ಲಾಕ್‌ಡೌನ್ ಮಾಡಿದ್ದರಿಂದ ಭಾರತದಲ್ಲಿ ತಪ್ಪಿತು ಬಹುದೊಡ್ಡ ಅನಾಹುತ
ದೆಹಲಿ, ಮೇ 23: ಕೊರೊನಾ ವೈರಸ್ ಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡದಂತೆ ನೋಡಿಕೊಳ್ಳಲು ಸಾಮಾಜಿಕ ಅಂತರ ಕಾಪಾಡಬೇಕು. ಪ್ರಸ್ತುತ ಕೊರೊನಾ ವೈರಸ್‌ಗೆ ರಾಷ್ಟ್ರಗಳು ಕಂಡುಕೊಂಡಿರುವ ಔಷಧ ಇದೊಂದೇ.
Recommended Video
ಹಾಗಾಗಿ, ತಿಂಗಳುಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಜಗತ್ತಿನ ಹಲವು ರಾಷ್ಟ್ರಗಳು ಲಾಕ್‌ಡೌನ್ ಜಾರಿ ಮಾಡಿತ್ತು. ಇದರ ಪರಿಣಾಮ ಹೊಸ ಕೇಸ್ ಹಾಗೂ ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಮಟ್ಟಿಗೆ ನಿಯಂತ್ರಣ ಸಾಧಿಸಿದೆ.
ಭಾರತದಲ್ಲಂತೂ ಲಾಕ್‌ಡೌನ್ ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇಂಡಿಯಾದಲ್ಲಿ ಒಂದು ವೇಳೆ ಲಾಕ್‌ಡೌನ್ ಅನುಸರಿಸಿದಿದ್ದರೇ ದೊಡ್ಡ ಅನಾಹುತಕ್ಕೆ ಸಾಕ್ಷಿಯಾಗಬೇಕಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಮುಂದೆ ಓದಿ....

ಲಾಕ್‌ಡೌನ್‌ನಿಂದ ತಪ್ಪಿತು ಅನಾಹುತ
ಭಾರತದಲ್ಲಿ ಒಂದು ವೇಳೆ ಲಾಕ್‌ಡೌನ್ ಕಟ್ಟುನಿಟ್ಟಾಗಿ ಅನುಸರಿಸದೇ ಹೋಗಿದ್ದರೆ, ಇಷ್ಟೊತ್ತಿಗೆ 78 ಸಾವಿರದವರೆಗೂ ಸಾವು ನೋಡಬೇಕಿತ್ತು ಎಂದು ಶುಕ್ರವಾರ ಮಾಹಿತಿ ನೀಡಿದೆ. ಲಾಕ್‌ಡೌನ್ ಪಾಲಿಸಿದ್ದರಿಂದ ದೇಶದಲ್ಲಿ ಸೋಂಕು ಹೆಚ್ಚು ಹರಡಿಲ್ಲ. ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಭಾರತ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ ಎಂದು ತಿಳಿಸಿದ್ದಾರೆ.

29 ಲಕ್ಷಕ್ಕೂ ಹೆಚ್ಚು ಸೋಂಕು ಸಾಧ್ಯತೆ!
ಜಗತ್ತಿನಲ್ಲಿ ಅತಿ ದೊಡ್ಡ ಸಂಖ್ಯೆಯ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೆ ಹೋಗಿದ್ದರೆ, ಬೇರೆ ದೇಶಗಳಿಂದ ಹೆಚ್ಚು ಕೇಸ್ ನಮ್ಮಲ್ಲಿ ದಾಖಲಾಗಬೇಕಿತ್ತು ಎನ್ನುವುದರಲ್ಲಿ ಯಾವುದೇ ಸಂಶಯ ಇರುತ್ತಿರಲಿಲ್ಲ. ಲಾಕ್‌ಡೌನ್ ಇಲ್ಲವಾಗಿದ್ದರೆ ದೇಶದಲ್ಲಿ ಇಷ್ಟೊತ್ತಿಗೆ 14 ಲಕ್ಷದಿಂದ 29 ಲಕ್ಷದವರೆಗೂ ಜನರಿಗೆ ಸೋಂಖು ತಗುಲಿರುತ್ತಿತ್ತು ಎಂದು ಸರ್ಕಾರ ಅಂದಾಜು ಹಾಕಿದೆ.

ಜೂನ್ ಮಧ್ಯದಲ್ಲಿ ಭೀಕರ ಹಂತಕ್ಕೆ ತಲುಪಬಹುದು!
ಭಾರತದಲ್ಲಿ ಜನವರಿ ತಿಂಗಳು ಮೊದಲ ಕೇಸ್ ಪತ್ತೆಯಾದರು, ಮಾರ್ಚ್ ತಿಂಗಳಲ್ಲಿ ಹೆಚ್ಚು ಪರಿಣಾಮ ಬೀರಿತ್ತು. ಅಲ್ಲಿಂದ ಮೂರು ತಿಂಗಳು ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿತ್ತು. ಈಗ ಲಾಕ್‌ಡೌನ್‌ನಿಂದ ಸ್ವಲ್ಪ ರಿಲ್ಯಾಕ್ಸ್ ಗೆ ಬಂದಿದ್ದರೂ ಸೋಂಕು ಹರುಡುವುದು ಮಾತ್ರ ಕಮ್ಮಿಯಾಗಿಲ್ಲ. ಜೂನ್ 22 ರಿಂದ 29ರವರೆಗೂ ಕೊರೊನಾ ವೈರಸ್ ಹರಡುವಿಕೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಸರ್ಕಾರವೇ ಅಭಿಪ್ರಾಯಪಟ್ಟಿದೆ.

ಒಂದೇ ದಿನದಲ್ಲಿ 6000 ಕೇಸ್ ಪತ್ತೆ
ನಿನ್ನೆ ಭಾರತದಲ್ಲಿ ಒಂದೇ ದಿನ 60088 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. 148 ಜನರು ಮೃತಪಟ್ಟಿದ್ದರು. ಈವರೆಗಿನ ಅಂಕಿ ಅಂಶಗಳಲ್ಲಿ ಒಂದೇ ದಿನದಲ್ಲಿ ಹೆಚ್ಚು ಕೇಸ್ ವರದಿಯಾಗಿದ್ದು ಇದೇ ಮೊದಲು. ಕಳೆದ ಹದಿನೈದು ದಿನದಿಂದ ಪ್ರತಿದಿನದ ಹೊಸ ಕೇಸ್ ಲೆಕ್ಕಾಚಾರ ನೋಡುತ್ತಿದ್ದರು ಸರಾಸರಿ 5 ಸಾವಿರ ದಾಟುತ್ತಿದೆ.

ಮಾರ್ಚ್ 24ರಿಂದ ಲಾಕ್‌ಡೌನ್
ಮಾರ್ಚ್ 24 ರಿಂದ ಭಾರತದಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಇದುವರೆಗೂ ನಾಲ್ಕು ಹಂತದಲ್ಲಿ ಲಾಕ್‌ಡೌನ್ ಅನುಸರಿಸಲಾಗಿದೆ. 1,22,656ಕ್ಕೆ ಹೆಚ್ಚು ಕೇಸ್ ವರದಿಯಾಗಿದೆ. 3,634 ಜನರು ಮೃತಪಟ್ಟಿದ್ದಾರೆ. 51,000ಕ್ಕೂ ಅಧಿಕ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.












Click it and Unblock the Notifications