತರ ಸಂಖ್ಯೆ ಇದ್ದು, ಇದರಲ್ಲಿ 26,997 ಜನರು ಗುಣವಾಗಿದ್ದಾರೆ.

ತಮಿಳುನಾಡಿನಲ್ಲಿ 20,246 ಸೋಂಕಿತರು ಇದ್ದು, ಈ ಪೈಕಿ 11,313 ಗುಣಮುಖರಾಗಿದ್ದಾರೆ. ಗುಜರಾತ್‌ನಲ್ಲಿ 15,934 ಸೋಂಕಿತರ ಪೈಕಿ 8,611 ಮಂದಿ ಗುಣಮುಖರಾಗಿದ್ದಾರೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 17,386 ಇದ್ದು, 7,846 ಜನರು ಗುಣಮುಖರಾಗುತ್ತಿದ್ದಾರೆ.

ಇನ್ನು, ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,781 ಇದೆ. ಇದರಲ್ಲಿ 894 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+