ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೂಲ್ ಕಿಟ್ ಪ್ರಕರಣ: ದೆಹಲಿ ಟ್ವಿಟ್ಟರ್ ಕಚೇರಿ ಮೇಲೆ ಪೊಲೀಸರ ದಾಳಿ

|
Google Oneindia Kannada News

ನವದೆಹಲಿ, ಮೇ 24: ಕಾಂಗ್ರೆಸ್ ಟೂಲ್ ಕಿಟ್ ಪ್ರಕರಣದಲ್ಲಿ ನಂಟು ಹೊಂದಿರುವ ಆರೋಪದ ಹಿನ್ನೆಲೆ ನವದೆಹಲಿಯ ಟ್ವಿಟರ್ ಕಚೇರಿ ಮೇಲೆ ದೆಹಲಿ ಪೊಲೀಸರ ವಿಶೇಷ ಪಡೆಯು ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಿತು.

ನವದೆಹಲಿಯ ಲಾಡೋ ಸರೈನ್ ನಲ್ಲಿ ಇರುವ ಟ್ವಿಟ್ಟರ್ ಕಚೇರಿಯಲ್ಲಿ ಸಿಬ್ಬಂದಿ ಇರುವುದನ್ನು ದೃಢಪಡಿಸಿಕೊಂಡ ದೆಹಲಿ ಪೊಲೀಸರ ವಿಶೇಷ ಪಡೆಯು ಸೋಮವರಾ ಸಂಜೆ ವೇಳೆಯಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ಯಾವುದೇ ವಾರೆಂಟ್ ಹೊಂದಿರಲಿಲ್ಲ ಎಂದು ತಿಳಿದು ಬಂದಿದೆ.

ಮೋದಿ ಹೆಸರು ಹಾಳು ಮಾಡಲೆಂದೇ ಕಾಂಗ್ರೆಸ್ ಟೂಲ್‌ಕಿಟ್ ತಯಾರಿಸಿದೆ: ಸಂಬಿತ್ ಪಾತ್ರಮೋದಿ ಹೆಸರು ಹಾಳು ಮಾಡಲೆಂದೇ ಕಾಂಗ್ರೆಸ್ ಟೂಲ್‌ಕಿಟ್ ತಯಾರಿಸಿದೆ: ಸಂಬಿತ್ ಪಾತ್ರ

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಸುದ್ದಿಗೋಷ್ಠಿ ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಸರನ್ನು ಹಾಳು ಮಾಡುವುದಕ್ಕಾಗಿ ಪ್ರತಿಪಕ್ಷಗಳು ಟೂಲ್ ಕಿಟ್ ಅನ್ನು ಸಿದ್ಧಪಡಿಸಿದೆ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಕಳೆದ ವಾರ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿದಂತೆ ಹಲವು ನಾಯಕರ ವಿರುದ್ಧ ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿತ್ತು.

Congress Toolkit Case: Delhi Police Conducts Raid At Twitter Office

ದೆಹಲಿ ಟ್ವಿಟರ್ ಕಚೇರಿ ದಾಳಿ ಹಿಂದಿನ ಕಥೆ:

ಕಾಂಗ್ರೆಸ್ ಟೂಲ್ ಕಿಟ್ ಪ್ರಕರಣದಲ್ಲಿ ನಂಟು ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಟ್ವಿಟರ್ ಕಚೇರಿಗೆ ನೋಟಿಸ್ ನೀಡುವುದಕ್ಕಾಗಿ ದೆಹಲಿ ಪೊಲೀಸರ ತಂಡವು ತೆರಳಿತ್ತು. ಈ ವೇಳೆ ಟ್ವಿಟ್ಟರ್ ಕಂಪನಿಯ ಎಂ.ಡಿ ನೀಡಿರುವ ಉತ್ತರಗಳು ಅಸ್ಪಷ್ಟವಾಗಿರುವ ಹಿನ್ನೆಲೆ ಯಾರಿಗೆ ನೋಟಿಸ್ ನೀಡುವುದು ಎಂಬುದನ್ನು ಪತ್ತೆ ಮಾಡಲು ಈ ದಾಳಿ ಅನಿವಾರ್ಯವಾಗಿತ್ತು ಎಂದು ಮೂಲಗಳಿಂದ ತಿಳಿದು ಬಂದಿದೆ.

English summary
Congress Toolkit Case: Delhi Police Conducts Raid At Twitter Office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X