ಭಾರತದಲ್ಲಿ ಕೊರೊನಾದಿಂದ ಹಿರಿಯರಿಗೆ ಹೆಚ್ಚು ಅಪಾಯ, ಅಂಕಿ-ಅಂಶ ಬಿಚ್ಚಿಟ್ಟ ಸತ್ಯ

ದೆಹಲಿ, ಏಪ್ರಿಲ್ 19: ಭಾರತದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 500ರ ಗಡಿ ದಾಟಿದೆ. ಇಂದು ಬೆಳಿಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ ಪ್ರಕಾರ, ದೇಶದಲ್ಲಿ ಒಟ್ಟು 507 ಜನರು ಮೃತಪಟ್ಟಿದ್ದಾರೆ.

ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 1334 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 27 ಜನರು ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಪ್ರಸ್ತುತ ದೇಶದಲ್ಲಿ ಒಟ್ಟು 15712 ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 12974 ಕೇಸ್‌ಗಳು ಚಾಲ್ತಿಯಲ್ಲಿದೆ. 2230 ಜನರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.

ಇಷ್ಟು ಕೇಸ್‌ಗಳ ಕುರಿತು ಸೂಕ್ಷ್ಮವಾಗಿ ಗಮನಿಸದಾಗ ಹಿರಿಯ ನಾಗರಿಕರಿಗೆ ಕೊರೊನಾ ಬಹಳ ಡೇಂಜರ್ ಎಂದು ಕಂಡು ಬರುತ್ತಿದೆ. ಹೌದು, ಭಾರತದಲ್ಲಿ ಇದುವರೆಗೂ ಸತ್ತವರ ಪೈಕಿ ಶೇಕಡಾ 75ರಷ್ಟು ಜನರು ಹಿರಿಯ ನಾಗರಿಕರು. ಇನ್ನುಳಿದಂತೆ ಬೇರೆ ಯಾವ ವಯಸ್ಸಿನವರಿಗೆ ಕೊರೊನಾ ವಿಲನ್ ಆಗಿದೆ.? ಮುಂದೆ ಓದಿ...

75ರಷ್ಟು ರೋಗಿಗಳು 60 ವಯಸ್ಸು ದಾಟಿದವರು

75ರಷ್ಟು ರೋಗಿಗಳು 60 ವಯಸ್ಸು ದಾಟಿದವರು

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಇದುವರೆಗೂ ಭಾರತದಲ್ಲಿ ಕೊರೊನಾದಿಂದ ಬಲಿಯಾದವರ ಪೈಕಿ, ಶೇಕಡಾ 75ರಷ್ಟು ಜನ 60 ವಯಸ್ಸು ದಾಟಿದವರು. ಅದರಲ್ಲಿ 83 ರಷ್ಟು ಜನರಿಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದವರು ಎಂದು ತಿಳಿದು ಬಂದಿದೆ.

ಎಲ್ಲ ವಯಸ್ಸಿನವರಿಗೆ ಸೋಂಕು ಅಪಾಯ

ಎಲ್ಲ ವಯಸ್ಸಿನವರಿಗೆ ಸೋಂಕು ಅಪಾಯ

ಆರೋಗ್ಯ ಇಲಾಖೆಯ ನೀಡಿದ ಅಂಕಿ ಅಂಶದ ಪ್ರಕಾರ, ಕೊರೊನಾದಿಂದ ಸಾವನ್ನಪ್ಪಿರುವ ಶೇಕಡಾ 42.2ರಷ್ಟು ಜನರು 75 ವರ್ಷ ದಾಟಿದವರು. ಶೇಕಡಾ 33.1ರಷ್ಟು ಜನರು 60-75 ವರ್ಷದೊಳಗಿನವರು. ಶೇಕಡಾ 10.3 ರಷ್ಟು ಜನರು 45-60 ವರ್ಷ ವಯಸ್ಸಿನವರು. ಹಾಗೂ 14.4 ರಷ್ಟು ಜನ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಮಾಹಿತಿ ಲಭ್ಯವಾಗಿದೆ.

ತಬ್ಲಿಘಿಗಳ ಪಾಲು ಹೆಚ್ಚಿದೆ

ತಬ್ಲಿಘಿಗಳ ಪಾಲು ಹೆಚ್ಚಿದೆ

ಆರೋಗ್ಯ ಇಲಾಖೆಯ ಅಂಕಿ ಅಂಶದ ಪ್ರಕಾರ, ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಶೇಕಡಾ 21.8ರಷ್ಟು ಜನರು ತಬ್ಲಿಘಿ ಜಮಾತ್‌ ಜೊತೆ ಸಂಪರ್ಕ ಹೊಂದಿದ್ದವರು ಎಂದು ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

ರಾಜ್ಯಾವಾರು ಲೆಕ್ಕ ನೋಡುವುದಾದರೆ

ರಾಜ್ಯಾವಾರು ಲೆಕ್ಕ ನೋಡುವುದಾದರೆ

ರಾಜ್ಯವಾರು ಲೆಕ್ಕದಲ್ಲಿ ತಬ್ಲಿಘಿಗಳ ಸಂಖ್ಯೆ ನೋಡುವುದಾರೇ, ತಮಿಳುನಾಡಿನ ಒಟ್ಟು ಸಂಖ್ಯೆಯಲ್ಲಿ ಶೇಕಡಾ 84ರಷ್ಟು ಕೇಸ್ ಈ ಧಾರ್ಮಿಕ ಸಭೆಯಿಂದ ಬಂದಿದೆ. ದೆಹಲಿಯಲ್ಲಿ ಶೇಕಡಾ 63 ರಷ್ಟು, ತೆಲಂಗಾಣದಲ್ಲಿ ಶೇಕಡಾ 79ರಷ್ಟು, ಉತ್ತರ ಪ್ರದೇಶದಲ್ಲಿ ಶೇಕಡಾ 59ರಷ್ಟು, ಆಂಧ್ರ ಪ್ರದೇಶದಲ್ಲಿ ಶೇಕಡಾ 61 ರಷ್ಟು. ಅಸ್ಸಾಂನಲ್ಲಿ ಶೇಕಡಾ 91 ರಷ್ಟು, ಅಂಡಮಾನ್ ಮತ್ತು ನಿಕೊಬಾರ್‌ನಲ್ಲಿ ಶೇಕಡಾ 83 ರಷ್ಟು ಸೋಂಕಿತರು ತಬ್ಲಿಘಿಗಳ ಸಂಪರ್ಕದಲ್ಲಿದ್ದವರು ಎಂದು ವರದಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+