ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಮಂಡೋಲಿ ಜೈಲಿಗೆ ಸುಕೇಶ್ ಚಂದ್ರಶೇಖರ್ ದಂಪತಿ ಶಿಫ್ಟ್

|
Google Oneindia Kannada News

ನವದೆಹಲಿ, ಆಗಸ್ಟ್ 23: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಕೇಶ್ ಚಂದ್ರಶೇಖರ್ ಅವರನ್ನು ತಿಹಾರ್ ಜೈಲಿನಿಂದ ದೆಹಲಿಯ ಮಂಡೋಲಿ ಜೈಲಿಗೆ ಸ್ಥಳಾಂತರಿಸಲಾಗಿದೆ.

ಸುಪ್ರೀಂ ಕೋರ್ಟ್ ಮಂಗಳವಾರ ಆದೇಶ ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಜೊತೆಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಆರೋಪಿಯಾಗಿದ್ದಾರೆ.

ತಿಹಾರ್ ಜೈಲಿನಲ್ಲಿ ತಮಗೆ ಜೀವ ಬೆದರಿಕೆ ಇದೆಯೆಂದು ಸುಕೇಶ್ ಚಂದ್ರಶೇಖರ್ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಸುಕೇಶ್ ಅವರ ಪತ್ನಿ ಲೀನಾ ಮರಿಯಾ ಪೌಲ್ ಅವರನ್ನೂ ಆತನ ಜೊತೆಗೆ ಸ್ಥಳಾಂತರ ಮಾಡುವಂತೆ ಕೋರ್ಟ್ ಆದೇಶಿಸಿದೆ.

Conman Sukesh Chandrashekhar shifted from Tihar Jail to Mandoli Jail

ನ್ಯಾಯಮೂರ್ತಿಗಳಾದ ಎಸ್‌ಆರ್ ಭಟ್ ಮತ್ತು ಸುಧಾಂಶು ಧುಲಿಯಾ ಅವರ ಪೀಠ ಈ ಆದೇಶ ನೀಡಿದೆ.

"ಪೀಠದ ಮುಂದೆ ಇರಿಸಲಾದ ದಾಖಲೆಗಳನ್ನು ಮತ್ತು ಜೂನ್ 17, 2022 ರಂದು ನೀಡಿದ ಆದೇಶವನ್ನು ಪರಿಗಣಿಸಿದ ನಂತರ, ಜೂನ್ 23, 2022 ರಂದು ಪ್ರತಿವಾದಿಯು ನೀಡಿದ ಹೇಳಿಕೆಯ ಪ್ರಕಾರ, ಅರ್ಜಿದಾರರನ್ನು ಮಂಡೋಲಿ ಜೈಲಿಗೆ ಸ್ಥಳಾಂತರಿಸಬೇಕು ಎಂದು ಈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ" ಎಂದು ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ತಿಹಾರ್ ಜೈಲಿನಲ್ಲಿ ಸುಕೇಶ್ ಮತ್ತು ಅವರ ಪತ್ನಿಯನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದ್ದು, ಅವರ ಸುರಕ್ಷತೆಗಾಗಿ ಲಂಚ ನೀಡಬೇಕಾಯಿತು ಎಂದು ಸುಕೇಶ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಬಸಂತ್ ಉಲ್ಲೇಖಿಸಿದ್ದಾರೆ.

ಜೈಲು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಿಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.

Conman Sukesh Chandrashekhar shifted from Tihar Jail to Mandoli Jail

ಆದರೆ, ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸೂರ್ಯಪ್ರಕಾಶ್ ವಿ ರಾಜು, ಸುಕೇಶ್ ಜೈಲಿನಿಂದ ಸುಲಿಗೆ ದಂಧೆ ನಡೆಸುತ್ತಿದ್ದರು ಎಂದು ಆರೋಪಿಸಿದರು. ಸುಕೇಶ್ ಅವರು ಜೈಲು ಸ್ಥಳಾಂತರಕ್ಕೆ ಬಯಸುತ್ತಿದ್ದಾರೆ. ಅವರು ಮತ್ತೊಂದು ಜೈಲಿನಿಂದ ತನ್ನ ಅಪರಾಧವನ್ನು ಮುಂದುವರೆಸಬಹುದು ಎಂದು ರಾಜು ವಾದಿಸಿದರು. ಈ ಸಂಬಂಧ ಎಫ್‌ಐಆರ್‌ ಕೂಡ ದಾಖಲಾಗಿದೆ ಎಂದು ರಾಜು ನ್ಯಾಯಾಲಯಕ್ಕೆ ತಿಳಿಸಿದರು.

