ರಾಹುಲ್ ಗಾಂಧಿ ಟ್ವೀಟ್ ಗೆ ಅಮಿತ್ ಶಾ ಖಡಕ್ ಪ್ರತಿಕ್ರಿಯೆ
Recommended Video
ನವದೆಹಲಿ, ಜೂನ್ 22: "ಇದು ಹೊಸ ಭಾರತ" ಎಂದು ಸೇನಾ ಶ್ವಾನಗಳು ಯೋಗ ಮಾಡುತ್ತಿರುವ ಚಿತ್ರವನ್ನು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

"ಇಂದು ಅವರ ಋಣಾತ್ಮಕತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಮೊದಲಿಗೆ ತ್ರಿವಳಿ ತಲಾಖ್ ಮಸೂದೆಯನ್ನು ವಿರೋಧಿಸುವ ಮೂಲಕ ಋಣಾತ್ಮಕ ಮನಸ್ಥಿತಿಯನ್ನು ತೋರಿಸಿಕೊಟ್ಟರು, ಈಗ ಯೋಗದಿನದಂದು ನಮ್ಮ ಸೇನೆಯನ್ನು ಅವಮಾನ ಮಾಡಿದರು(ಮತ್ತೊಮ್ಮೆ)" ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ರಾಹುಲ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ರಾಜನಾಥ್ ಸಿಂಗ್ "ನಿಮ್ಮ ಮೇಲಿನ ಗೌರವದಿಂದಲೇ ಹೇಳುತ್ತಿದ್ದೇನೆ ರಾಹುಲ್ ಜೀ. ಇವುಗಳು ನಮ್ಮ ಭಾರತೀಯ ಸೇನೆಯ ಹೆಮ್ಮೆಯ ಸದಸ್ಯರು. ನಮ್ಮ ದೇಶದ ಭದ್ರತೆಗಾಗಿ ಇವು ಕೊಡುಗೆ ನೀಡುತ್ತಿವೆ" ಎಂದಿದ್ದಾರೆ.
ಅಂತಾಷ್ಟ್ರೀಯ ಯೋಗದಿನದ ನಿಮಿತ್ತ ಸೇನೆಯ ಶ್ವಾನದಳ ಯೋಗಾಸನ ಮಾಡುತ್ತಿರುವ ಚಿತ್ರ ಎಲ್ಲೆಡೆ ವೈರಲ್ ಆಗಿತ್ತು. ಈ ಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿದ್ದ ರಾಹುಲ್ ಗಾಂಧಿ, "ಇದು ಹೊಸ ಭಾರತ" ಎಂದು ವ್ಯಂಗ್ಯವಾಗಿ ಟೀಕಿಸಿದ್ದರು.












Click it and Unblock the Notifications