ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ವಿಶ್ವ ಗ್ರಾಹಕರ ದಿನ'ಕ್ಕೆ ನರೇಂದ್ರ ಮೋದಿ ಶುಭ ಹಾರೈಕೆ

|
Google Oneindia Kannada News

ನವದೆಹಲಿ, ಮಾರ್ಚ್ 15: ವಿಶ್ವ ಗ್ರಾಹಕ ದಿನ(ಮಾ.15)ಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. 'ಪ್ರತಿ ಅರ್ಥ ವ್ಯವಸ್ಥೆಯಲ್ಲೂ ಗ್ರಾಹಕರ ಪಾತ್ರ ಅತ್ಯಂತ ಮಹತ್ವದ್ದು' ಎಂದು ಅವರು ಟ್ವೀಟ್ ಮಾಡಿದ್ದಾರೆ.

"ವಿಶ್ವ ಗ್ರಾಹಕರ ದಿನದ ಶುಭಾಶಯಗಳು. ಪ್ರತಿ ಅರ್ಥವ್ಯವಸ್ಥೆಯಲ್ಲೂ ಗ್ರಾಹಕ ಅತಂತ ಮಹತ್ವದ ಪಾತ್ರ ವಹಿಸುತ್ತಾನೆ. ಭಾರತೀಯ ಸರ್ಕಾರ ಕೇವಲ ಗ್ರಾಹಕರ ರಕ್ಷಣೆಗಷ್ಟೇ ಅಲ್ಲ, ಅವರ ಸಮೃದ್ಧಿಗೂ ಬದ್ಧವಾಗಿದೆ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಗ್ರಾಹಕ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಗ್ರಾಹಕ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ

ಮಾರ್ಚ್ 15 ನ್ನು ಪ್ರತಿ ವರ್ಷವೂ 'ವಿಶ್ವ ಗ್ರಾಹಕರ ದಿನ'ವನ್ನಾಗಿ ಆಚರಿಸಲಾಗುತ್ತದೆ. ಅಮೆರಿಕ ಕಾಂಗ್ರೆಸ್ ನಲ್ಲಿ 1962 ಮಾರ್ಚ್ 15 ರಂದು ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ಈ ದಿನವನ್ನು ಆಚರಿಸಲು ಆಗಿನ ಅಧ್ಯಕ್ಷ ಜಾನ್ ಎಫ್.ಕೆನಡಿ ಮುನ್ನುಡಿ ಬರೆದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಆದರೆ ಅಧಿಕೃತವಾಗಿ ಗ್ರಾಹಕರ ದಿನ ಆಚರಣೆಯಾಗುವುದಕ್ಕೆ ಶುರುವಾಗಿದ್ದು 1983 ಮಾರ್ಚ್ 15 ರಿಂದ. ಪ್ರತಿ ವರ್ಷವೂ ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ ವಿನೂತನ ಥೀಮ್ ಇಟ್ಟುಕೊಂಡು, ಈ ದಿನ ಆಚರಿಸಲಾಗುತ್ತದೆ. ಈ ವರ್ಷದ ಗ್ರಾಹಕ ದಿನದ ಥೀಮ್, 'ಡಿಜಿಟಲ್ ಮಾರುಕಟ್ಟೆಯನ್ನು ಸುಂದರಗೊಳಿಸುವುದು'( 'Making Digital Marketplaces Fairer'). ಭಾರತದಲ್ಲಿ ರಾಷ್ಟ್ರೀಯ ಗ್ರಾಹಕರ ದಿನವನ್ನು ಪ್ರತಿವರ್ಷ ಡಿಸೆಂಬರ್ .24 ರಂದು ಆಚರಿಸಲಾಗುತ್ತದೆ.

English summary
Prime Minister Narendra Modi on Thursday greeted the nation on the occasion of World Consumer Rights Day and said that consumer plays an important role in the economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X