200 ಕೋಟಿ ರು ವಂಚಕ ಸುಕೇಶನಿಗಿದೆ ಸೆಲೆಬ್ರಿಟಿಗಳ ಭಾರಿ ಲಿಂಕ್: ಎನ್‌ಸಿಬಿ200 ಕೋಟಿ ರು ವಂಚಕ ಸುಕೇಶನಿಗಿದೆ ಸೆಲೆಬ್ರಿಟಿಗಳ ಭಾರಿ ಲಿಂಕ್: ಎನ್‌ಸಿಬಿ

ಸುಕೇಶ್ ಚಂದ್ರಶೇಖರ್ ಮತ್ತು ಅವರ ಪತ್ನಿ ಲೀನಾ ಮರಿಯಾ ಪೌಲ್ ಹಲವರಿಗೆ ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಆರೋಪದ ಮೇಲೆ ಜೈಲು ಸೇರಿದ್ದಾರೆ.

ಪ್ರಕರಣದ ಫ್ಲ್ಯಾಶ್ ಬ್ಯಾಕ್:
ಸುಕೇಶ್ ಚಂದ್ರಶೇಖರ್ ಅವ್ಯವಹಾರ ಪ್ರಕರಣದ ತನಿಖೆಯನ್ನ ಇಡಿ (Enforcement Directorate) ನಡೆಸುತ್ತಿದೆ. ರಾನ್‌ಬಾಕ್ಸಿ ಎಂಬ ಔಷಧ ಕಂಪನಿಯ ಮಾಜಿ ಮಾಲಿಕ ಶಿವಿಂದರ್ ಸಿಂಗ್ ಕುಟುಂಬದಿಂದ ಸುಲಿಗೆ ಮಾಡಿದ 200 ಕೋಟಿ ರೂ ಹಣದಲ್ಲಿ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಫರ್ನಾಂಡಿಸ್‌ಗೆ 5.71 ಕೋಟಿ ರೂ ಮೌಲ್ಯದ ಉಡುಗೊರೆಗಳನ್ನ ಕೊಟ್ಟಿದ್ದನು ಎಂಬುದು ಇಡಿ ಆರೋಪ. ಹೀಗಾಗಿ, ಪ್ರಕರಣದ ತನಿಖೆ ಭಾಗವಾಗಿ ನಟಿಯ ಹೆಸರಿನಲ್ಲಿದ್ದ 7 ಕೋಟಿ ರೂ ಮೊತ್ತದಷ್ಟು ಫಿಕ್ಸೆಡ್ ಡೆಪಾಸಿಟ್ ಹಣವನ್ನು ಇಡಿ ಫ್ರೀಜ್ ಮಾಡಿರುವುದು ತಿಳಿದುಬಂದಿದೆ.

ರಾನ್‌ಬಾಕ್ಸಿ ಸಂಸ್ಥೆಯ ಶಿವಿಂದರ್ ಸಿಂಗ್ ಅವರು ಬೇರೊಂದು ಹಣ ಅವ್ಯವಹಾರ ಪ್ರಕರಣದಲ್ಲಿ 2019ರಲ್ಲಿ ಜೈಲು ಸೇರಿದ್ದರು. ಅವರನ್ನು ಬಿಡಿಸಿಕೊಡುವ ಭರವಸೆ ನೀಡಿದ ಸುಕೇಶ್ ಚಂದ್ರಶೇಖರ್, ಶಿವಿಂದರ್ ಅವರ ಪತ್ನಿ ಅದಿತಿ ಸಿಂಗ್ ಅವರಿಂದ 200 ಕೋಟಿ ರೂ ಪಡೆದಿದ್ದರೆನ್ನಲಾಗಿದೆ. ಈ ಸಂಬಂಧ ಅದಿತಿ ಸಿಂಗ್ ನೀಡಿದ ದೂರಿನ ಮೇರೆಗೆ ಸುಕೇಶ್ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಾ ಹೋದಂತೆ ಸುಕೇಶ್ ಜೊತೆ ಸಂಬಂಧ ಇರುವವರ ಜಾಡು ಸಿಗತೊಡಗಿತು. ನಟಿ ಜಾಕೆಲಿನ್ ಫರ್ನಾಂಡಿಸ್ ಅವರೂ ಇದರಲ್ಲಿ ಭಾಗಿಯಾಗಿದ್ದು ಕಂಡು ಬಂತು. ಕಳೆದ ಡಿಸೆಂಬರ್‌ನಲ್ಲಿ ಪಿಎಂಎಲ್‌ಎ ಕಾಯ್ದೆ ಅಡಿ ಆರೋಪಪಟ್ಟಿ ದಾಖಲಿಸಿದ ಇಡಿ, ಜಾಕ್ವೆಲಿನ್ ಸೇರಿದಂತೆ ಕೆಲ ಬಾಲಿವುಡ್ ನಟ ನಟಿಯರನ್ನು ಪ್ರಕರಣದ ಸಾಕ್ಷಿದಾರರೆಂದು ತೋರಿಸಿದೆ.

English summary
Conman Sukesh Chandrashekhar and his wife Leena Maria Paul shifted from Tihar Jail to Mandoli Jail in Delhi. Supreme Court ordered. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X